Asianet Suvarna News Asianet Suvarna News

ಲಿಂಗಾಯತರ ಕಡೆಗಣೆಸಿದ ಕಾಂಗ್ರೆಸ್; ಕೆಪಿಸಿಸಿ ವಕ್ತಾರ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಸಂಕೇತ ಏಣಗಿ

ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲಿಯೇ ಕಾಂಗ್ರೆಸ್‌ನಲ್ಲಿ ಲಿಂಗಾಯತರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಮನನೊಂದು ಕೆಪಿಸಿಸಿ ವಕ್ತಾರ ಸಂಕೇತ್ ಏಣಗಿ ಅವರು ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

Congress Neglect of Lingayats KPCC Spokesperson Sanket Yenagi resignation submission sat
Author
First Published Mar 17, 2024, 8:32 PM IST

ಬೆಂಗಳೂರು (ಮಾ.17): ಈಗಾಗಲೇ ದೇಶದಲ್ಲಿ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಬಹುತೇಕ ಅಭ್ಯರ್ಥಿಗಳ ಪಟ್ಟಿಯನ್ನೂ ಎಲ್ಲ ಪಕ್ಷಗಳು ಬಿಡುಗಡೆ ಮಾಡಿವೆ. ಹೀಗಿರುವಾಗ ಆಡಳಿತ ಪಕ್ಷಕ್ಕೆ ಸೆಡ್ಡು ಹೊಡೆದಿರುವ ಕಾಂಗ್ರೆಸ್ ಪಕ್ಷದಲ್ಲಿಯೇ ಈಗ ಆಂತರಿಕ ಕೆಸರೆರಚಾಟ ಆರಂಭವಾಗಿದೆ. ಕಾಂಗ್ರೆಸ್‌ನಿಂದ ರಾಜ್ಯದಲ್ಲಿ ಲಿಂಗಾಯತರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಂಕೇತ್ ಏಣಗಿ ಅವರು ತಮ್ಮ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ ಗೆ ಮತ್ತೆ ಲಿಂಗಾಯತ ಕಡೆಗಣನೆ ಆರೋಪ ಕೇಳಿಬಂದಿದೆ. ಕಾಂಗ್ರೆಸ್‌ ಪಕ್ಷದೊಳಗೆ ಲಿಂಗಾಯತ ಎಂಬ ಕಾರಣಕ್ಕೆ ಕಡೆಗಣನೆ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲರನ್ನೂ ಪರಿಗಣನೆ ಮಾಡಲಾಗುತ್ತಿದೆ. ಆದರೆ, ಲಿಂಗಾಯತರು ಎನ್ನುವ ಕಾರಣಕ್ಕೆ ಕಡೆಗಣನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಂಕೇತ್ ಏಣಗಿ ಅವರು ವಕ್ತಾರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂಕೇತ್ ಅವರು ಕೆಪಿಸಿಸಿ ವಕ್ತಾರ ಹಾಗೂ ಕಾಂಗ್ರೆಸ್ ‌ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ಸಲ್ಲಿಸಿದ್ದಾರೆ.

ಬಿಜೆಪಿಯ ಹಿಂದುತ್ವ ಉಳಿಬೇಕು, ಕುಟುಂಬ ರಾಜಕಾರಣ ಅಳಿಬೇಕು; ಇದಕ್ಕಾಗಿ ಬಂಡಾಯ ಸ್ಪರ್ಧೆಗಿಳೀಬೇಕು: ಕೆ.ಎಸ್. ಈಶ್ವರಪ್ಪ!

ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸಂಕೇತ್ ಏಣಗಿ ಅವರು ರಾಜಿನಾಮೆ ಸಲ್ಲಿಸಿದ್ದಾರೆ. ವ್ಯವಸ್ಥಿತವಾಗಿ ಲಿಂಗಾಯತರನ್ನ ಕಡೆಗಣಿಸಲಾಗಿತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವಾಗ ಅತಿಹೆಚ್ಚಿನ ಬೆಂಬಲವನ್ನು ಲಿಂಗಾಯತ ಸಮುದಾಯದಿಂದ ಪಡೆಯಲಾಗಿದೆ. ಆದರೆ, ಕಾಂಗ್ರೆಸ್‌ ಸರ್ಕಾರ ಅದಿಕಾರಕ್ಕೆ ಬಂದ ನಂತರ ಲಿಂಗಾಯತ ಸಮುದಾಯದ ಕಾಂಗ್ರೆಸ್‌ ಕಾರ್ಯಕರ್ತರನ್ನ ಕಡೆಗಣಿಸಲಾಗಿದೆ ಎಂದು ಸಂಕೇತ್ ಏಣಗಿ ಹೇಳಿದ್ದಾರೆ.

ಮುಂದುವರೆದು, ನಾನು ಯಾವುದೇ ನಾಯಕರ ಮನೆ ಬಾಗಿಲು ತಟ್ಟಲು ಹೋಗಲಿಲ್ಲ. ಅಲ್ಲದೇ ನಾನು ನೇರ ನಿಷ್ಠುರ ವೀರಶೈವ ಲಿಂಗಾಯತ ಎಂಬ ಕಾರಣಕ್ಕೆ ಪಕ್ಷದೊಳಗೆ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿದೆ. ಅಧಿಕಾರದ ಗದ್ದುಗೆ ಏರುತ್ತಿದ್ದಂತೆ ಪಕ್ಷದ ನಾಯಕರಿಗೆ ಮಾನವೀಯತೆಯೇ ಮರೆಯಾಗಿ ಹೋಗಿದೆ. ಹೀಗಾಗಿ ಈ ಉಸಿರುಗಟ್ಟುವ ವಾತಾವರಣದಲ್ಲಿ ಇರಲಾರೆ ಎಂದು ಸಂಕೇತ್ ಏಣಗಿ ಅವರು ಅಳಲು ತೋಡಿಕೊಂಡಿದ್ದಾರೆ.

ಚುನಾವಣೆ ಸಮೀಪ ಕಾಂಗ್ರೆಸ್‌ಗೆ ಹಿನ್ನಡೆ, ಪಕ್ಷ ತೊರೆದ ಮಾಜಿ ಸಚಿವ ಹರಾಕ್ ಸಿಂಗ್ ರಾವತ್ ಸೊಸೆ!

ಇನ್ನು ಕನ್ನಡ ರಂಗಭೂಮಿಯ ದಂತಕಥೆ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಹಾಗೂ ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಶತಾಯುಷಿ ಡಾ. ಏಣಗಿ ಬಾಳಪ್ಪ ಅವರ ಮೊಮ್ಮಗನಾದ ನಾನು ಸುಸಂಸ್ಕೃತ ಮನೆತನದ ಹಿನ್ನೆಲೆಯಲ್ಲಿ ಬೆಳೆದಿದ್ದೇನೆ. ವೃತ್ತಿಯಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯದ ವಕೀಲನಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಸಿದ್ಧಾಂತ ಒಪ್ಪಿ ಪಕ್ಷ ಸೇರಿದ್ದೆನು. ಜೊತೆಗೆ, ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಕಾಂಗ್ರೆಸ್‌ ಪಕ್ಷದ ತತ್ವ, ಸಿದ್ದಾಂತ ಹಾಗೂ ನಿಲುಗಳನನ್ನು ಮತ್ತು ನಾಯಕರನ್ನು ಪ್ರತಿಪಾದಿಸಿದ್ದೇನೆ. ಇದರಿಂದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ತಮಗೂ ಹಾಗೂ ಪಕ್ಷದ ಹಲವು ನಾಯಕರು ಇದರ ಅನುಕೂಲ ಪಡೆದುಕೊಂಡಿದ್ದಾರೆ. ಆದರೆ, ಈಗ ಕಡೆಗಣನೆ ಮಾಡಲಾಗುತ್ತಿದೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

Follow Us:
Download App:
  • android
  • ios