Asianet Suvarna News Asianet Suvarna News

ಬಾದಾಮಿ ದೂರವಾದರೆ ಸಿದ್ದುಗೆ ಜನ ಕಾಪ್ಟರ್‌ ಕೊಡಿಸ್ತಾರಂತೆ: ಜಮೀರ್‌

ಸಿದ್ದರಾಮಯ್ಯನವರು ಗೆದ್ದ ಬಳಿಕ ಬಾದಾಮಿಯಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರು ಇಲ್ಲೆ ಇದ್ದರೆ ಮತ್ತಷ್ಟುಅಭಿವೃದ್ಧಿಯಾಗುತ್ತದೆ ಎಂದು ಅಲ್ಲಿನ ಜನರೇ ಹೇಳುತ್ತಿದ್ದು, ಸ್ಪರ್ಧೆಗೆ ಒತ್ತಡ ಹಾಕುತ್ತಿದ್ದಾರೆ.

congress mla zameer ahmed khan visits siddaramaiahs badami constituemcy gvd
Author
First Published Nov 20, 2022, 11:34 AM IST

ಬಾಗಲಕೋಟೆ (ನ.20): ಸಿದ್ದರಾಮಯ್ಯನವರು ಗೆದ್ದ ಬಳಿಕ ಬಾದಾಮಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರು ಇಲ್ಲೆ ಇದ್ದರೆ ಮತ್ತಷ್ಟುಅಭಿವೃದ್ಧಿಯಾಗುತ್ತದೆ ಎಂದು ಅಲ್ಲಿನ ಜನರೇ ಹೇಳುತ್ತಿದ್ದು, ಸ್ಪರ್ಧೆಗೆ ಒತ್ತಡ ಹಾಕುತ್ತಿದ್ದಾರೆ. ಕ್ಷೇತ್ರಕ್ಕೆ ಬಂದು ಹೋಗಲಿಕ್ಕೆ ದೂರವಾಗುತ್ತಿದ್ದರೆ ತಾವೇ ಹೆಲಿಕಾಪ್ಟರ್‌ ಕೊಡಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ, ಬಂದು ಹೋಗಲಿಕ್ಕೆ ದೂರವಾಗುತ್ತದೆ ಎಂದು ಸಿದ್ದರಾಮಯ್ಯನವರೇ ಕ್ಷೇತ್ರ ಬಿಡುತ್ತಿದ್ದಾರೆ ಎಂದು ಮಾಜಿ ಸಚಿವ ಜಮೀರ್‌ ಅಹ್ಮದ್‌ ತಿಳಿಸಿದ್ದಾರೆ. 

ಸಿದ್ದರಾಮಯ್ಯನವರು ಬಾದಾಮಿಯಿಂದ ಸ್ಪರ್ಧಿಸಲು ಚಿಮ್ಮನಕಟ್ಟಿ ಕುಟುಂಬದ ವಿರೋಧವಿಲ್ಲ. ಸಿದ್ದುಗೆ ಬಾದಾಮಿಯಿಂದ ಸ್ಪರ್ಧಿಸುವಂತೆ ಚಿಮ್ಮನಕಟ್ಟಿಯವರ ಪುತ್ರ ರಾಜು (ಭೀಮಸೇನ) ಅವರೇ ಒತ್ತಾಯ ಮಾಡುತ್ತಿದ್ದಾರೆ ಎಂದರು. ಕಳೆದ ಬಾರಿ ಸಿದ್ದುಗೆ ಚಿಮ್ಮನಕಟ್ಟಿಯವರು ಕ್ಷೇತ್ರ ಬಿಟ್ಟು ಕೊಟ್ಟಿದ್ದರು. ನಮ್ಮ ಸರ್ಕಾರ ಇದ್ದಿದ್ದರೆ ಅವರಿಗೆ ಏನಾದರೂ ಸ್ಥಾನಮಾನ ಕೊಡುತ್ತಿದ್ದರು ಎಂದು ಹೇಳಿದರು.

ಎಚ್‌ಡಿಕೆ ಸಂಪರ್ಕದಲ್ಲಿದ್ದಾರೆ, ಆದ್ರೆ ನಾನು ಬಿಜೆಪಿ ಬಿಡಲ್ಲ: ರಮೇಶ್‌ ಜಾರಕಿಹೊಳಿ

ಸಿದ್ದರಾಮಯ್ಯ ಸ್ಪರ್ಧೆಗೆ ಜನರಿಂದ ಒತ್ತಡ: ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲು ಚಿಮ್ಮನಕಟ್ಟಿಅವರ ಕುಟುಂಬದ ವಿರೋಧವಿಲ್ಲ. ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ನಮ್ಮ ಕುಟುಂಬದವರೇ ಒತ್ತಾಯ ಮಾಡುತ್ತೇವೆ. ಸಿದ್ದರಾಮಯ್ಯ ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಇಲ್ಲಿ ಅವರೇ ಅಭ್ಯರ್ಥಿ ಆಗಬೇಕು ಎಂದು ಚಿಮ್ಮನಕಟ್ಟಿಅವರ ಪುತ್ರ ರಾಜು (ಭೀಮಸೇನ) ಹೇಳಿದ್ದಾರೆ ಎಂದು ಮಾಜಿ ಸಚಿವ ಜಮೀರ್‌ಅಹ್ಮದ್‌ ಹೇಳಿದರು.

ಶನಿವಾರ ಕೆರೂರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಗೆದ್ದು ಬಂದ ಬಳಿಕ ಅವರನ್ನು ಗೆಲ್ಲಿಸಿದ ಜನರಿಗಾಗಿ ಬಾದಾಮಿಯನ್ನು ಅಭಿವೃದ್ಧಿ ಮಾಡಿದ್ದಾರೆ. ಅವರು ಇಲ್ಲೇ ಇದ್ದರೆ ಮತ್ತಷ್ಟುಅಭಿವೃದ್ಧಿಯಾಗುತ್ತದೆ ಎಂದು ಜನರ ಹೇಳುತ್ತಿದ್ದಾರೆ ಎಂದರು.

ಜನರ ಒತ್ತಡ: ಸಿದ್ದರಾಮಯ್ಯ ಅವರು ಬಾದಾಮಿಯಿಂದಲೇ ಮತ್ತೊಮ್ಮೆ ಸ್ಪರ್ಧಿಸಬೇಕು ಎಂದು ಕ್ಷೇತ್ರದ ಜನ ಆಸೆ ಪಡುತ್ತಿದ್ದಾರೆ. ಬಾದಾಮಿ ಕ್ಷೇತ್ರದ ಜನರಿಂದ ಒತ್ತಡವಿದೆ. ಜನರ ಒತ್ತಡದ ಮುಂದೆ ಯಾವುದು ಇಲ್ಲ. ಹೀಗಾಗಿ, ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದಲೇ ಸ್ಪ​ರ್ಧಿಸುವಂತೆ ನಾವು ಕೂಡ ಅವರಿಗೆ ಸಲಹೆ ನೀಡುತ್ತಿದ್ದೇವೆ ಎಂದು ಹೇಳಿದರು. ಕಳೆದ ಬಾರಿ ಸಿದ್ದರಾಮಯ್ಯ ಅವರಿಗೆ ಚಿಮ್ಮನಕಟ್ಟಿಅವರು ಬಾದಾಮಿ ಕ್ಷೇತ್ರ ಬಿಟ್ಟು ಕೊಟ್ಟಿದ್ದು ನಿಜ. ಅದು ಚಿಮ್ಮನಕಟ್ಟಿಅವರ ಬ್ಯಾಡ್‌ಲಕ್‌. ನಮ್ಮ ಸರ್ಕಾರ ಇದ್ದಿದ್ದರೆ ಅವರಿಗೆ ಏನಾದರೂ ಸ್ಥಾನಮಾನ ಕೊಡುತ್ತಿದ್ದರು. 

Vijayapura: ನಾಗರಬೆಟ್ಟ ವಸತಿ ಶಾಲೆಯಲ್ಲಿ ಅನುಮಾನಾಸ್ಪದವಾಗಿ ವಿದ್ಯಾರ್ಥಿಯ ಸಾವು

ಸಿದ್ದರಾಮಯ್ಯ ಅವರಿಗೆ ಯಾರು ಸಹಾಯ ಮಾಡಿದ್ದಾರೋ ಅವರಿಗೆಲ್ಲ ಸಿದ್ದರಾಮಯ್ಯ ಅವರು ಸಹಾಯ ಮಾಡಿದ್ದಾರೆ. ಸಹಾಯ ಮಾಡಿಲ್ಲ ಅಂತ ಒಬ್ಬರನ್ನಾದರೂ ತೋರಿಸಿ ನೋಡೋಣ ಎಂದು ಜಮೀರ್‌ಅಹ್ಮದ್‌ ಹೇಳಿದರು. ಬಾದಾಮಿ ಕ್ಷೇತ್ರದಲ್ಲಿ ಲೀಡರ್‌ಗಳ ಗುಂಪುಗಾರಿಕೆ ಇದೆಯಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಪಕ್ಷದಲ್ಲಿಯೂ ಸಣ್ಣಪುಟ್ಟಗುಂಪುಗಾರಿಕೆ ಇರುವುದು ಸಹಜ. ಅದು ದೊಡ್ಡ ವಿಷಯವಲ್ಲ. ಆದರೆ, ಸಿದ್ದರಾಮಯ್ಯ ವಿಷಯ ಬಂದಾಗ ಅಲ್ಲಿ ಯಾವ ಭಿನಾಭಿಪ್ರಾಯ ಇಲ್ಲ ಎಂದು ಜಮೀರ್‌ಅಹ್ಮದ್‌ ತಿಳಿಸಿದರು.

Follow Us:
Download App:
  • android
  • ios