Asianet Suvarna News Asianet Suvarna News

ನಾನು ಆದಿಚುಂಚನಗಿರಿ ಮಠದ ಸ್ವಾಮೀಜಿ ಶಿಷ್ಯ, ರಾಜಕೀಯಕ್ಕೆ ಬರಲು ಅವರೇ ಕಾರಣ: ಜಮೀರ್ ಟಾಂಗ್

'ಒಕ್ಕಲಿಗ ಸಮುದಾಯಕ್ಕಿಂತ ನಮ್ಮ ಸಮಾಜ ದೊಡ್ಡದು' ಎಂಬ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಖಾನ್‌ ಒಕ್ಕಲಿಗ ಸಮುದಾಯದ ಮಠಾಧೀಶರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಪರಿಣಾಮವಾಗಿ ಇದೀಗ ಜಮೀರ್‌ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.

Congress MLA Zameer Ahmed Khan Talks On Adichunchanagiri Mutt after Vokkaliga remark rbj
Author
Bengaluru, First Published Jul 25, 2022, 6:04 PM IST

ಹಾವೇರಿ, (ಜುಲೈ.25): ಒಕ್ಕಲಿಗ ಸಮುದಾಯಕ್ಕಿಂತ ನಮ್ಮ ಸಮಾಜ ದೊಡ್ಡದು ಎನ್ನುವ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡು ಜಮೀರ್ ಅಹಮದ್ ಖಾನ್ ಇದೀಗ ಆ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಈ ಬಗ್ಗೆ ಹಾವೇರಿಯಲ್ಲಿ ಇಂದು(ಸೋಮವಾರ) ಮಾತನಾಡಿದ ಜಮೀರ್, ನಾನು ರಾಜಕೀಯಕ್ಕೆ ಬರಲು ಕಾರಣ ಮುಸ್ಲಿಂ ಗುರುಗಳಲ್ಲ. ಒಕ್ಕಲಿಗರ ಸ್ವಾಮೀಜಿ ಎಂದು ಹೇಳಿವ ಮೂಲಕ ಬಿಜೆಪಿಗರಿಗೆ ಟಾಂಗ್ ನೀಡಿದರು.

ಒಕ್ಕಲಿಗರ ವಿಚಾರದಲ್ಲಿ ಲಕ್ಷ್ಮಣ ರೇಖೆ ದಾಟಬೇಡಿ, ಜಾತಿಗೊಂದು ಸಿಎಂ ಸಾಧ್ಯವಿಲ್ಲ: ಅಶೋಕ್ ಗರಂ

ಎಲ್ಲ ಜಾತಿಯವರ ಪರ ಇರೋ ಪಕ್ಷ ಅಂದರೆ ಅದು ಕಾಂಗ್ರೆಸ್ ಪಕ್ಷ. ನಾನು ಒಕ್ಕಲಿಗರ ಬಗ್ಗೆ ಏನು ಮಾತಾಡಿದ್ದೇನೆ.?, ನಾನು ರಾಜಕೀಯಕ್ಕೆ ಬರೋಕೆ ಕಾರಣವೆ ಒಕ್ಕಲಿಗರು. ಆದಿಚುಂಚನಗಿರಿ ಮಠದ ಹುಡುಗ. ನಾನು ಬೆಳಗ್ಗೆಯಿಂದ ಸಂಜೆಯವರೆಗೆ ಆದಿಚುಂಚನಗಿರಿ ಮಠದಲ್ಲೇ ಬೆಳೆದಿರೋದು. ನಾನು ರಾಜಕೀಯಕ್ಕೆ ಬರಲು ಕಾರಣ ಆದಿಚುಂಚನಗಿರಿ ಮಠದ ಸ್ವಾಮೀಜಿ. ಸ್ವಾಮೀಜಿ ದಾರಿ ತೋರಿಸಿದರು ಎಂದರು. 

ನಾನು ಆದಿಚುಂಚನಗಿರಿ ಮಠದ ಸ್ವಾಮೀಜಿಗಳ ಶಿಷ್ಯ. ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ನನ್ನ ಗುರುಗಳು. ನಾನು ಮಠಕ್ಕೆ ಹೋಗೋದು ತಡವಾದರೆ ಸ್ವಾಮೀಜಿ ಎಲ್ಲಿದ್ದೀಯಾ ಜಮೀರ್ ಅಂತಾ ಫೋನ್ ಮಾಡುತ್ತಿದ್ದರು. ಸ್ವಾಮೀಜಿಗಳ ಆದೇಶದ ಮೇರೆಗೆ ನಾನು ಜನತಾದಳಕ್ಕೆ ಹೋಗಿದ್ದು. ವಿಜಯನಗರ, ಚುಂಚನಗಿರಿ ಮಠದಲ್ಲಿ ಕೇಳಿ ನನ್ನ ಸ್ವಾಮೀಜಿಗಳ ಸಂಬಂಧ ಏನು ಎಂದು ಹೇಳ್ತಾರೆ ಎಂದು ಸ್ಪಷ್ಟಪಡಿಸಿದರು.

ದೇವೇಗೌಡರೇ ನನ್ನ ರಾಜಕೀಯ ಗುರುಗಳು. 2005ರಲ್ಲಿ ನನ್ನ ಗೆಲ್ಲಿಸಿರೋದು ದೇವೇಗೌಡರು. ನಾನು ಈ ಮಟ್ಟಕ್ಕೆ ಬೆಳೆದಿದ್ದು ದೇವೇಗೌಡರಿಂದ ಎಂದು ಹೇಳಿದರು.

ಶಾಸಕ ಜಮೀರ್‌ ವಿರುದ್ಧ ಒಕ್ಕಲಿಗ ನಾಯಕರು ಗರಂ..!

ಆರ್.ಅಶೋಕ್ ಅವರದ್ದು ನಾನು ಬಿಡಿಸಿ ಹೇಳಲಾ…? ಅಶೋಕ್ ಅವರಿಗೆ ಸಿಎಂ ಆಗೋ ಆಸೆ ಇಲ್ವಾ.? ಅಶೋಶ್, ಸಿ.ಟಿ.ರವಿಗೆ ಆಸೆ ಇಲ್ವಾ.? ಅವರವರಲ್ಲೆ ಕಾಂಫಿಟೇಶನ್ ಇದೆ. ಇದೇ ವೇಳೆ ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದ ಜಮೀರ್, ಬಿಜೆಪಿಯವರು ದೇಶವನ್ನು ಹಾಳು ಮಾಡ್ತಿದ್ದಾರೆ. ಈ ರೀತಿ ಮಾಡಿ ಅಧಿಕಾರಕ್ಕೆ ಬರುತ್ತಾರೆ. ಸಿ.ಟಿ.ರವಿಯವರಿಗೆ ಹೇಳಿಕೊಳ್ಳಲು ವಿಷಯಗಳಿಲ್ಲ. ಕಾಂಗ್ರೆಸ್ ಕಾರ್ಯಕ್ರಮ ತೋರಿಸಿ ಮತ ಕೇಳ್ತೇವೆ. ಸಿ.ಟಿ.ರವಿಯವರಿಗೆ ಹಿಂದೂ, ಮುಸಲ್ಮಾನ ಯಾರೂ ಬೇಕಾಗಿಲ್ಲ. ಅವರಿಗೆ ಬೇಕಿರೋದು ಖುರ್ಚಿ ಮತ್ತು ಅಧಿಕಾರ ಎಂಉದ ವಾಗ್ದಾಳಿ ನಡೆಸಿದರು.

ಅಸಾಮಾಧಾನ ಹೊರ ಹಾಕಿದ್ದ ಸ್ವಾಮೀಜಿ
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಖುರ್ಚಿ ವಿಚಾರದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್‌ರನ್ನು ಪದೇ ಪದೇ ಕೆಣಕುತ್ತಿದ್ದ ಶಾಸಕ ಜಮೀರ್ ಅಹ್ಮದ್ ಖಾನ್ ಈ ಬಾರಿ ಒಕ್ಕಲಿಗ ಸಮುದಾಯವನ್ನು ಕೆಣಕಿ ಎಡವಟ್ಟು ಮಾಡಿಕೊಂಡಿದ್ದರು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಕಾರಣಕ್ಕೆ ಸಿಎಂ ಹುದ್ದೆ ಅಲಂಕರಿಸಲು ಅರ್ಹರಲ್ಲ. ಒಕ್ಕಲಿಗ ಸಮುದಾಯ ನಂಬಿಕೊಂಡರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ. ಒಕ್ಕಲಿಗ ಸಮುದಾಯಕ್ಕಿಂತಲೂ ಮುಸ್ಲಿಂಮರ ಮತಗಳು ಜಾಸ್ತಿ ಇವೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಒಕ್ಕಲಿಗ ಸಮುದಾಯದ ಬಗ್ಗೆ ಜಮೀರ್ ನೀಡಿರುವ ಹೇಳಿಕೆ ಬಗ್ಗೆ ಒಕ್ಕಲಿಗ ಸಮುದಾಯದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಸಾಮಾಧಾನ ಹೊರ ಹಾಕಿದ್ದರು. ತಮ್ಮ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ ಜಮೀರ್ ಬಗ್ಗೆ ಸುಮ್ಮನಿರುವ ಒಕ್ಕಲಿಗ ನಾಯಕರ ಮೌನದ ಬಗ್ಗೆ ಪ್ರಸ್ತಪಿಸಿದ್ದರು.

 ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ನ ಚೆಲುವರಾಯಸ್ವಾಮಿ, ಡಿ. ಕೆ. ಶಿವಕುಮಾರ್, ಆರ್‌. ಅಶೋಕ ಜೊತೆ ದೂರವಾಣಿ ಮೂಲಕ ಸ್ವತಃ ಸ್ವಾಮೀಜಿಗಳೇ ನೇರವಾಗಿ ಮಾತನಾಡಿದ್ದು, ಅಸಮಾಧಾನ ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ಒಕ್ಕಲಿಗ ಸಮುದಾಯದ ನಾಯಕರು ಜಮೀರ್ ವಿರುದ್ಧ ತಿರುಗಿ ಬಿದ್ದಿದ್ದರು.

Follow Us:
Download App:
  • android
  • ios