ಸ್ವಂತ ಖರ್ಚಿನಲ್ಲಿ ಕೊರೋನಾ ಲಸಿಕೆ ಪೂರೈಸಲು ತೀರ್ಮಾನಿಸಿದ ಕಾಂಗ್ರೆಸ್ ಶಾಸಕ

* ಸ್ವಂತ ಖರ್ಚಿನಲ್ಲಿ ಕೊವಿಡ್ ಲಸಿಕೆ ಪೂರೈಸಲು ತೀರ್ಮಾನಿಸಿದ ಕಾಂಗ್ರೆಸ್ ಶಾಸಕ
* ಜಿಲ್ಲೆಯಲ್ಲಿ ಸ್ವಂತ ಖರ್ಚಿನಲ್ಲಿ ಲಸಿಕೆ ವಿತರಣೆ ಮಾಡಲು ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ
* ಲಸಿಕೆ ಪೂರೈಕೆಗೆ ಭಾರತ್ ಬಯೋಟೆಕ್ ಕಂಪನಿಗೆ ಆರ್ಡರ್

Congress MLA shamanur shivashankarappa decides to supply covid vaccine his own expense rbj

ದಾವಣಗೆರೆ, (ಮೇ.29): ರಾಜ್ಯದಲ್ಲಿ ಕೊರೋನಾ ಲಸಿಕೆ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ  ಶಾಮನೂರು ಶಿವಶಂಕರಪ್ಪ ಅವರು ಸ್ವಂತ ಖರ್ಚಿನಲ್ಲಿ ಕೊವಿಡ್ ಲಸಿಕೆ ಪೂರೈಸಲು ತೀರ್ಮಾನಿಸಿದ್ದಾರೆ.

ಹೌದು...ಜಿಲ್ಲೆಯಲ್ಲಿ ಸ್ವಂತ ಖರ್ಚಿನಲ್ಲಿ ಲಸಿಕೆ ವಿತರಣೆ ಮಾಡಲು ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಮುಂದಾಗಿದ್ದಾರೆ.

18 ಮೇಲ್ಪಟ್ಟವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಇದೆ, ಸರ್ಕಾರದ ಬಳಿ ಏಕಿಲ್ಲ: ಹೈಕೋರ್ಟ್‌ ಪ್ರಶ್ನೆ

ಕೊವ್ಯಾಕ್ಸಿನ್ ಲಸಿಕೆಯ 50 ಸಾವಿರ ವಯಲ್‌ ಪೂರೈಕೆಗೆ ಭಾರತ್ ಬಯೋಟೆಕ್ ಕಂಪನಿಗೆ ಮನವಿ ಮಾಡಲಾಗಿದ್ದು, 40 ಸಾವಿರ ವಯಲ್‌ ಪೂರೈಸಲು ಕಂಪನಿ ಒಪ್ಪಿಕೊಂಡಿದೆ. ಮುಂದಿನ 2ರಿಂದ 3 ದಿನಗಳಲ್ಲಿ 1 ಸಾವಿರ ವಯಲ್ ದಾವಣಗೆರೆಗೆ ಆಗಮಿಸಲಿದ್ದು, ಹಂತ ಹಂತವಾಗಿ ಲಸಿಕೆ ವ್ಯವಸ್ಥೆಗೆ ನಿರ್ಧರಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಮನೂರು ಶಿವಶಂಕ್ರಪ್ಪ, ಕ್ಷೇತ್ರದ ಜನರಿಗೆ ಸ್ವಂತ ಖರ್ಚಿನಿಂದ ಕೊರೋನಾ ಲಸಿಕೆ ನೀಡಲು ಪುಣೆಯ ಕಂಪನಿಗೆ ಚರ್ಚಿಸಿದ್ದೇವೆ. ಶೀಘ್ರದಲ್ಲೇ 10 ಸಾವಿರ ಡೋಸ್ ಲಸಿಕೆ ಬರುವ ನಿರೀಕ್ಷೆ ಇದೆ ಎಂದು ಸ್ಪಷ್ಟಪಡಿಸಿದರು.

50 ಸಾವಿರ ಡೋಸ್ ಲಸಿಕೆ ಆರ್ಡರ್ ನೀಡಿದ್ದೇವೆ. 40 ಸಾವಿರ ಡೋಸ್ ಕೊಡುವುದಾಗಿ ಕಂಪನಿ ಭರವಸೆ ನೀಡಿದೆ. ಎಷ್ಟು ಲಸಿಕೆ ಬೇಕಾದರೂ ತರಿಸಲು ಸಿದ್ಧರಿದ್ದೇವೆ. ಯಾರು ಆತಂಕಪಡುವ ಅಗತ್ಯವಿಲ್ಲ ಎಂದರು.

ಇನ್ನು ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ತಲಾ ಒಂದು ಕೋಟಿ ರೂ. ಲಸಿಕೆಗೆ ನೀಡುವುದಾಗಿ ಈಗಾಗಲೇ ಕಾಂಗ್ರೆಸ್ ಶಾಸಕರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios