ಬೆಂಗಳೂರು, (ಅ.16): ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಇದರಿಂದ ಜನರು ಮನೆ-ಮಠ ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಆದ್ರೆ, ಈ ಬಗ್ಗೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಇದರಿಂದ  ಆಕ್ರೋಶಗಳ ವ್ಯಕ್ತವಾಗತ್ತಿವೆ.

ಅದರಲ್ಲೂ ಆಂಧ್ರಪ್ರದೇಶ ಮತ್ತು ತೆಲಂಗಾಣದ ಪ್ರವಾಹದ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಬಗ್ಗೆ ಒಂದು ಟ್ವೀಟ್ ಮಾಡಿಲ್ಲ. ಇದರಿಂದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಮುಳುಗಿದ ಉತ್ತರ ಕರ್ನಾಟಕ; ಬದುಕು ನೀರುಪಾಲು, ಜನ ಕಂಗಾಲು

ನಿಮಗೆ ಕನ್ನಡಿಗರು ಎಂದ್ರೆ ಇಷ್ಟವಿಲ್ವಾ? ಅಥವಾ ನಮ್ಮ ಯಡಿಯೂರಪ್ಪ ಎಂದ್ರೆ ಇಷ್ಟವಿಲ್ವಾ? ಎಂದು ಟ್ವೀಟ್ ಮಾಡುವ ಮೂಲಕ ನರೇಂದ್ರ ಮೋದಿಗೆ ಪ್ರಶ್ನಿಸಿದ್ದಾರೆ.

ನೆರೆಪೀಡಿತ ಆಂಧ್ರ ಮತ್ತು ತೆಲಂಗಾಣ ಸಿಎಂಗಳ ಜೊತೆ ಮಾತನಾಡಿ ಪರಿಹಾರದ ಭರವಸೆ ನೀಡಿರುವುದಾಗಿ ಟ್ವೀಟ್ ಮಾಡ್ತಿರಿ. ಆದರೆ ಭೀಕರ ಪ್ರವಾಹದಿಂದ ಕರ್ನಾಟಕ ಸಂಕಷ್ಟದಲ್ಲಿದೆ, ಆದರೆ ಕರ್ನಾಟಕದ ಮಟ್ಟಿಗೆ ಒಂದು ಭರವಸೆ ನೀಡಿಲ್ಲ. ನೀವು ಕರ್ನಾಟಕದ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿದ್ದಿರಿ.

ಆಂಧ್ರದ ಜಗನ್ ಮತ್ತು ತೆಲಂಗಾಣದ ಕೆಸಿಆರ್‌ಗೆ ಸಹಾಯ ಮಾಡುವ ನೀವು, ಕನ್ನಡಿಗರು ಮತ್ತು ಯಡಿಯೂರಪ್ಪನವರು ಇಷ್ಟವಿಲ್ಲವೇ? ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರೀಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.