Asianet Suvarna News Asianet Suvarna News

ಮಂತ್ರಿ ಮಾಡ್ತೀನಿ ಅಂತ ಸಿದ್ದು, ಡಿಕೆಶಿ ಹೇಳಿದ್ದಾರೆ: ಶಿವಲಿಂಗೇಗೌಡ

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಾತು ಕೊಟ್ಟು ಚುನಾವಣೆಯಲ್ಲಿ ಕರೆದುಕೊಂಡು ಬಂದಿದ್ದಾರೆ. ಮೊದಲನೇ ಬಾರಿ ಕೊಡಬೇಕಾಗಿತ್ತು, ಆದರೆ ಕೊಡಲು ಆಗಲಿಲ್ಲ. ನಿನ್ನನ್ನು ಮಂತ್ರಿ ಮಾಡುತ್ತೇನೆ, ನಿಗಮ ಮಂಡಳಿನೂ ಕೊಡುತ್ತೇನೆ ಎಂದು ಹೇಳಿದ್ದಾರೆ, ಅದಕ್ಕೆ ಬದ್ಧವಾಗಿದ್ದೇನೆ: ಕೆ.ಎಂ.ಶಿವಲಿಂಗೇಗೌಡ 

Congress MLA KM Shivalingegowda Talks Over Minister Post grg
Author
First Published Jan 2, 2024, 11:30 PM IST

ಅರಸೀಕೆರೆ(ಜ.02): ‘ನಿಗಮ ಮಂಡಳಿಗೆ ಈ ವಾರದಲ್ಲಿ, ಸದ್ಯದಲ್ಲಿ ನೇಮಕ ಆಗಬಹುದು, ನನಗೂ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಮುಂದೆ ಸಚಿವ ಸ್ಥಾನವನ್ನು ಕೊಡುತ್ತೇನೆ ಎಂದೂ ಹೇಳಿದ್ದಾರೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಣತಿಯಂತೆ ನಡೆಯುತ್ತೇನೆ’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದ ವೆಂಕಟೇಶ್ವರ ಕಲಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಾತು ಕೊಟ್ಟು ಚುನಾವಣೆಯಲ್ಲಿ ಕರೆದುಕೊಂಡು ಬಂದಿದ್ದಾರೆ. ಮೊದಲನೇ ಬಾರಿ ಕೊಡಬೇಕಾಗಿತ್ತು, ಆದರೆ ಕೊಡಲು ಆಗಲಿಲ್ಲ. ನಿನ್ನನ್ನು ಮಂತ್ರಿ ಮಾಡುತ್ತೇನೆ, ನಿಗಮ ಮಂಡಳಿನೂ ಕೊಡುತ್ತೇನೆ ಎಂದು ಹೇಳಿದ್ದಾರೆ, ಅದಕ್ಕೆ ಬದ್ಧವಾಗಿದ್ದೇನೆ’ ಎಂದು ತಿಳಿಸಿದರು.

3ರಿಂದ 4 ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ?: ಎಚ್‌.ಡಿ.ಕುಮಾರಸ್ವಾಮಿ

ಎರಡೂವರೆ ವರ್ಷಕ್ಕೆ ಸಚಿವ ಸ್ಥಾನ:

‘ಎರಡೂವರೆ ವರ್ಷಕ್ಕೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದಾರೆ. ಅದಕ್ಕೆ ನಾನು ಬದ್ದನಾಗಿದ್ದೇನೆ, ನಿನಗೆ ಒಳ್ಳೆಯ ಸ್ಥಾನ ಕೊಡುತ್ತೇನೆ ಎಂದು ಹೇಳಿದ್ದಾರೆ, ಕೊಡಬಹುದು. ಸಚಿವ ಸ್ಥಾನದ ನಿರೀಕ್ಷೆಯಲ್ಲೂ ಇದ್ದೀನಿ, ನಿಗಮ‌ ಮಂಡಳಿ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲೂ ಇದ್ದೀನಿ’ ಎಂದು ಹೇಳಿದರು.

'ನನ್ನ ಅರೆಸ್ಟ್ ಹಿಂದೆ ವ್ಯವಸ್ಥಿತ ಪಿತೂರಿ ಇದೆ, ಟೈಮ್ ಬಂದಾಗ ಎಲ್ಲವನ್ನೂ ಹೇಳ್ತೇನೆ': ವಿಕ್ರಮ್ ಸಿಂಹ

ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಪತನ ಎಂಬ ವಿರೋಧ ಪಕ್ಷದ ನಾಯಕರ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ‘ಅದು ಅವರ ಭ್ರಮೆ, ಎಲ್ಲೋ‌ ಹಗಲು ಕನಸು ಬಿದ್ದಿರಬೇಕು. ರಾತ್ರಿ ಹೊತ್ತು ಬಿದ್ದಿಲ್ಲ‌ ಕನಸು, ಹಗಲು ಕನಸು ಬಿದ್ದಿರಬೇಕು. ಹೆಂಗೆ ಸರ್ಕಾರ ಬೀಳುತ್ತೆ, ಅದು ಅವರ ಕನಸಿನ ಮಾತು’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನುವುದು ಬಿಜೆಪಿ ಭ್ರಮೆ. ಹಿಂದೂಗಳ ವಿರುದ್ಧ ದ್ವೇಷದ ರಾಜಕಾರಣ ಎನ್ನುವುದು ಇವರ ಘೋಷವಾಕ್ಯ. ಬಿಜೆಪಿಯವರು ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆ. ಹಿಂದೂಗಳೆಲ್ಲ ಅವರ ಪರ ಇಲ್ಲ, ನಾವು ಹಿಂದೂಗಳೇ, ನಾವು ಹಿಂದೂ ರಕ್ತದಲ್ಲಿ ಹುಟ್ಟಿದ್ದೇವೆ, ಬೇರೆ ರಕ್ತದಲ್ಲಿ ಹುಟ್ಟಿದ್ದೇವೆ ಅಂತ ಹೇಳಲ್ಲ. ನಾವು ಹಿಂದೂಗಳೇ, ಹಿಂದೂಗಳ ಪರವಾಗಿ ಹೋರಾಟ ಮಾಡುತ್ತೇವೆ. ನಮ್ಮದು ಜಾತ್ಯತೀತ ರಾಷ್ಟ್ರ, ಹಿಂದೂ, ಕೈಸ್ತ, ಮುಸ್ಲಿಂರು ಎಲ್ಲರೂ ಒಂದೇ ಎಂದು ಮಹಾತ್ಮಗಾಂಧಿ ಗೀತೆ ಹಾಡಿ ಹೋಗಿದ್ದಾರೆ. ಆ ತತ್ವಕ್ಕೆ, ಜಾತ್ಯತೀತ ನಿಲುವಿಗೆ ಬದ್ಧವಾಗಿದ್ದೇವೆ, ಎಲ್ಲಾ ಜನಾಂಗ, ಜಾತಿಯನ್ನು ಒಂದಾಗಿ ಕಾಣುತ್ತಿದ್ದೇವೆ, ಬರೀ ಹಿಂದೂಗಳು ಎನ್ನುವ ಪ್ರಶ್ನೆಯಲ್ಲ, ನಮಗೆ ಎಲ್ಲರೂ ಸಮಾನರೇ, ಎಲ್ಲರನ್ನೂ ಒಂದಾಗಿ ಕಾಣುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Follow Us:
Download App:
  • android
  • ios