Asianet Suvarna News Asianet Suvarna News

Karnataka Politics: ಬಿಜೆಪಿಯಲ್ಲಿ ಶ್ರೀರಾಮುಲು ಮೂಲೆಗುಂಪು: ಶಾಸಕ ನಾಗೇಂದ್ರ

*   ರಾಮುಲು ಅವರನ್ನು ಕಾಟಾಚಾರಕ್ಕೆ ಮಂತ್ರಿ ಮಾಡಲಾಗಿದೆ
*  ಮುಂದಿನ ದಿನಗಳಲ್ಲಿ ಜನರೇ ರಾಮುಲು ರಾಮುಲು ಅವರಿಗೆ ಪಾಠ ಕಲಿಸಲಿದ್ದಾರೆ 
*  ಬಳ್ಳಾರಿ ಗ್ರಾಮೀಣ ಪೂರ್ಣ ಕಾಂಗ್ರೆಸ್‌ ಹಿಡಿತದಲ್ಲಿದೆ 

Congress MLA B Nagendra Talks Over Minister B Sriramulu grg
Author
Bengaluru, First Published May 28, 2022, 11:07 AM IST

ಮಸ್ಕಿ(ಮೇ.28):  ಬಿಜೆಪಿಯಲ್ಲಿ ಬಿ.ಶ್ರೀರಾಮುಲು ಅವರನ್ನು ಮೂಲೆಗುಂಪು ಮಾಡಲಾಗಿದೆ. ಅವರಿಗೆ ಮನ್ನಣೆಯೇ ಇಲ್ಲ. ಎಸ್ಟಿಮೀಸಲು ಜಾರಿ ವಿಚಾರದಲ್ಲಿ ಅವರದು ಬರೀ ಬೂಟಾಟಿಕೆಯಾಗಿದೆ ಎಂದು ಕಾಂಗ್ರೆಸ್‌ ಶಾಸಕ ಬಿ. ನಾಗೇಂದ್ರ
ಹೇಳಿದರು.

ಪಟ್ಟಣದ ಸರ್ಕೂಟ್‌ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀರಾಮುಲು ಅವರನ್ನು ಕಾಟಾಚಾರಕ್ಕೆ ಮಂತ್ರಿ ಮಾಡಲಾಗಿದೆ. ಈ ಸರ್ಕಾರದಲ್ಲಿ ಅವರದು ಏನೂ ನಡೆಯಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಬಂದ್ರೆ 24ಗಂಟೆಯಲ್ಲಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ ನ್ಯಾ.ನಾಗಮೋಹನದಾಸ್‌ ವರದಿ ಜಾರಿ ಮಾಡುವುದಾಗಿ ಭಾಷಣ ಮಾಡಿದ್ದರು. ಆದರೆ 24 ದಿನ, 24 ತಿಂಗಳೂ ಆದ್ರೂ ಮೀಸಲಾತಿ ಜಾರಿ ಮಾಡಲಿಲ್ಲ. ಕೇವಲ ಕಣ್ಣೊರೆಸುವ ತಂತ್ರವಾಗಿ ಎಸ್ಟಿಜನಾಂಗದ ಮತಗಳಿಕೆಗಾಗಿ ಮೀಸಲು ವಿಚಾರ ಬಳಸಿಕೊಳ್ಳುತ್ತಿದ್ದಾರೆ. ವಾಲ್ಮೀಕಿ ಜನಾಂಗದ ಎಲ್ಲರಿಗೂ ಈ ಸತ್ಯ ಅರಿವಾಗಿದ್ದು ಮುಂದಿನ ದಿನಗಳಲ್ಲಿ ಜನರೇ ರಾಮುಲು ಅವರಿಗೆ ಪಾಠ ಕಲಿಸಲಿದ್ದಾರೆ ಎಂದರು.

ಪಕ್ಷದಲ್ಲಿ ಬಿಎಸ್‌ವೈ ಸೈಡ್‌ಲೈನ್‌ ಆದ್ರಾ?: ರಾಮುಲು ಹೇಳಿದ್ದಿಷ್ಟು

ಬಿ. ಶ್ರೀರಾಮುಲು ಇವತ್ತು ಮಂತ್ರಿಯಾಗಿದ್ದಾರೆ. ನಾಳೆ ಮುಖ್ಯಮಂತ್ರಿಯಾಗಿ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿದ್ರೂ ನಾನು ಅವರ ಎದುರು ನಿಂತು ಗೆಲ್ಲುವೆ.ಬಳ್ಳಾರಿ ವಿಭಜನೆ ಬಳಿಕ ಬಳ್ಳಾರಿ ಜಿಲ್ಲೆ 5 ತಾಲೂಕು ಒಳಗೊಂಡಿದೆ. ಐದು ಕ್ಷೇತ್ರದಲ್ಲೂ ಕಾಂಗ್ರೆಸ್‌ ಬಲಿಷ್ಠವಾಗಿದೆ. ಬಳ್ಳಾರಿ ಗ್ರಾಮೀಣ ಪೂರ್ಣ ಕಾಂಗ್ರೆಸ್‌ ಹಿಡಿತದಲ್ಲಿದೆ. ಈ ಬಾರಿ ರಾಜ್ಯಾದ್ಯಂತವೂ ಕಾಂಗ್ರೆಸ್‌ ಪರವಾದ ವಾತಾವರಣವಿದೆ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು 150 ಸೀಟುಗಳಲ್ಲಿ ಕಾಂಗ್ರೆಸ್‌ ಜಯಸಾಧಿಸಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಕಾಂಗ್ರೆಸ್‌ ಮುಖಂಡರಾದ ಆರ್‌. ಸಿದ್ದನಗೌಡ ತುರ್ವಿಹಾಳ, ಬಸನಗೌಡ ಜಾಲಿ ಸೇರಿದಂತೆ ಇತರರಿದ್ದರು.
 

Follow Us:
Download App:
  • android
  • ios