ಬೆಂಗಳೂರು [ನ.15]:  ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಸಾಧನೆ ಮಾಡಿದರೆ ಅದರ ಲಾಭ ಜೆಡಿಎಸ್‌ಗೆ ಆಗುತ್ತಾ? ಇಂತಹದ್ದೊಂದು ಗಂಭೀರ ಚಿಂತೆ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. 

ಹೀಗಾಗಿ ಬಿಜೆಪಿ ಗೆದ್ದರೂ ಚಿಂತೆಯಿಲ್ಲ, ಜೆಡಿಎಸ್‌ಗೆ ಲಾಭವಾಗದಂತೆ ಏನಾದರೂ ತಂತ್ರ ಮಾಡಲು ಸಾಧ್ಯವೇ ಎಂಬ ಲೆಕ್ಕಾಚಾರ ಪಕ್ಷದಲ್ಲಿ ಆರಂಭವಾ ಗಿದೆ ಎಂದು ತಿಳಿದುಬಂದಿದೆ. ಇಷ್ಟಕ್ಕೂ ಇಂತಹದ್ದೊಂದು ಪ್ರಶ್ನೆ ಕಾಂಗ್ರೆಸ್ ನಾಯ ಕರಲ್ಲಿ ಮೂಡಲು ಕಾರಣ ಜೆಡಿಎಸ್ ನಾಯಕರು ಉಪ ಚುನಾವಣೆ ನಂತರವೂ ಬಿಜೆಪಿ ಸರ್ಕಾರಕ್ಕೆ ಸ್ಥಿರತೆ ನೀಡುವ ಮಾತುಗಳನ್ನು ಆಡುತ್ತಿರುವುದು. 

ಜೆಡಿಎಸ್ ನಾಯಕರ ಈ ಹೇಳಿಕೆಯ ಹಿಂದೆ ಭವಿಷ್ಯದಲ್ಲಿ ಬಿಜೆಪಿ ಸರ್ಕಾರ ಅತಂತ್ರಗೊಂಡರೆ ತಾನು ಬೆಂಬಲ ನೀಡುವ ಪ್ರಸ್ತಾಪವಿದೆ. ಇದು ಕಾಂಗ್ರೆಸ್ ನಾಯಕರನ್ನು ಚಿಂತೆಗೆ ತಳ್ಳಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ೮ಕ್ಕಿಂತ ಕಡಿಮೆ ಸ್ಥಾನ ಪಡೆದರೆ ಆ ಸಹಜವಾಗಿ ಅದಕ್ಕೆ ಜೆಡಿಎಸ್ ಬೆಂಬಲ ನೀಡಲು ಮುಂದಾಗಬಹುದು. ಇಂತಹ ಸಂದರ್ಭ ನಿರ್ಮಾಣವಾದರೆ ಆಗ ಜೆಡಿಎಸ್ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೂ ಆಗ್ರಹ ಮಾಡಬಹುದು ಮತ್ತು ಸರ್ಕಾರದ ಭಾಗವೂ ಆಗಬಹುದು.

'ಅಧಿಕಾರಕ್ಕಾಗಿ ಅಲ್ಲ, ರಾಜ್ಯದ ರಾಕ್ಷಸ ರಾಜಕಾರಣ ಕೊನೆಗೊಳಿಸಲು ಪಕ್ಷ ಬಿಟ್ಟೆ'...

ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್ ಉಪ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ ಹೊರತಾಗಿಯೂ ಅದರ ಸಂಪೂರ್ಣ ಲಾಭ ಜೆಡಿಎಸ್ ಪಡೆದುಕೊಂಡಂತೆ ಆಗುತ್ತದೆ. ಇನ್ನು ಜೆಡಿಎಸ್ ಸರ್ಕಾರದ ಭಾಗವಾದರೆ ಅದರ ಹೊಡೆತ ಕಾಂಗ್ರೆಸ್‌ಗೆ ನೇರವಾಗಿ ಬೀಳಲಿದೆ. ಇದಕ್ಕಿಂತ ಪಕ್ಷದಲ್ಲೇ ಆಂತರಿಕ ಭಿನ್ನಾಭಿಪ್ರಾಯ ಎದುರಿಸುತ್ತಿರುವ ಯಡಿಯೂರಪ್ಪ ಅವರ ಸರ್ಕಾರವೇ ಮುಂದುವರೆದರೆ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್‌ಗೆ ಒಳ್ಳೆಯದು ಎಂಬ ಲೆಕ್ಕಾಚಾರವೂ ಇದೆ.

ನವೆಂಬರ್ 15ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: