Asianet Suvarna News Asianet Suvarna News

ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಕನ್ಫರ್ಮ್ : ಕ್ಷೇತ್ರದ ಬಗ್ಗೆ ಮಾತ್ರ ಗೊತ್ತಿಲ್ಲ

  • ಜೆಡಿಎಸ್ ಶಾಸಕ ಜಿ ಟಿ ದೇವೇಗೌಡರು ಕಾಂಗ್ರೆಸ್ ಸೇರುವ ಸಂಬಂಧ ನನ್ನ ಬಳಿ ಮಾತನಾಡಿರುವುದು ನಿಜ
  • ಜಿಟಿಡಿ ಯಾವ ಕ್ಷೇತ್ರ ಎಂದು ನನ್ನ ಬಳಿ ಹೇಳಿಲ್ಲ - ಈ ಬಗ್ಗೆ ಕಾಂಗ್ರೆಸ್ ಮುಖಂಡರ ಜೊತೆ ಮಾತನಾಡುತ್ತೇನೆ - ಸಿದ್ದರಾಮಯ್ಯ
congress leader siddaramaiah confirm about GT Devegowda congress Joining snr
Author
Bengaluru, First Published Aug 31, 2021, 12:44 PM IST
  • Facebook
  • Twitter
  • Whatsapp

 ಬೆಂಗಳೂರು (ಆ.31): ಜೆಡಿಎಸ್ ಶಾಸಕ ಜಿ ಟಿ ದೇವೇಗೌಡರು ಕಾಂಗ್ರೆಸ್ ಸೇರುವ ಸಂಬಂಧ ನನ್ನ ಬಳಿ ಮಾತನಾಡಿರುವುದು ನಿಜ ಎಂದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. 

ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದು ಮರಳಿದ ಬಳಿಕ ಬೆಂಗಳೂರಿನಲ್ಲಿಂದು ಮಾತನಾಡಿದ ಅವರು  ಜಿಟಿಡಿ ಈಗಾಗಲೇ ನನ್ನ ಬಳಿ ಮಾತನಾಡಿದ್ದಾರೆ.  ಅವರಿಗೆ ಅವರ ಮಗನಿಗೆ ಇಬ್ಬರಿಗೂ ಟಿಕೆಟ್ ಕೇಳಿದ್ದಾರೆ ಎಂದರು.

ಜಿಟಿಡಿ ಯಾವ ಕ್ಷೇತ್ರ ಎಂದು ನನ್ನ ಬಳಿ ಹೇಳಿಲ್ಲ. ನಾನು ಸುರ್ಜೆವಾಲಾ  ಹತ್ತಿರ ಮಾತನಾಡುತ್ತೇನೆ. ಈ ಬಗ್ಗೆ ಅವರಿಗೆ  ಹೇಳಿದ್ದೇ‌ನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

'ಎಚ್‌ಡಿಕೆಗೆ ಚುನಾವಣೆಯೇ ಉತ್ತರ : ಈಶ್ವರಪ್ಪಗೆ ಬ್ರೈನ್-ನಾಲಿಗೆ ಕನೆಕ್ಷನ್ ಇಲ್ಲ'

ಜಿಟಿಡಿ ಸೇರ್ಪಡೆ ವಿಚಾರದ ಬಗ್ಗೆ ನನಗೆ ಯಾವುದೇ ಗೊಂದಲವಿಲ್ಲ. ಇನ್ನೂ ಸುರ್ಜೇವಾಲ ‌ಜೊತೆ ನಾನು ಮಾತನಾಡಿಲ್ಲ. ಬೇರೆ ಊಹಾಪೋಹದ ಪ್ರಶ್ನೆಗೆ ಉತ್ತರಿಸಲ್ಲ ಎಂದರು.

ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಜೆಡಿಎಸ್ ವಿಚಾರದ ಬಗ್ಗೆ ಮಾತನಾಡಿದ ಅವರು ಅದರ ಬಗ್ಗೆ ನನಗೆ ಗೊತ್ತಿಲ್ಲ. ಜಿ.ಡಿ.ದೇವೇಗೌಡ ಬಿಟ್ಟರೆ ಬೇರೆ ಯಾರು ನನ್ನನ್ನ ಸಂಪರ್ಕಿಸಿಲ್ಲ. ತಮಗೂ ಮತ್ತು ಪುತ್ರನಿಗೆ ಕ್ಷೇತ್ರ ಕೊಡುವಂತೆ ಕೇಳಿದ್ದಾರೆ. ಹೈಕಮಾಂಡ್ ಜತೆ ಚರ್ಚೆ ಮಾಡಬೇಕು ಎಂದು ಹೇಳಿದ್ದೇವೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

Follow Us:
Download App:
  • android
  • ios