Karnataka Politics: 'ಕಾಂಗ್ರೆಸ್‌ ಹೋರಾಟದಿಂದ ಬಿಜೆಪಿಗೆ ಚಳಿಜ್ವರ ಬರ್ತದೆ'

*  ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್‌ ಹೋರಾಟ ನಡೆಸುವುದಿಲ್ಲ
*  2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ 
*  ನಮ್ಮ ಹೋರಾಟವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಂಬಲಿಸುತ್ತಿದ್ದಾರೆ 
 

Congress Leader Shivaraj Tangadagi Slams on BJP grg

ಕನಕಗಿರಿ(ಜ.23): ರಾಜ್ಯದಲ್ಲಿ(Karnataka) ಕಾಂಗ್ರೆಸ್‌ ಯಾವುದೇ ಹೋರಾಟ ಹಮ್ಮಿಕೊಂಡರೂ ಬಿಜೆಪಿ ನಾಯಕರಿಗೆ ಚಳಿಜ್ವರ ಶುರುವಾಗುತ್ತದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಟೀಕಿಸಿದ್ದಾರೆ.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಮಾತನಾಡಿದ ಅವರು, ರಾಜಕೀಯ(Politics) ಲಾಭಕ್ಕಾಗಿ ಕಾಂಗ್ರೆಸ್‌ ಹೋರಾಟ ನಡೆಸುವುದಿಲ್ಲ. ಸಿದ್ದರಾಮಯ್ಯ(Siddaramaiah) ಅವರು ಮುಖ್ಯಮಂತ್ರಿಯಾಗಿದ್ದಾಗ ಮೇಕೆದಾಟು ಯೋಜನೆ(Mekedatu Project) ರೂಪಿಸಲು ಡಿಪಿಆರ್‌(DPR) ಪ್ರಾರಂಭಿಸಿದ್ದರು. ಅದನ್ನು ಅನುಷ್ಠಾನಗೊಳಿಸಲು ಆಗ್ರಹಿಸಿ ಹೋರಾಟ ಹಮ್ಮಿಕೊಂಡಿತ್ತು. ಆದರೆ ಮಹಾಮಾರಿ ಕೊರೋನಾ(Coronavirus) ಉಲ್ಬಣಗೊಳ್ಳುವ ಭೀತಿಯಿಂದಾಗಿ ಹಾಗೂ ನ್ಯಾಯಾಲಯ ಆದೇಶದಿಂದ ಕೊನೆಗಳಿಗೆಯಲ್ಲಿ ಹೋರಾಟ ಹಿಂಪಡೆಯಲಾಯಿತು ಎಂದು ತಿಳಿಸಿದರು.

Karnataka Politics: 'ಬಿಜೆಪಿಯ ಘಟಾನುಗಟಿ ನಾಯಕರು ಕಾಂಗ್ರೆಸ್‌ ಸೇರ್ಪಡೆ'

ಜ್ವಲಂತ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್‌ ಹೋರಾಟ ನಡೆಸಿದರೆ ಬಿಜೆಪಿಯವರಿಗೆ ಕೊರೋನಾ, ಚಳಿಜ್ವರ ಬರುತ್ತಿದೆ. ನಮ್ಮ ಹೋರಾಟವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಂಬಲಿಸುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ 130ರಿಂದ 135 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಳೆಗೆ ಬೆಳೆಹಾನಿಯಾದ ಹಾಗೂ ಫಸಲ್‌ ಬಿಮಾ ಯೋಜನೆಯಡಿ ಬೆಳೆ ವಿಮೆ ತುಂಬಿದ ರೈತರಿಗೆ ಪರಿಹಾರ ನೀಡಿಲ್ಲ. ಕೆಲವೇ ರೈತರ ಬ್ಯಾಂಕ್‌ ಖಾತೆಗೆ 2ರಿಂದ 3 ಸಾವಿರ ಜಮೆ ಆಗಿದೆ. ಈ ಬಗ್ಗೆ ಶಾಸಕರು, ಅಧಿಕಾರಿಗಳು ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಬ್ಲಾಕ್‌ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಮುಖಂಡರಾದ ಅಮರೇಶ ಗೋನಾಳ, ಸಿದ್ದಪ್ಪ ನಿರ್ಲೂಟಿ, ವೀರೇಶ ಸಮಗಂಡಿ, ರವಿ ಪಾಟೀಲ್‌, ಗೋವರ್ಧನಮ್ಮ ರೆಡ್ಡಿ, ನೂರಸಾಬ್‌ ಗಡ್ಡಿಗಾಲ, ಶರಣಪ್ಪ ಭತ್ತದ, ಹೊನ್ನೂರುಸಾಬ್‌ ಉಪ್ಪು ಇದ್ದರು.

ಬಿಜೆಪಿ ಸರ್ಕಾರಕ್ಕೆ ಜನ ಬೇಸತ್ತು ಹಿಡಿಶಾಪ

ಯಲಬುರ್ಗಾ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು(Narendra Modi) 7ವರ್ಷ ಅಧಿಕಾರವಧಿಯಲ್ಲಿ ದೇಶ ಯಾವ ಅಭಿವೃದ್ದಿಯನ್ನು ಕಂಡಿಲ್ಲ ಇದರಿಂದ ಜನಸಾಮಾನ್ಯರು ಬೇಸತ್ತು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ(Shivaraj Tangadagi) ಹೇಳಿದ್ದರು. 

ಕಳೆದ ವರ್ಷ ಅ.02 ರಂದು ಪಟ್ಟಣದ ಪಕ್ಷದ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ, ಲಾಲಬಹುದ್ದೂರ್‌ ಶಾಸ್ತ್ರಿ ಜಯಂತಿ ನಿಮಿತ್ತ ಶನಿವಾರ ಆಯೋಜಿಸಿದ್ದ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯ ಅಭಿಯಾನ ಹಾಗೂ ತುಂಗಭದ್ರಾ ಮತ್ತು ಕೃಷ್ಣಾ ನದಿಯಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ವಿಚಾರ ಗೋಷ್ಠಿ ಹಾಗೂ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಯಾರೋ ಹೆತ್ತ ಮಗುವಿಗೆ ಬಿಜೆಪಿಯವರು ಹೆಸರಿಡುವುದು ಎಷ್ಟು ಸರಿ. ನೀವು ತಂದ ಯೋಜನೆಗಳಿಗೆ ಹೆಸರಿಡುವುದನ್ನು ಬಿಟ್ಟು ಕಾಂಗ್ರೆಸ್‌ನವರ(Congress) ಯೋಜನೆಗಳನ್ನು ನಾವೇ ಮಾಡಿದ್ದೇವೆಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದವಾಗಿದೆ.

ಜನವರಿ ಅಂತ್ಯಕ್ಕೆ ಬೊಮ್ಮಾಯಿ ಅಧಿಕಾರ ಹೋಗುತ್ತೆ: ಹೊಸ ಬಾಂಬ್ ಸಿಡಿಸಿದ ಮಾಜಿ ಸಚಿವ

ಮಾಜಿ ಪ್ರಧಾನಿ ಇಂದಿರಾಗಾಂಧಿ, ರಾಜೀವ ಗಾಂಧಿ, ಮನಮೋಹನ ಸಿಂಗ್‌ ಆಡಳಿತದ ಕಾಂಗ್ರೇಸ್‌ ಆಡಳಿತದಲ್ಲಿ ಬಡದಿನ ದಲಿತರ ಏಳ್ಗೆಗಾಗಿ ಸಾಕಷ್ಟು ಯೋಜನೆಗಳನ್ನು ನೀಡಿರುವುದನ್ನು ದೇಶದ ಜನತೆ ಇನ್ನೂ ಮರೆತಿಲ್ಲ. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರ ಖಾತೆಗೆ 15ಲಕ್ಷ ಗಳನ್ನು ಹಾಕುವುದು, ಯುವಕರಿಗೆ ಉದ್ಯೋಗ ಕೊಡಿಸುತ್ತೇನೆ ಎನ್ನುವ ಅನೇಕ ಭರವಸೆಗಳನ್ನು ನೀಡಿದ್ದ ಪ್ರಧಾನಿ ಮೋದಿಯವರೇ ನಿಮಗೆ ನಾಚಿಕೆ ಆಗಬೇಕು. ಬರುವ ಚುನಾವಣೆಯಲ್ಲಿ ಬಿಜೆಪಿ(BJP) ಪಕ್ಷವನ್ನು ಮನೆಗೆ ಕಳುಹಿಸಿ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿ ಜನರು ಸಿದ್ಧರಾಗಿದ್ದಾರೆ ಎಂದು ಹೇಳಿದ್ದರು. 

ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಕೆರೆ ತುಂಬಿಸುವ ಯೋಜನೆಗೆ 290 ಕೋಟಿ ಅನುದಾನ ನೀಡಿರುವುದು ಇಡೀ ಕ್ಷೇತ್ರದ ಜನತೆಗೆ ಗೊತ್ತಿದೆ. ಆದರೆ, ಬಿಜೆಪಿಯವರು ನಮ್ಮ ಯೋಜನೆ ಎಂದು ಸುಳ್ಳು ಹೇಳುವ ಮೂಲಕ ಕ್ಷೇತ್ರದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ. ಬರುವ ಚುನಾವಣೆಯಲ್ಲಿ ಜನರ ಆಶೀರ್ವಾದದಿಂದ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗೆ ಅಡ್ಡಿರುವ ಕಾನೂನು ತಡೆಯಾಜ್ಞೆಯನ್ನು ರಾಜೀ ಸಂದಾನದ ಮೂಲಕ ಬಗೆಹರಿಸಿಕೊಂಡು ಇಡೀ ಉತ್ತರ ಕರ್ನಾಟಕದ ನೀರಾವರಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದರು. 

Latest Videos
Follow Us:
Download App:
  • android
  • ios