ಬೆಂಗಳೂರು [ಜ.05]:  ಬಿಜೆಪಿಯ ಹಿರಿಯ ನಾಯಕರು, ಕೇಂದ್ರದ ಮಂತ್ರಿಗಳೇ ಪ್ರಧಾನಿ ಮೋದಿ ಎದುರು ಮಾತನಾಡಲು ಭಯಪಡುವಾಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನೆರೆ ಪರಿಹಾರ ವಿಚಾರದಲ್ಲಿ ರಾಜ್ಯಕ್ಕಾಗಿರುವ ಮಲತಾಯಿ ಧೋರಣೆಯನ್ನು ಮೋದಿ ಅವರ ಎದುರೇ ಪ್ರಶ್ನಿಸಿರುವುದನ್ನು ರಾಜ್ಯದ ಜನರು ಮೆಚ್ಚುತ್ತಾರೆ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಕೇಂದ್ರ ಮಂತ್ರಿಗಳು ಮತ್ತು ಬಿಜೆಪಿಯ ಹಿರಿಯ ನಾಯಕರೇ ಪ್ರಧಾನಿ ಮೋದಿ ಜೊತೆ ಮಾತನಾಡಲು ಭಯಪಡುವಾಗ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯಕ್ಕೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಮೋದಿ ಅವರ ಮುಂದೆಯೇ ಪ್ರಶ್ನಿಸಿ, ಅನುದಾನ ಬಿಡುಗಡೆಗೊಳಿಸಿ ಎಂದು ಒತ್ತಾಯಿಸಿದ್ದಕ್ಕೆ ರಾಜ್ಯದ ಜನತೆ ಸ್ವಲ್ಪಮಟ್ಟಿಗಾದರು ಅವರನ್ನು ಮೆಚ್ಚುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್‌ ನಾಯಕರಿಂದ ಒಗ್ಗಟ್ಟಿನ ಜಪ!...

ತುಮಕೂರಿನಲ್ಲಿ ನಡೆದ ರೈತ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾಗ ವೇದಿಕೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಬಳಿ ಸಿಎಂ ಯಡಿಯೂರಪ್ಪ ಅನುದಾನ ಕೋರಿದ್ದರು.