ಬೆಂಗಳೂರು, (ಜುಲೈ.22): ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಚ್​.ಎಂ. ರೇವಣ್ಣ ಅವರ ಪತ್ನಿ ಸಹೋದರಿ ಕೊರೋನಾಗೆ ಬಲಿಯಾಗಿದ್ದು, ಕುಟುಂಬಸ್ಥರಲ್ಲಿ ಸೋಂಕಿನ ಭೀತಿಯೂ ಶುರುವಾಗಿದೆ.

ನಿನ್ನೆ ರಾತ್ರಿ(ಮಂಗಳವಾರ) ಎಚ್​.ಎಂ. ರೇವಣ್ಣ ಅವರ ಪತ್ನಿಯ ಕಿರಿಯ ಸಹೋದರಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ರೇವಣ್ಣ ಅವರ ಪತ್ನಿಯ ಸಹೋದರಿ ಎಂ.ಎಸ್ ರೋಹಿಣಿಗೆ ಇತ್ತೀಚೆಗೆ ಕೊರೋನಾ ಸೋಂಕು ದೃಢಪಟ್ಟಿತ್ತು. 

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೆಂಡ್ತಿ, ಪುತ್ರಿಗೆ ಕೊರೋನಾ ಪಾಸಿಟಿವ್ ದೃಢ

ಕೂಡಲೇ ನಾದಿನಿಯನ್ನು ಸ್ವತಃ ರೇವಣ್ಣ ಅವರೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆದ್ರೆ, ಚಿಕಿತ್ಸೆ ಫಲಿಸದೆ 61 ವರ್ಷದ ರೋಹಿಣಿ ಮೃತಪಟ್ಟಿದ್ದಾರೆ.

ರೋಹಿಣಿ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ರೇವಣ್ಣ ಹಾಗೂ ಅವರ ಪುತ್ರ ಕ್ವಾರಂಟೈನ್ ಮನೆಯಲ್ಲೇ ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ. ಈ ಬಗ್ಗೆ ರೇವಣ್ಣ ತನ್ನ  ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಲ್ಲದೇ ರೇವಣ್ಣ ನಿನ್ನೆ (ಮಂಗಳವಾರ) ಅಷ್ಟೇ ಸಿದ್ದರಾಮಯ್ಯ ಅವರ ಜತೆ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಕೋವಿಡ್ ಕೇರ್ ಸೆಂಟರ್‌ ವೀಕ್ಷಣೆಗೆ ತೆರಳಿದ್ದರು.