ದಲಿತ, ಮುಸ್ಲಿಮರು ಮನಸ್ಸು ಮಾಡಿದರೆ ದಲಿತ ಸಿಎಂ: ಜಿ.ಪರಮೇಶ್ವರ್
* ಕಾಂಗ್ರೆಸ್ಸಲ್ಲಿ ಗುಂಪುಗಾರಿಕೆ ಇಲ್ಲ
* ಸಿದ್ದು ಜನ್ಮದಿನಾಚರಣೆ ತಪ್ಪಲ್ಲ
* ಸಂವಿಧಾನ ಇದ್ದರೆ ಪ್ರಜಾಪ್ರಭುತ್ವ ಇರುತ್ತದೆ
ರಾಮನಗರ(ಜು.04): ದಲಿತರು ಮತ್ತು ಮುಸಲ್ಮಾನರು ಮನಸ್ಸು ಮಾಡಿದರೆ ರಾಜ್ಯದಲ್ಲಿ ಯಾರನ್ನು ಬೇಕಾದರೂ ಮುಖ್ಯಮಂತ್ರಿ ಮಾಡಬಹುದು ಎಂದು ಮಾಜಿ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ. ತಾಲೂಕಿನ ಶ್ಯಾನುಬೋಗನಹಳ್ಳಿಯಲ್ಲಿರುವ ಎಸ್.ವಿ.ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಅಂಬೇಡ್ಕರ್ ಹಬ್ಬ ಹಾಗೂ ರಮಾಬಾಯಿ ಅಂಬೇಡ್ಕರ್ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ ಉದ್ಘಾಟಿಸಿ ಹಾಗೂ ನಂತರ ಸುದ್ದಿಗಾರರ ಜತೆಗೆ ಮಾತನಾಡಿ ಈ ವಿಚಾರ ತಿಳಿಸಿದರು.
ರಾಜ್ಯದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತ ಮತದಾರರ ಸಂಖ್ಯೆ ಹೆಚ್ಚಿದ್ದು, ಈ ಎರಡೂ ಸಮುದಾಯ ಮನಸ್ಸು ಮಾಡಿದರೆ ಮಾತ್ರ ದಲಿತ ನಾಯಕರೊಬ್ಬರು ಮುಖ್ಯಮಂತ್ರಿಯಾಗಲು ಸಾಧ್ಯ. ಕೆಲ ಮಾಧ್ಯಮಗಳು ದಲಿತ ಮುಖ್ಯಮಂತ್ರಿಯೆಂದು ವಿನಾಃ ಕಾರಣ ಪ್ರಸ್ತಾಪ ಮಾಡಿ ಗೊಂದಲ ಸೃಷ್ಟಿಸುತ್ತಿವೆ ಎಂದರು.
ಕಾಂಗ್ರೆಸ್‌ನಲ್ಲಿ ಸಿಗದ ಸೂಕ್ತ ಸ್ಥಾನಮಾನ: ಪರಮೇಶ್ವರ ಹೇಳಿದ್ದಿಷ್ಟು
ಸಂವಿಧಾನ ಇದ್ದರೆ ಪ್ರಜಾಪ್ರಭುತ್ವ ಇರುತ್ತದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ದಲಿತರು ಮತ್ತು ಅಲ್ಪಸಂಖ್ಯಾತರು ಕಾಂಗ್ರೆಸ್ ಪರ ಇರಬೇಕು. ರಾಮನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರನ್ನು ಬೆಂಬಲಿಸಬೇಕು ಎಂದರು.
ಸಿದ್ದು ಹುಟ್ಟುಹಬ್ಬ ಸಂಭ್ರಮ ತಪ್ಪೇನಿಲ್ಲ:
ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 75 ವರ್ಷ ಪೂರೈಸಿದ ಹಿನ್ನೆಲೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರೆ ತಪ್ಪೇನೂ ಇಲ್ಲ. ಒಬ್ಬ ವ್ಯಕ್ತಿ 75 ವರ್ಷ ಪೂರೈಸುವುದು ಸುಲಭವಲ್ಲ. ಸಿದ್ದರಾಮಯ್ಯರವರ ಅಭಿಮಾನಿಗಳು ಅವರ ಹೆಸರಿನಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಅಷ್ಟೆ ಎಂದರು.
ರಾಜ್ಯದಲ್ಲಿನ ಎಸ್ಸಿ, ಎಸ್ಟಿಸಮುದಾಯದ ಜನಸಂಖ್ಯೆಗೆ ತಕ್ಕಂತೆ ರಾಜ್ಯದ ಬಿಜೆಪಿ ಸರ್ಕಾರ ಆಯವ್ಯಯದಲ್ಲಿ ಅನುದಾನ ಮೀಸಲಿಟ್ಟಿಲ್ಲ. .42 ಸಾವಿರ ಕೋಟಿ ಬದಲಿಗೆ .28 ಸಾವಿರ ಕೋಟಿ ಮಾತ್ರ ಮೀಸಲಿಟ್ಟಿದೆ ಎಂದು ದೂರಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಜನಸಂಖ್ಯೆಯನ್ನು ಆಧರಿಸಿ ಎಸ್ಸಿ, ಎಸ್ಟಿಸಮುದಾಯಗಳ ಅಭಿವೃದ್ಧಿಗೆಂದು ಆಯವ್ಯಯದ ಒಟ್ಟು ಗಾತ್ರದಲ್ಲಿ ಶೇ.24ರಷ್ಟುಮೊತ್ತವನ್ನು ಮೀಸಲಿಟ್ಟಿತ್ತು. ಅದರಂತೆ ಈ ಬಾರಿ ಮಂಡನೆಯಾದ ಆಯವ್ಯಯದಲ್ಲಿ ಒಟ್ಟು .42 ಸಾವಿರ ಕೋಟಿ ಮೀಲಿಡಬೇಕಿತ್ತು. ಆದರೆ, ಬಿಜೆಪಿ ಸರ್ಕಾರ ಕೇವಲ .28 ಸಾವಿರ ಕೋಟಿ ಮಾತ್ರ ಇಟ್ಟಿದೆ. ಇಂಥ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಮತ ಕೊಡಬೇಕೇ ಎಂಬ ಕುರಿತು ಆಲೋಚಿಸಿ ಎಂದರು.