'ರಾಜ್ಯದಿಂದ ಆಯ್ಕೆಯಾದ 26 ಮಂಗಳಮುಖಿಯರಿಗೆ ಮೋದಿಯನ್ನ ಪ್ರಶ್ನಿಸುವ ತಾಕತ್ತು ಇಲ್ಲ'
ರಾಜ್ಯದ 26 ಸಂಸದರ ಕುರಿತು ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ತಮ್ಮ ಮಾತಿನ ಶೈಲಿಯಲ್ಲಿ ಲೇವಡಿ ಮಾಡಿದ್ದಾರೆ.
ವಿಜಯಪುರ, (ಜ.31): ಕಾಂಗ್ರೆಸ್ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ತಮ್ಮದೇ ಪಕ್ಷ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಿಂದ 26 ಮಂಗಳಮುಖಿಯರು ಆಯ್ಕೆಯಾಗಿ ಹೋಗಿದ್ದಾರೆ. ಪ್ರಧಾನಿ ಮೋದಿಯನ್ನ ಪ್ರಶ್ನಿಸುವ ತಾಕತ್ತು ಇವರಿಗಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದರು.
ಬಿಜೆಪಿ ಪರ ಜಮೀರ್ ಬ್ಯಾಟಿಂಗ್, ತಮ್ಮದೇ ಪಕ್ಷದ ಹಿರಿಯ ನಾಯಕಗೆ ಖಾನ್ ಟಾಂಗ್
ವಿಜಯಪುರದ ಮುದ್ದೇಬಿಹಾಳ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜಿಎಸ್‌ಟಿ ಪಾಲು ಕೇಳುವ ಧೈರ್ಯ ಯಾವೊಬ್ಬ ಸಂಸದರು ಮಾಡ್ತಿಲ್ಲ. 30 ಸಾವಿರ ಕೋಟಿ ಜಿಎಸ್‌ಟಿ ಪಾಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಿದೆ. ಅವಕಾಶ ಸಿಕ್ಕರು ತೆರಿಗೆ ಸಂಗ್ರಹಿಸೊ ಕೆಲಸ ಸಿಎಂ ಬಿಎಸ್ವೈ ಮಾಡ್ತಿಲ್ಲ. ಬಿಎಸ್ವೈ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ ಎಂದು ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್, ಬಿಜೆಪಿ ಎರೆಡು ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಇಬ್ರಾಹಿಂ, ರಾಜ್ಯದಲ್ಲಿ ಆಡಳಿತದಲ್ಲಿದ್ದೇವೆ ಎನ್ನುವ ಅರಿವು ಬಿಜೆಪಿಗಿಲ್ಲ. ವಿರೋಧ ಪಕ್ಷದಲ್ಲಿದ್ದೀವಿ ಅನ್ನೋ ಅರಿವು ಕಾಂಗ್ರೆಸ್ ನವರಿಗಿಲ್ಲ ಎಂದರು.
ಈಗಾಗಲೇ ಕಾಂಗ್ರೆಸ್‌ನಿಂದ ಅಂತರ ಕಾಪಾಡಿಕೊಂಡಿರುವ ಸಿ.ಎಂ.ಇಬ್ರಾಹಿಂ, ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಈಗಾಗಲೇ ದೇವೇಗೌಡ್ರ ಜೊತೆ ಎರಡು ಸುತ್ತಿನ ಮಾತುಕತೆಗಳು ಮುಗಿದಿದ್ದು, ಅಧಿಕೃತ ಸೇರ್ಪಡೆಯೊಂದೇ ಬಾಕಿ ಇದೆ.