ಕಾಂಗ್ರೆಸ್‌ಗೆ ತಲೆನೋವಾದ ಚಿಕ್ಕಮಗಳೂರು ಟಿಕೆಟ್..!

ಇತ್ತೀಚಿಗೆ ಬಿಜೆಪಿಯಿಂದ ವಲಸೆ ಬಂದಿರುವ ಎಚ್. ಡಿ. ತಮ್ಮಯ್ಯಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡದಂತೆ ಚಿಕ್ಕಮಗಳೂರು ಜಿಲ್ಲಾ ಮುಸ್ಲಿಂ ಅಸೋಸಿಯೇಷನ್ ಮುಖಂಡರು ಎಚ್ಚರಿಕೆ ಕೊಟ್ಟಿದ್ದಾರೆ. ಈ ಕುರಿತು ಮಾತಾಡಿರುವ ಸಂಘಟನೆಯ ಕಾರ್ಯದರ್ಶಿ ರಸೂಲ್ ಖಾನ್, ದತ್ತ ಜಯಂತಿ , ತ್ರಿವಳಿ ತಲಾಕ್, ಹಿಜಾಬ್, ಹಲಾಲ್ ಕಟ್ ಸಂದರ್ಭದಲ್ಲಿ ಮುಸ್ಲಿಂ ಸಮುದಾಯವನ್ನು ನಿಂದಿಸಿದ ಇವರಿಗೆ ಟಿಕೆಟ್ ನೀಡುವುದು ಸೂಕ್ತ ಅಲ್ಲ ಎಂದು ಹೇಳಿದರು.

Congress Keen Observation to Ticket in Karnataka Assembly Elections 2023 grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಏ.05): ಕಾಫಿನಾಡು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ಸಿನಲ್ಲಿ ದಿನದಿಂದ ದಿನಕ್ಕೆ ಬಂಡಾಯದ ಕಾವು ಜೋರಾಗ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ತಮ್ಮಯ್ಯ ವಿರುದ್ಧ ಸರಣಿ ಬಂಡಾಯದ ಸಭೆಗಳು ಕೂಡ ನಡೆಯುತ್ತಿದೆ. ನಿನ್ನೆ(ಮಂಗಳವಾರ) ಕೂಡ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿ ತಮ್ಮಯ್ಯ ವಿರುದ್ಧ ಅಸಮಾಧಾನದ ಕೂಗು ಮುಂದುವರಿದೆ. ಇತ್ತೀಚಿಗೆ ಪಕ್ಷ ಸೇರಿರುವ ಎಚ್.ಡಿ.ತಮ್ಮಯ್ಯಗೆ ಟಿಕೆಟ್ ಕೊಡದೇ ಕಾಂಗ್ರೆಸ್‌ನಲ್ಲಿ ಹಲವು ವರ್ಷಗಳಿಂದ ದುಡಿದವರಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ಕಾಂಗ್ರೆಸ್ ಟಿಕೆಟ್ ತಮ್ಮಯ್ಯಗೆ ನೀಡಿದ್ರೆ ಮತದಾನದಿಂದ ದೂರ ಉಳಿಯುವ ಎಚ್ಚರಿಕೆಯನ್ನು ಚಿಕ್ಕಮಗಳೂರು ಮುಸ್ಲಿಂ ಅಸೋಸಿಯೇಷನ್ ನೀಡಿದೆ. 

ಪರ್ಯಾಯ ಚಿಂತನೆಯ ಎಚ್ಚರಿಕೆ

ಇತ್ತೀಚಿಗೆ ಬಿಜೆಪಿಯಿಂದ ವಲಸೆ ಬಂದಿರುವ ಎಚ್. ಡಿ. ತಮ್ಮಯ್ಯಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡದಂತೆ ಚಿಕ್ಕಮಗಳೂರು ಜಿಲ್ಲಾ ಮುಸ್ಲಿಂ ಅಸೋಸಿಯೇಷನ್ ಮುಖಂಡರು ಎಚ್ಚರಿಕೆ ಕೊಟ್ಟಿದ್ದಾರೆ. ಈ ಕುರಿತು ಮಾತಾಡಿರುವ ಸಂಘಟನೆಯ ಕಾರ್ಯದರ್ಶಿ ರಸೂಲ್ ಖಾನ್, ದತ್ತ ಜಯಂತಿ , ತ್ರಿವಳಿ ತಲಾಕ್, ಹಿಜಾಬ್, ಹಲಾಲ್ ಕಟ್ ಸಂದರ್ಭದಲ್ಲಿ ಮುಸ್ಲಿಂ ಸಮುದಾಯವನ್ನು ನಿಂದಿಸಿದ ಇವರಿಗೆ ಟಿಕೆಟ್ ನೀಡುವುದು ಸೂಕ್ತ ಅಲ್ಲ ಎಂದು ಹೇಳಿದರು.
ಸಮುದಾಯದ ಮುಖಂಡರು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದು, ಒಂದೊಮ್ಮೆ ಕಾಂಗ್ರೆಸ್ ಮುಖಂಡರು ತಮ್ಮ ಅಭಿಪ್ರಾಯ ನಿರ್ಲಕ್ಷಿಸಿ ಟಿಕೆಟ್ ನೀಡಿದ್ದೇ ಆದಲ್ಲಿ ಪರ್ಯಾಯ ಚಿಂತನೆ ಬಗ್ಗೆ ಮತ್ತೆ ಸಭೆ ನಡೆಸಿ ನಿರ್ಧರಿಸಲಿದ್ದೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಲಿಂಗಾಯಿತರಿಗೆ ಪ್ರಾಮುಖ್ಯತೆ ಕೊಡಬೇಕಾಗಿಲ್ಲ, ಸಿಟಿ ರವಿ ಹೆಸರಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕೇಸ್

ಸಿ.ಟಿ .ರವಿ ಸೋಲಬೇಕು, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು, ಈ ಸಿಟ್ಟಿನಲ್ಲಿ ಸೂಕ್ತ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡುತ್ತದೆ ಎನ್ನುವುದು ತಮ್ಮ ಸಮುದಾಯದ ಆಶಯವಾಗಿದೆ ಎಂದರು. ಆದರೆ ಸಮುದಾಯವನ್ನು ಹೀಯಾಳಿಸಿದ, ಆರ್‌ಎಸ್ಎಸ್ ಬಲಿತ ತಮ್ಮಯ್ಯಗೆ ಟಿಕೆಟ್ ಕೊಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.

ತಮ್ಮಯ್ಯ ವಿರುದ್ಧ ಬಹಿರಂಗ ಸಭೆ : 

ಈ ಹಿಂದೆ ಕೂಡ ಕಾಂಗ್ರೆಸ್ ನ ಆರು ಮಂದಿ ಟಿಕೆಟ್ ಆಕಾಂಕ್ಷಿಗಳಿಂದ ಬಹಿರಂಗ ಸಭೆಯನ್ನು ನಡೆಸಿ ಪಕ್ಷದಲ್ಲಿ ಹಲವು ವರ್ಷಗಳಿಂದ ದುಡಿದವರಿಗೆ ಟಿಕೆಟ್ ನೀಡಬೇಕು. ಈಚೆಗೆ ಪಕ್ಷ ಸೇರಿರುವ ಎಚ್.ಡಿ.ತಮ್ಮಯ್ಯಗೆ ಮಣೆ ಹಾಕಿದರೆ, ಆತನ ವಿರುದ್ಧ ವಾಗಿ ಕೆಲಸ ಮಾಡಿ ಸೋಲಿಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಅಷ್ಟೆ ಅಲ್ಲದೆ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಆರು ಮಂದಿ ಪೈಕಿ ಯಾರಿಗೇ ಟಿಕೆಟ್ ನೀಡಿದರೂ ನಮ್ಮ ವಿರೋಧ ಇಲ್ಲ ಒಗ್ಗಟ್ಟಲ್ಲಿ ಕೆಲಸ ಮಾಡ್ತೀವಿ. ಆದರೆ ಹೆಚ್.ಡಿ.ತಮ್ಮಯ್ಯ ಅವರಿಗೆ ಟಿಕೆಟ್ ನೀಡಿದರೆ ಅವರನ್ನು ಸೋಲಿಸುತ್ತೇವೆ ಎಂದು ಈ ಹಿಂದೆ ಟಿಕೆಟ್ ಆಕಾಂಕ್ಷಿಗಳಿಂದ ಬಹಿರಂಗ ಸಭೆ ನಡೆಸಿ ಹೇಳಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios