*  ಅಗತ್ಯ ವಸ್ತುಗಳ ಬೆಲೆ ನಿತ್ಯ ಏರಿಸುತ್ತಿದೆ*  ಕೆಟ್ಟ ಸರ್ಕಾರದ ವಿರುದ್ಧ ರಾಜ್ಯದ ಜನ ರೋಸಿದ್ದಾರೆ*  ಈ ಸರ್ಕಾರವನ್ನು ಕಿತ್ತೆಸೆಯಲು ಕಾಯುತ್ತಿದ್ದಾರೆ  

ಹೊಸಪೇಟೆ(ಮೇ.12): 2023ರ ಚುನಾವಣೆಯಲ್ಲಿ(Karnataka Assembly Election 2023) ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಪ್ರ. ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಸಿರಾಜ್ಶೇಖ್(Siraj Shekh) ಭವಿಷ್ಯ ನುಡಿದರು. ನಗರದ ಮೀರ್‌ ಆಲಂ ಟಾಕೀಸ್‌ ಬಳಿಯ ಕಾಂಗ್ರೆಸ್(Congress) ಭವನದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಬಿಜೆಪಿ ಸರ್ಕಾರ(BJP Government) ಅಭಿವೃದ್ಧಿ ಕಾಮಗಾರಿಗಳಲ್ಲಿ ಶೇ. 40 ಕಮಿಷನ್(40% Commission) ಪಡೆಯುತ್ತಿದೆ, ಹೊರತು ಜನರಿಗಾಗಿ ಏನು ಮಾಡುತ್ತಿಲ್ಲ. ಹೀಗಾಗಿ ಸುಖಾಸುಮ್ಮನೇ ಕಾಲು ಕೆರೆದು ಜಗಳ ಹಚ್ಚಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

World Yoga Day: ಮೇ. 15 ರಿಂದ ಹಂಪಿ ಸ್ಮಾರಕಗಳ ಎದುರು ಯೋಗ ಅಭಿಯಾನ: ವಚನಾನಂದ ಶ್ರೀ

ಬಿಜೆಪಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಪೆಟ್ರೋಲ್, ಡಿಸೇಲ್, ಸಿಲಿಂಡರ್, ಅಡುಗೆ ಎಣ್ಣೆ, ರಸಗೊಬ್ಬರ ಹಾಗೂ ಅಗತ್ಯ ವಸ್ತುಗಳ ಬೆಲೆ ನಿತ್ಯ ಏರಿಸುತ್ತಿದೆ. ಇದರಿಂದ ರಾಜ್ಯದ ಜನ ಈ ಕೆಟ್ಟ ಸರ್ಕಾರದ ವಿರುದ್ಧ ರೋಸಿ ಹೋಗಿ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಈ ಸರ್ಕಾರವನ್ನು ಕಿತ್ತೆಸೆಯಲು ಕಾಯುತ್ತಿದ್ದಾರೆ. ರಾಜ್ಯದಲ್ಲಿ(Karnataka) ದಲಿತ, ಹಿಂದುಳಿದ, ಅಲ್ಪಸಂಖ್ಯಾತರು, ಬಡವರು, ಕಾರ್ಮಿಕರು, ಜನಸಾಮಾನ್ಯರು ಬದುಕಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು ಎಂದರು.

ಮುಖಂಡರಾದ ಡಿ. ವೆಂಕಟರಮಣ, ಕೆ.ಎಂ. ಹಾಲಪ್ಪ, ತಮ್ಮನಳ್ಳೆಪ್ಪ, ಚೇತನಕುಮಾರ್‌ ಜೈನ್, ನೂರ್‌ ಜಹಾನ್, ಬಡಾವಲಿ, ದಲ್ಲಾಲಿ ಕುಬೇರ, ವಿ. ಗಾಳೆಪ್ಪ, ಸಿದ್ದರಾಮ, ಬಾಲೇಸಾಬ್, ಕೇಶವ, ಸದ್ದಾಂ, ಸಿ. ಕೃಷ್ಣ ಇತರರಿದ್ದರು.

2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೆ 10 ಕೆ.ಜಿ. ಉಚಿತ ಅಕ್ಕಿ: ಸಿದ್ದರಾಮಯ್ಯ

ಬೆಳಗಾವಿ: ಮುಂಬರುವ 2023ರ ಚುನಾವಣೆಯಲ್ಲಿ ಜನಾಶೀರ್ವಾದಿಂದ ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿ ಉಚಿ​ತ​ವಾಗಿ (Rice) ಕೋಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಘೋಷಿ​ಸಿ​ದ್ದರು. ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದಲ್ಲಿ ಭಾನು​ವಾ​ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಉದ್ಘಾಟಿಸಿ ಮಾತನಾಡಿ, ಅಗತ್ಯವಸ್ತು ಬೆಲೆ ದುಪ್ಪ​ಟ್ಟಾ​ಗಿ​ದೆ. 

ಉಜ್ಜೈನಿ ಪೀಠದಲ್ಲೊಂದು ವಿಶಿಷ್ಟ ಆಚರಣೆ, ದೇವಸ್ಥಾನದ ಗೋಪುರಕ್ಕೆ ಸುರಿಯುತ್ತಾರೆ ಎಣ್ಣೆ!

ಒಂದು ಕಡೆ ಬೆಲೆ ಏರಿಕೆ ಇನ್ನೊಂದು ಕಡೆ ಲೂಟಿ ಹೊಡೆಯುವುದು ನಡೆ​ಯು​ತ್ತಿ​ದೆ. ಪಿಎಸ್‌ಐ ನೇಮಕಾತಿಯಲ್ಲಿ (PSI Recruitment Scam) ಸುಮಾರು .300 ಕೋಟಿ ಹೊಡೆದಿದ್ದಾರೆ ಎಂದು ಆರೋಪಿಸಿದರು. ಇಂಥ ಸರ್ಕಾರ ಯಾವುದೇ ಕಾರ​ಣಕ್ಕೂ ಇರ​ಬಾ​ರದು, ಇಂಥ ಸರ್ಕಾ​ರ​ವನ್ನು ಬೇರು ಸಮೇತ ಕಿತ್ತು ಎಸೆದಾಗ ದೇಶ, ನಾವು, ನೀವು ಉಳಿ​ಯು​ತ್ತೇ​ವೆ. ಈ ಸರ್ಕಾರಕ್ಕೆ ಕಣ್ಣು ಕಾಣಿಸಲ್ಲ, ಕಿವಿಯೂ ಕೇಳಿಸಲ್ಲ. ಈ ಸರ್ಕಾರದ್ದು ಎಮ್ಮೆ ಚರ್ಮ ಅಲ್ಲ, ಘೇಂಡಾಮೃಗದ ಚರ್ಮ ಎಂದು ತೀವ್ರ ಕಿಡಿಕಾರಿದ್ದರು.

ಕೈ ಜೋಡಿಸಿ ಕೇಳುವೆ ಮತ್ತೆ ಅವಕಾಶ ಕೊಡಿ: ಕೈಜೋಡಿಸಿ ಪ್ರಾರ್ಥನೆ ಮಾಡು​ತ್ತೇನೆ, ಮತ್ತೆ ಕಾಂಗ್ರೆಸ್‌ಗೆ (Congress) ಅವಕಾಶ ಕೊಡಿ. ಕೊರೋನಾ (Corona) ಕಾಲ​ದಲ್ಲಿ ಅನ್ನಭಾಗ್ಯ ಕಾರ್ಯಕ್ರಮ ಇಲ್ಲದಿದ್ದರೆ ಜನ ಬದುಕಲು ಆಗು​ತ್ತಿತ್ತಾ? ರಾಜ್ಯದಲ್ಲೀಗ ಜನ ವಿರೋಧಿ ಸರ್ಕಾರ ಅಧಿ​ಕಾ​ರ​ದ​ಲ್ಲಿದೆ. ಈ ಸರ್ಕಾರ ಯಾವುದೇ ಕಾರ​ಣಕ್ಕೂ ಮುಂದು​ವ​ರಿ​ಯ​ಬಾ​ರ​ದು ಎಂದು ಆಕ್ರೋಶ ಹೊರ​ಹಾ​ಕಿ​ದ​ರು.