ಕಾಂಗ್ರೆಸ್‌ ಶ್ರೀರಾಮಮಂದಿರ ರೀವೆಂಜ್‌ ತೀರಿಸಿಕೊಳ್ಳಲು ಹೊರಟಿದೆ: ಪ್ರಲ್ಹಾದ್‌ ಜೋಶಿ

ಶ್ರೀರಾಮ ಮಂದಿರ ಹೋರಾಟದ ಹಳೆಯ ಕೇಸ್‌ ರೀಓಪನ್ ಮಾಡಿ ಹೋರಾಟಗಾರರನ್ನು ಬಂಧಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ರೀವೆಂಜ್‌ ತೀರಿಸಿಕೊಳ್ಳಲು ಹೊರಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಟುವಾಗಿ ಟೀಕಿಸಿದರು. 

Congress is going to take revenge on Sriram Mandir Says Pralhad Joshi gvd

ವಿಜಯಪುರ (ಜ.03): ಶ್ರೀರಾಮ ಮಂದಿರ ಹೋರಾಟದ ಹಳೆಯ ಕೇಸ್‌ ರೀಓಪನ್ ಮಾಡಿ ಹೋರಾಟಗಾರರನ್ನು ಬಂಧಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ರೀವೆಂಜ್‌ ತೀರಿಸಿಕೊಳ್ಳಲು ಹೊರಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಟುವಾಗಿ ಟೀಕಿಸಿದರು. ಜ್ಞಾನಯೋಗಾಶ್ರದಲ್ಲಿ ನಡೆದ ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾಗ ವಿಜಯಪುರ ಸೈನಿಕ ಶಾಲೆಯ ಹೆಲಿಪ್ಯಾಡ್‌ನಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೊಂದಲದಲ್ಲಿ ಮುಳುಗಿದೆ. ಕಾಂಗ್ರೆಸ್‌ಗೆ ರಾಮ ಮಂದಿರ ನಿರ್ಮಾಣ ಆಗೋದು ಬೇಕಾಗಿರಲಿಲ್ಲ. 

ರಾಮ ಮಂದಿರದ ಕಲ್ಪನೆಯೂ ಇರಲಿಲ್ಲ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ವಿರೋಧ ಮಾಡಿದ್ದರು ಎಂದರು. ರಾಮ ಕೇವಲ ಕಲ್ಪನೆ ಎಂದು ನ್ಯಾಯಾಲಯದಲ್ಲಿ ವಾದ ಮಾಡಿದ್ದರು. ಆದರೆ, ಈಗ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ತಲೆ ಎತ್ತಿದೆ. ಕಾಂಗ್ರೆಸ್‌ಗೆ ಹೊಟ್ಟೆ ಕಿಚ್ಚು, ಆತಂಕ ಶುರುವಾಗಿದೆ. ರಾಮ ಮಂದಿರ ಉದ್ಘಾಟನೆಗೆ ಹೋಗಬೇಕೋ ಬೇಡವೋ ಎಂಬ ಕನ್‌ಫ್ಯೂಜ್‌ನಲ್ಲಿದ್ದಾರೆ ಎಂದು ಹೇಳಿದರು.

ಆರ್ಥಿಕ ಪ್ರಗತಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಸನ್ನಿಹಿತ: ಪ್ರಲ್ಹಾದ್‌ ಜೋಶಿ

ಈಗ ರಾಮಮಂದಿರವನ್ನು ಪ್ರಧಾನಿ ಉದ್ಘಾಟಿಸುವ ಬಗ್ಗೆ ಖ್ಯಾತೆ ತೆಗೆಯುತ್ತಿದ್ದಾರೆ. ಇದನ್ನು ಜನರು ಒಪ್ಪದಿದ್ದಾಗ ರಾಮಮಂದಿರ ಹೋರಾಟದ ಹಳೆಯ ಕೇಸ್‌ ರೀಓಪನ್‌ ಮಾಡಿ ಹಿಂದು ಕಾರ್ಯಕರ್ತರನ್ನು ಬಂಧಿಸುವ ನೀಚ ಕೃತ್ಯಕ್ಕೆ ಕೈ ಹಾಕಿದೆ. 72 ವರ್ಷದ ವ್ಯಕ್ತಿಯನ್ನು ಸಹ ಬಂಧಿಸಿದ್ದಾರೆ. ಹೊಟ್ಟೆ ಕಿಚ್ಚಿನಿಂದ ಕಾಂಗ್ರೆಸ್ ವರ್ತಿಸುತ್ತಿದ್ದು, ರಾಮಮಂದಿರದ ರೀವೆಂಜ್‌ ತೀರಿಸಿಕೊಳ್ಳುತ್ತಿದೆ ಎಂದು ಹೇಳಿದರು.

ಪ್ರಕರಣದಲ್ಲಿ ಇನ್‌ಸ್ಪೆಕ್ಟರ್‌ ದ್ವೇಷ ಭಾವನೆಯಿಂದ ವರ್ತಿಸುತ್ತಿದ್ದಾನೆ ಎಂದು ಆರೋಪಿಸಿದ ಅವರು, ಈ ವಿಚಾರದಲ್ಲಿ ಬಿಜೆಪಿ ಕಾನೂನು, ರಾಜಕೀಯ, ಸಾಮಾಜಿಕ ಹೋರಾಟ ಮಾಡಲಿದೆ. ಡಿಜೆ, ಕೆಜಿ ಹಳ್ಳಿ ಗಲಭೆಯಲ್ಲಿ ಭಾಗಿಯಾದವರನ್ನು ಜೈಲಿನಿಂದ ಬಿಡುವಂತೆ ಪತ್ರ ಬರೆಯುತ್ತೀರಿ. ಸಿದ್ದರಾಮಯ್ಯನವರೇ ನೀವು ಏನು ಮಾಡಲು ಹೊರಟಿದ್ದೀರಿ? ರಾಜ್ಯದಲ್ಲಿ ಐಸಿಸ್‌, ಮೊಘಲ್ , ಇಸ್ಲಾಮಿಕ್ ಸರ್ಕಾರ ನಡೆಸುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸಿಎಂಗಳನ್ನು ಆಹ್ವಾನಿಸಿಲ್ಲ: ಅಯೋಧ್ಯೆಯ ಶ್ರೀ ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯರನ್ನು ಆಹ್ವಾನಿಸಿಲ್ಲ ಎಂಬ ಆಂಜನೇಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಿಎಂಗಳನ್ನೂ ಉದ್ಘಾಟನೆಗೆ ಕರೆದಿಲ್ಲ. ಭಾರತ ಸರ್ಕಾರದ ಸಚಿವನಾದ ನನ್ನನ್ನೂ ಆಹ್ವಾನಿಸಿಲ್ಲ. ಅಷ್ಟೇ ಏಕೆ ನೀವು ಬರಲೇಬೇಡಿ ಎಂದು ಹೇಳಿದ್ದಾರೆ. ಅಲ್ಲಿ ಜಾಗ ಇಲ್ಲ, ಸೀಮಿತ ವ್ಯವಸ್ಥೆ ಇದೆ. ಯಾರನ್ನು ಕರೆಯಬೇಕು, ಕರೆಯಬಾರದು ಎಂಬುದು ರಾಮಮಂದಿರ ಟ್ರಸ್ಟ್ ಕಮಿಟಿ ಸ್ವತಂತ್ರವಾಗಿ ನಿರ್ಧಾರ ಮಾಡುತ್ತದೆ. ನೀವೇನು ಸರ್ಕಾರ ನಡೆಸುತ್ತಿದ್ದೀರೋ ಅಥವಾ ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಪ್ರೀತಿ ಗಳಿಸಲು, ಆಧಿಕಾರ ಪಡೆಯಲು ಸರ್ಕಾರ ನಡೆಸುತ್ತಿರೋ ಎಂದು ಎಂದು ಪ್ರಶ್ನಿಸಿದ ಅವರು, ಸಚಿವ ಆಂಜನೇಯನಿಗೆ ಸದ್ಬುದ್ಧಿ ಬರಲಿ ಎಂದು ಹೇಳಿದರು.

ಬಿಎಸ್ವೈ, ಬಿವೈವಿ ಬಗ್ಗೆ ಯತ್ನಾಳ್‌ ಹಗುರ ಮಾತು ಸರಿಯಲ್ಲ: ಪ್ರಲ್ಹಾದ್‌ ಜೋಶಿ

ಸಿದ್ದೇಶ್ವರ ಶ್ರೀಗಳ ಜೊತೆಗೆ ನಿಕಟ ಸಂಬಂಧ: ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮ ವಿಚಾರವಾಗಿ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳಿಗೂ ನನಗೂ ನಿಕಟ ಸಂಬಂಧ ಇತ್ತು. ಬುಕ್ ಬಿಡುಗಡೆ ಬಗ್ಗೆಯೂ ಮಾತನಾಡಿದ್ದೆವು. ಹಲವು ದೃಷ್ಟಿಯಿಂದ ಸಂಬಂಧ ಇತ್ತು. ಸಿದ್ದೇಶ್ವರ ಶ್ರೀಗಳು ಆದರ್ಶ ಸಂತ. ಭಾರತ ಸರ್ಕಾರದ ಪರವಾಗಿ ಬಂದಿದ್ದು, ನಾನು ಕಣ್ಣಾರೆ ಕಂಡ ದೇವರಿಗೆ ನಮನ ಸಲ್ಲಿಸಲು ಬಂದಿದ್ದೇನೆ ಎಂದು ಹೇಳಿದರು.

Latest Videos
Follow Us:
Download App:
  • android
  • ios