ಕಾಂಗ್ರೆಸ್ ದಲಿತ ವಿರೋಧಿಯಾಗಿದೆ: ಕೇಂದ್ರ ಸಚಿವ ಭಗವಂತ ಖುಬಾ
ಬಿಜೆಪಿ ಸರ್ಕಾರದ ಆಡಳಿತದಲ್ಲಿ ಅನೇಕ ಯೋಜನೆಗಳನ್ನು ನೀಡಲಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರ ಅವುಗಳನ್ನು ದ್ವೇಷ ಭಾವನೆಯಿಂದ ತಡೆಹಿಡಿಯಲಾಗಿದೆ ಎಂದ ಕೇಂದ್ರ ಸಚಿವ ಭಗವಂತ ಖುಬಾ
ಚಿಂಚೋಳಿ(ಸೆ.16): ಬೀದರ್ ಲೋಕಸಭಾ ಮತಕ್ಷೇತ್ರದ ಚಿಂಚೋಳಿ ಮತಕ್ಷೇತ್ರದಲ್ಲಿ ಕಳೆದ ಒಂಭತ್ತು ವರ್ಷಗಳಲ್ಲಿ 6 ಕೋಟಿ ರು.ಗಳಲ್ಲಿ 221 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನೂ 2 ಕೋಟಿ ರು.ಗಳಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖುಬಾ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಅನೇಕ ಯೋಜನೆಗಳನ್ನು ನೀಡಲಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರ ಅವುಗಳನ್ನು ದ್ವೇಷ ಭಾವನೆಯಿಂದ ತಡೆಹಿಡಿಯಲಾಗಿದೆ ಎಂದರು. ಅನೇಕ ವರ್ಷಗಳಿಂದ ಐನಾಪೂರ ವಲಯದಲ್ಲಿ ಸಾವಿರಾರು ರೈತರು ಕಂಡಿದ ಐನಾಪೂರ ಏತನೀರಾವರಿ ಯೋಜನೆಗೆ ಸರಕಾರದಿಂದ ಅನುದಾನ ನೀಡಲಾಗಿದೆ.
ಸಚಿವ ಈಶ್ವರ ಖಂಡ್ರೆ ಜನಸ್ಪಂದನ ನೆಪ ಮಾತ್ರ: ಕೇಂದ್ರ ಸಚಿವ ಭಗವಂತ ಖೂಬಾ
ಕೇಂದ್ರ ಫಸಲ್ ವಿಮೆ ಯೋಜನೆ ಅಡಿಯಲ್ಲಿ 33 ಕೋಟಿ ರೈತರಿಗೆ ಪರಿಹಾರ ದೊರಕಿದೆ. ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 9 ಕೋಟಿ ರು. 27ಸಾವಿರ ರೈತರ ಖಾತೆಗೆ ಹಣ ಜಮೆ ಮಾಡಲಾಗಿದೆ. ಎಸ್.ಡಿ.ಆರ್.ಎಫ್ ಮತ್ತು ಎಸ್.ಡಿ.ಎಫ್‌ದಿಂದ 20ಕೋಟಿ ರು. ಪರಿಹಾರ ಮಂಜೂರಿಗೊಳಿಸಲಾಗಿದೆ ಎಂದರು.
ಜಿಲ್ಲೆಯ 1,12,08 ಪಡಿತರ ಆಹಾರ ಪಡೀತರ ಚೀಟಿದಾರರಿಗೆ ಗರೀಬ್‌ಕಲ್ಯಾಣ ಅನ್ನಯೋಜನೆ ಅಡಿಯಲ್ಲಿ ಅಕ್ಕಿ ಕೊಡಲಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 35 ಸಾವಿರ ಬಡ ಕುಟುಂಬಗಳಿಗೆ ಸಹಾಯ ನೀಡಲಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ ಅಡಿಯಲ್ಲಿ 5 ಲಕ್ಷ ರು.ಗಳನ್ನು 1,57,623 ಜನರಿಗೆ ಆರೋಗ್ಯ ಕಾಡ್‌ರ್ ನೀಡಲಾಗಿದೆ. ಚಿಂಚೋಳಿ ತಾಲೂಕಿನಲ್ಲಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ 169 ಕಾಮಗಾರಿಗಳಿಗೆ 148 ಕೋಟಿ ರು. ಅನುದಾನ ನೀಡಲಾಗಿದೆ. 169 ಕಾಮಗಾರಿಗಳಲ್ಲಿ ೬೪ ಕೆಲಸಗಳು ಪೂರ್ಣಗೊಂಡಿವೆ ಎಂದು ಸಚಿವರು ತಿಳಿಸಿದರು.
ಸಚಿವ ಸಂಪುಟದಿಂದ ಈಶ್ವರ ಖಂಡ್ರೆ ಕೈಬಿಡಲು ಭಗವಂತ ಖೂಬಾ ಆಗ್ರಹ
ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ಮಂಜೂರಿಗೊಳಿಸಿದ ಅಭಿವೃದ್ಧಿ ಕೆಲಸಗಳಿಗೆ ಇಗಿನ ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿದೆ. ರಾಜ್ಯ ಸರ್ಕಾರ ರೈತ, ಹಿಂದು, ದಲಿತರ ವಿರೋಧಿಯಾಗಿದೆ. ಗ್ಯಾರಂಟಿ ನೆಪವೊಡ್ಡಿ ರೈತರ ಯೋಜನೆಗಳನ್ನು ಕೈಬಿಡಲಾಗಿದೆ. ರೈತರ ಮಕ್ಕಳಿಗೆ ನೀಡುವ ರೈತ ವಿದ್ಯಾನಿಧಿ ಯೋಜನೆಯಿಂದ ೧ ಕೋಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು ಅದನ್ನು ಸಹ ನಿಲ್ಲಿಸಲಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮಳೆ ಇಲ್ಲದೇ ಬರ ಎದುರಿಸುತ್ತಿದ್ದರು ಸಹಾ ಕಾಂಗ್ರೆಸ್ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದೆ. ರಾಜ್ಯ ಸರ್ಕಾರ ಬೆಳೆ ಪರಿಹಾರವನ್ನು ಪ್ರತಿ ಹೆಕ್ಟೇರ್‌ಗೆ 50 ಸಾವಿರ ರು. ಪರಿಹಾರವನ್ನು ನೀಡಬೇಕೆಂದು ಅಗ್ರಹಿಸಿದ ಅವರು, ವಿದ್ಯುತ್ ಬರ ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಡಿ. ಸುಧಾಕರ ದಲಿತರ ಮೇಲೆ ದೌರ್ಜನ್ಯ ನಡೆಸಿದರು. ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು. ಗೌತಮ ಪಾಟೀಲ, ಅಶೋಕ ಪಾಟೀಲ, ಸಂತೋಷ ಗಡಂತಿ, ಕೆ.ಎಂ. ಬಾರಿ, ಗೋಪಾಲರಾವ ಕಟ್ಟಿಮನಿ, ಗಿರಿರಾಜ ನಾಟೀಕಾರ, ಅಲ್ಲಮಪ್ರಭು ಹುಲಿ, ಭೀಮಶೆಟ್ಟಿ ಮುರುಡಾ ಭಾಗವಹಿಸಿದ್ದರು.