ಬೆಂಗಳೂರು, (ಜೂನ್.09): ಪೆಟ್ರೋಲ್​ ಬೆಲೆ ಏರಿಕೆ ಖಂಡಿಸಿ ಕೆಪಿಸಿಸಿ ಕಚೇರಿಯಲ್ಲಿ ಇಂದು (ಬುಧವಾರ) ಕೈ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 ಯಾರೂ ಮಾಡದ ಸಾಧನೆ ಪ್ರಧಾನಿ ಮಾಡಿದ್ದಾರೆ. ಇದನ್ನ ಸಂಭ್ರಮಿಸಬೇಕಾ(?)ಶೋಕಾಚರಿಸಬೇಕಾ ಗೊತ್ತಿಲ್ಲ, ಈ ಬೆಲೆ ಏರಿಕೆಯನ್ನ ಬಿಜೆಪಿ ಸಮರ್ಥಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆ ಆಗಿದೆ. ಹೀಗಂತ ಬಿಜೆಪಿಯವರು ಏರಿಕೆ ಅಂತಾರೆ. ಹಿಂದೆ 130 ಡಾಲರ್ ಕ್ರೂಡ್ ಆಯಿಲ್ ಬೆಲೆ ಇತ್ತು. ಆದರೆ, ಅಂದು ಪೆಟ್ರೋಲ್ ಬೆಲೆ ಹೆಚ್ಚು ಮಾಡಿರಲಿಲ್ಲ, ಇಂದು ವಿಶ್ವಮಟ್ಟದಲ್ಲಿ 70 ಡಾಲರ್ ಬೆಲೆ ಇದೆ. ಆದರೆ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದೀಗ 100 ಗಡಿಯನ್ನ ದಾಟಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕೃಷ್ಣ ಬೈರೇಗೌಡ  ಕಿಡಿಕಾರಿದರು.

ಲಸಿಕೆಗೆ 100 ಕೋಟಿ ರೂ. ನೀಡಲು ಮುಂದಾಗಿದ್ದ ಕಾಂಗ್ರೆಸ್‌ಗೆ ಬಿಗ್ ಶಾಕ್

ಇನ್ನು ಯುಪಿಎ ಅವಧಿಯಲ್ಲಿ 9.20 ಪೈಸೆ ತೆರಿಗೆ ಇತ್ತು. ಇಂದು 32.90 ರೂಪಾಯಿ ಟ್ಯಾಕ್ಸ್ ಹೆಚ್ಚು ಮಾಡಿದ್ದಾರೆ. ನೆರೆಹೊರೆಯ ರಾಷ್ಟ್ರಗಳಲ್ಲಿ ಪೆಟ್ರೋಲ್ ಕಡಿಮೆ ಇದೆ. ನೇಪಾಳದಲ್ಲಿ 71 ರೂ. ಲೀಟರ್ ಬೆಲೆ ಇದೆ. ಭೂತಾನ್​ನಲ್ಲಿ 68ರೂ. ಪೆಟ್ರೋಲ್ ಇದೆ. ಶ್ರೀಲಂಕಾದಲ್ಲಿ 59 ರೂ. ಲೀಟರ್ ಬೆಲೆ ಇದೆ. ಪಾಕಿಸ್ತಾನದಲ್ಲಿ 51 ರೂ. ಲೀಟರ್ ಪೆಟ್ರೋಲ್ ಬೆಲೆ ಇದೆ. ಅವರ ಹಣದ ಮೌಲ್ಯ ನಮ್ಮ ರೂ.ಗೆ ಮೌಲ್ಯಕ್ಕೆ ಲೆಕ್ಕ ಹಾಕಿದ್ದೇವೆ. ನಮ್ಮ ಸುತ್ತಮುತ್ತಲ ದೇಶಗಳಲ್ಲಿ ಪೆಟ್ರೊಲ್ ಕಡಿಮೆ ಇದೆ. ಆದರೆ, ನಮ್ಮಲ್ಲಿ ಡಬಲ್ ರೇಟ್ ಯಾಕೆ(?) ದುಬಾರಿ ತೆರಿಗೆಯನ್ನ ಹಾಕಿರೋದ್ರಿಂದ ಇಷ್ಟು ಏರಿಕೆ(?) ಎಂದು ಹೇಳಿದರು.

430 ರೂ. ಇದ್ದ ಗ್ಯಾಸ್ ಬೆಲೆ 820 ಸಿಲಿಂಡರ್​ಗೆ ಆಗಿದೆ. ಗ್ಯಾಸ್ ಸಬ್ಸಿಡಿಯನ್ನ ಸಂಪೂರ್ಣ ತೆಗೆದುಹಾಕಲಾಗಿದೆ. ಕೇಂದ್ರಕ್ಕೆ ದುಡ್ಡು ಮಾಡಲು ಇದೊಂದು ಮಾರ್ಗ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದ್ಯ ೩ ಲಕ್ಷ 50 ಸಾವಿರ ಕೋಟಿ ಆದಾಯ ಪೆಟ್ರೋಲ್​ನಿಂದ ಬಂದಿದೆ. ಕೇಂದ್ರ ಸರ್ಕಾರಕ್ಕೆ ಆದಾಯ ಹರಿದು ಬರ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಇಳಿಕೆ ಆಗಿದೆ. ಆದರೆ, ಇಲ್ಲಿ ಮಾತ್ರ ತೆರಿಗೆ ಬೆಲೆ ಗಗನಕ್ಕೆ ಹೋಗಿದೆ ಎಂದರು.