ದಲಿತ ನಾಯಕರ ಸರಣಿ ಸಭೆಗೆ ಕಾಂಗ್ರೆಸ್ ಹೈಕಮಾಂಡ್ ಗರಂ!
ರಾಜ್ಯದಲ್ಲಿ ಮುಡಾ ಪ್ರಕರಣ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಬಗ್ಗೆ ಗುಮಾನಿ ಹುಟ್ಟುವಂತಹ ರಾಜಕೀಯ ಚಟುವಟಿಕೆ ಶುರುವಾಗಿವೆ. ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಹಾಗೂ ಡಾ. ಎಚ್ ಎಚ್.ಸಿ. ಮಹದೇವಪ್ಪ ಸೇರಿ ತ್ರಿಮೂರ್ತಿ ಸಚಿವರ ಸತತ ಸಭೆಗಳಿಂದ ಸರ್ಕಾರ ಹಾಗೂ ಪಕ್ಷದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಿಎಂ ಹಾಗೂ ಡಿಸಿಎಂಗಳಿಗೆ ಕರೆ ಮಾಡಿದ್ದು, ಅಶಿಸ್ತು ವರ್ತನೆ, ದಲಿತ ಸಚಿವರ ಪ್ರತ್ಯೇಕ ಸಭೆ ಹಾಗೂ ಸಿಎಂ ಬದಲಾವಣೆ, ರಾಜೀನಾಮೆ ಕುರಿತ ಬಹಿರಂಗ ಹೇಳಿಕೆಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.
ಬೆಂಗಳೂರು(ಅ.10): ದಲಿತ ಸಚಿವರ ಸರಣಿ ಸಭೆ ಸೇರಿದಂತೆ ಮುಖ್ಯಮಂತ್ರಿ ಬದಲಾವಣೆ ಗುಮಾನಿ ಹುಟ್ಟುವಂಥ ರಾಜಕೀಯ ಚಟುವಟಿಕೆಯಲ್ಲಿ ಹಿರಿಯ ಸಚಿವರೇ ತೊಡಗಿರುವ ಬಗ್ಗೆ ಹೈಕಮಾಂಡ್ ಅಸಮಾಧಾನ ಗೊಂಡಿದ್ದು, ಇಂಥ ಬೆಳವಣಿಗೆ ಯನ್ನು ನಿಯಂತ್ರಿಸುವಂತೆಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂತಹ ಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವ ಹಿರಿಯ ಸಚಿವರಿಗೆ ಕರೆ ಮಾಡಿ ಅನಗತ್ಯ ಗೊಂದಲ ಉಂಟಾಗುವಂತಹ ಯಾವುದೇ ಚಟುವಟಿಕೆ ನಡೆಸದಂತೆ ತಾಕೀತು ಮಾಡಿದರು ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಮುಡಾ ಪ್ರಕರಣ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಬಗ್ಗೆ ಗುಮಾನಿ ಹುಟ್ಟುವಂತಹ ರಾಜಕೀಯ ಚಟುವಟಿಕೆ ಶುರುವಾಗಿವೆ. ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಹಾಗೂ ಡಾ. ಎಚ್ ಎಚ್.ಸಿ. ಮಹದೇವಪ್ಪ ಸೇರಿ ತ್ರಿಮೂರ್ತಿ ಸಚಿವರ ಸತತ ಸಭೆಗಳಿಂದ ಸರ್ಕಾರ ಹಾಗೂ ಪಕ್ಷದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಿಎಂ ಹಾಗೂ ಡಿಸಿಎಂಗಳಿಗೆ ಕರೆ ಮಾಡಿದ್ದು, ಅಶಿಸ್ತು ವರ್ತನೆ, ದಲಿತ ಸಚಿವರ ಪ್ರತ್ಯೇಕ ಸಭೆ ಹಾಗೂ ಸಿಎಂ ಬದಲಾವಣೆ, ರಾಜೀನಾಮೆ ಕುರಿತ ಬಹಿರಂಗ ಹೇಳಿಕೆಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಬುಧವಾರ ಕಾವೇರಿನಿವಾಸದಲ್ಲಿ ನಡೆದ ಸಭೆ ಸೇರಿ ಸತತ 2 ದಿನ ಸಿದ್ದರಾಮಯ್ಯ ಹಾಗೂ ಡಿ. ಕೆ.ಶಿವಕುಮಾರ್ ಇಬ್ಬರೂ ಸೇರಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಬಳಿಕ ಸಿಎಂ ಸಚಿವರಿಗೆ ರಾಜಕೀಯ ಅಸ್ಥಿರತೆ ಸೃಷ್ಟಿಸುವ ಚಟುವಟಿಕೆ ಬಿಟ್ಟು ಇಲಾಖೆ ಕೆಲಸಗಳಲ್ಲಿ ತೊಡಗಿ ಕೊಳ್ಳುವಂತೆ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಕುರ್ಚಿಯಲ್ಲಿ ಟಗರು ಕುಳಿತಿದೆ, ಕೆಳಗೆ ಇಳಿಸುವುದು ಅಷ್ಟು ಸುಲಭವಿಲ್ಲ: ಜಮೀರ್ ಅಹ್ಮದ್
ಮಹದೇವಪ್ಪಗೆ ಸಿಎಂ ಸೂಚನೆ:
ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ಅವರು ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಕರೆ ಮಾಡಿ ಎಲ್ಲೂ ಸಭೆಗಳಲ್ಲಿ ಸಿಎಂ ಸ್ಥಾನದ ಬಗ್ಗೆ ಹೇಳಿಕೆ ನೀಡದಂತೆ ಹೇಳಲಾಗಿದೆ ಎನ್ನಲಾಗಿದೆ.
ಸೂಚನೆ?
. ಮುಡಾ ವಿವಾದದ ಬಳಿಕ ಸಿಎಂ ಬದಲಾವಣೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ
• ಇದಕ್ಕೆ ಇಂಬು ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿದ ಕಾಂಗ್ರೆಸ್ಸಿನ ಮೂವರು ಸಚಿವರು
• ಡಾ|ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ| ಎಚ್.ಸಿ.ಮಹದೇವಪ್ಪ ಅವರಿಂದ ಸರಣಿ ಸಭೆ
# ವಿಷಯ ತಿಳಿದು ಸಿಎಂ, ಡಿಸಿಎಂಗೆ ವೇಣು ಕರೆ
• ದಲಿತ ಸಚಿವರ ಪ್ರತ್ಯೇಕ ಸಭೆ, ಸಿಎಂ ಬದಲಾವಣೆ ಹೇಳಿಕೆ ನೀಡದಂತೆ ಸೂಚಿಸಲು ತಾಕೀತು
. ಸಿದ್ದು-ಡಿಕೆಶಿ ಸಭೆ. ಮೂವರಿಗೂ ಕಟ್ಟುನಿಟ್ಟಿನ ಸೂಚನೆ