Assembly election: ಜೆಡಿಎಸ್ ನಿಂದ ಬಿಜೆಪಿಗೆ ಎಂದ ಅಶೋಕ್ ಹೇಳಿಕೆಗೆ ವ್ಯತಿರಿಕ್ತ ಉತ್ತರ ನೀಡಿದ ಸಿಟಿ ರವಿ
ಜೆಡಿಎಸ್ ಮುಖಂಡರು ಬಿಜೆಪಿಗೆ ಬರ್ತಾರೆ ಎಂಬ ಅಶೋಕ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ಸಿಟಿ ರವಿ ನಾವು ಎಲ್ಲರನ್ನೂ ಸಾರಾಸಗಟಾಗಿ ಸೇರಿಸಿಕೊಳ್ಳಲ್ಲ ಎಂದಿದ್ದಾರೆ.
ಬೆಂಗಳೂರು (ಡಿ.13): ಕಾಂಗ್ರೆಸ್ ಪದೇ ಪದೇ ಭಾರತವನ್ನು ದುರ್ಬಲಗೊಳಿಸುವ ಮಾತಾಡ್ತಿದೆ. ಎಲ್‌ಎಸಿ ಮೀರಿ ಬರಬಾರದು. ಚೀನಾದವ್ರು ಎಲ್‌ಎಸಿ ದಾಟಿ ಬಂದಾಗೆಲ್ಲ ಸಂಘರ್ಷ ಆಗುತ್ತೆ. ಆದ್ರೆ ಕಾಂಗ್ರೆಸ್ ಇದರಲ್ಲಿ ಸಣ್ಣ ರಾಜಕಾರಣ ಮಾಡ್ತಿದೆ. ಇದು ಸರಿಯಲ್ಲ, ಕಾಶ್ಮೀರದಲ್ಲೂ ಕಾಂಗ್ರೆಸ್ ಸಣ್ಣತನ ಪ್ರದರ್ಶಿಸಿತು. ಚೀನಾವನ್ನು ಟಿಬೆಟ್ ನಲ್ಲೇ ತಡೆದು ನಿಲ್ಲಿಸಿದ್ದಿದ್ರೆ ಅವರು ಇಲ್ಲಿಯವರೆಗೆ ಬರ್ತಿರ್ಲಿಲ್ಲ. ಇದು ಕಾಂಗ್ರೆಸ್ ಕಾಲದಲ್ಲೇ ಮಾಡಬೇಕಾಗಿತ್ತು, ಅವರು ಮಾಡಲಿಲ್ಲ. ಈ ಪ್ರಮಾದದಿಂದ ಸಮಸ್ಯೆ ಈಗ ಆಗ್ತಿದೆ.
ಜೆಡಿಎಸ್ ಮುಖಂಡರು ಬಿಜೆಪಿಗೆ ಬರ್ತಾರೆ ಎಂಬ ಅಶೋಕ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ಸಿಟಿ ರವಿ ನಾವು ಎಲ್ಲರನ್ನೂ ಸಾರಾಸಗಟಾಗಿ ಸೇರಿಸಿಕೊಳ್ಳಲ್ಲ. ಸಾರಾಗಟಾಗಿ ಎಲ್ಲರ ಸೇರ್ಪಡೆಗೆ ಗ್ರೀನ್ ಸಿಗ್ನಲ್ ಕೊಡಲ್ಲ. ಯಾರೇ ಬಂದರೂ ಸೇರಿಸಿಕೊಳ್ಳುವ ಮುನ್ನ ಹತ್ತಾರು ಮಾನದಂಡ ನೋಡ್ತೇವೆ. ಯಾರು ಸೂಕ್ತ, ಸೂಕ್ತವಲ್ಲ ಅಂತ ನೋಡ್ತೇವೆ ಎಂದಿದ್ದಾರೆ.
ಒಳ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಸಿಟಿ ರವಿ, ಒಡೆದು ಆಳೋದು ಕಾಂಗ್ರೆಸ್ ನೀತಿ. ಚುನಾವಣೆ ಬಂದಾಗ ಒಡೆದು ಆಳೋದಕ್ಕೆ ಮುಂದಾಗ್ತಾರೆ. ಕಳೆದ ಬಾರಿ ವೀರಶೈವ ಲಿಂಗಾಯತಕ್ಕೆ ಕೈ ಹಾಕಿದ್ರು. ಭಾರತ್ ಜೋಡೋ ಮಾಡೆಲ್ ಇದೆ ಅನ್ಸುತ್ತೆ. ಒಡೆದು ಆಳೋದೇ ಭಾರತ್ ಜೋಡೋ ಮಾಡೆಲ್. ನಾವು ಮೀಸಲಾತಿ ಪರ ಇದ್ದೇವೆ. ಹಿಂದೆ ಕಾಂಗ್ರೆಸ್ ಸರ್ಕಾರ ಇತ್ತು, ಆಗ ಯಾಕೆ ಮೀಸಲಾತಿ ಜಾರಿಗೆ ತರಲಿಲ್ಲ? ಏನು ಉತ್ತರ ಕೊಡ್ತಾರೆ? ಉತ್ತರ ಡಿಕೆಶಿ, ಸಿದ್ದರಾಮಯ್ಯ ಏನೂ ಉತ್ತರ ಕೊಡಲ್ಲ. ವಿವೇಚನಾ ರೀತಿಯಾಗಿ ಕೆಲಸ ಮಾಡಬೇಕಿದೆ. ನಮ್ಮ ಸರ್ಕಾರ ಅದನ್ನ ಮಾಡಲಿದೆ. ಕಾಂಗ್ರೆಸ್ ಅಧಿಕಾರ ಇದ್ದಾಗ ನೀವು ಯಾಕೆ ಮಾಡಲಿಲ್ಲ ಅನ್ನೋದಕ್ಕೆ ಉತ್ತರ ಕೊಡಲಿ. ಒಳ ಮೀಸಲಾತಿ ನ್ಯಾಯಯುತವಾಗಿ ಮಾಡಬೇಕಿದೆ. ಅದನ್ನ ವಿವೇಚನೆಯಿಂದ ಮಾಡಬೇಕಿದೆ. ಅದನ್ಮ ನಮ್ಮ ಸರ್ಕಾರ ಕೂಡ ಮಾಡಲಿದೆ ಎಂದರು.
ಟಿಕೆಟ್ ಹಂಚಿಕೆ ಈ ಬಾರಿ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಟಿ ರವಿ ಗೆಲುವೊಂದೆ ಮಾನದಂಡ ಅಲ್ಲ. ನಮ್ಮ ಸಿದ್ಧಾಂತ ಕೂಡಬೇಕು. ಕೆಲವು ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಆದರೆ ನಡವಳಿಕೆಯಲ್ಲಿ ಸೋತಿದ್ದಾರೆ. ನಮ್ಮ ಪಾರ್ಟಿ ಆಂತರಿಕ ಸರ್ವೆ ಮಾಡಲಿದೆ. ಹಾಗೆ ಸಾರ್ವಜನಿಕರ ಅಭಿಪ್ರಾಯ ಎರಡೂ ವರದಿ ಪಡೆಯುತ್ತೇವೆ. ಆ ವರದಿ ಆಧಾರದ ಮೇಲೆ ಸೆಂಟ್ರಲ್ ಬೋರ್ಡ್ ನಿರ್ಣಯ ಕೈಗೊಳ್ಳಲಿದೆ. ಸಣ್ಣ ಸಮುದಾಯಕ್ಕೆ ಅವಕಾಶ ಸಿಗಬೇಕು ಎನ್ನೋದು ನನ್ನ ಮೊದಲಿಂದಲೂ ವಾದ ಇದೆ. ಸಣ್ಣ ಸಮುದಾಯಕ್ಕೆ ಅವಕಾಶ ಸಿಗಬೇಕು ಎಂದಿದ್ದಾರೆ.
Assembly election: ಕಾಂಗ್ರೆಸ್ ಬೀದಿಜಗಳ ಕಾಂಪ್ರಮೈಸ್‌ಗೆ ದೆಹಲಿಯಲ್ಲಿ ಮೀಟಿಂಗ್: ಆರ್. ಅಶೋಕ್
ಇನ್ನು ಗುಜರಾತ್ ಮಾಡಲ್ ವಿಚಾರಕ್ಕೆ ಸಂಬಂಧಿಸಿದ ಮಾತನಾಡಿದ ಅವರು ಗುಜರಾತ್ ಮಾಡಲ್ ಅಂದ್ರೆ ಬರೀ ಎಲೆಕ್ಷನ್ ಮಾಡಲ್ ಅಲ್ಲ. ಡೆವಲಪ್ಮೆಂಟ್, ಪ್ರಾಮಾಣಿಕ ನೇತೃತ್ವ. ಆ ಮಾದರಿಯನ್ನು ಟೀಕಿಸ್ತಿದ್ದ ಕಾಂಗ್ರೆಸ್, ಅದನ್ನ ಅಳವಡಿಸಿಕೊಳ್ಳಲು ಹೊರಟಿರೋದು ಸಕಾರಾತ್ಮಕ ಭಾವನೆ. ಕಾಂಗ್ರೆಸ್ ಈಗಲಾದರೂ ಹೊಸ ಬದಲಾವಣೆಗೆ ಹೊರಟಿದೆ ಅನ್ನೋದು ತಿಳಿಸ್ತಿದೆ. ಗುಜರಾತ್ ಫಲಿತಾಂಶ ನಮಗೆ ಆತ್ಮವಿಶ್ವಾಸ ಹೆಚ್ಚಿಸಿದೆ. ಜೊತೆಯಲ್ಲಿ ಎಚ್ಚರಿಕೆಯನ್ನು ಕೂಡ ನೀಡಿದೆ. ಹಿಮಾಚಲದಲ್ಲಿ ಕೂದಲೆಳೆಯಲ್ಲಿ ಸೋತಿದ್ದೇವೆ. ಎಚ್ಚರಿಕೆಯಿಂದ ಕೆಲಸ ಮಾಡಿದ್ರೆ ಗೆಲ್ತೀವಿ. ಇಲ್ಲದೆ ಹೋದ್ರೆ ಹಿಮಾಚಲ ಮಾದರಿಯಲ್ಲಿ ಆಗಲಿದೆ.
Gujarat election ರಾವಣ ಮನಸ್ಸಿನ ಪಕ್ಷ ಸೋಲಲೇ ಬೇಕಿತ್ತು ಸೋತಿದೆ: ಸಿ.ಟಿ ರವಿ
ವಯಸ್ಸಾದವರಿಗೆ ಟಿಕೆಟ್ ಸಿಗಲ್ವಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಟಿ ರವಿ ಅವರು, ನಾವು ಕಾಲಕಾಲಕ್ಕೆ ಬದಲಾವಣೆ ಮಾಡಿಕೊಂಡು ಬಂದಿದ್ದೇವೆ. ಏಳನೇ ಶತಮಾನದ ಬರ್ಬರತೆಗೆ ನಾವು ಜೋತು ಬಿದ್ದವರಲ್ಲ. ಕಾಲಕಾಲಕ್ಕೆ ನಿರ್ಣಯವನ್ನು ಕೈಗೊಂಡಿದ್ದೇವೆ. ಹಾಗಂತ ವಯಸ್ಸೊಂದೆ ಮಾನದಂಡವಲ್ಲ. ಇದಂ ಮಿತ್ತಂ ಅಂತಿಲ್ಲ. ನಿನ್ನೆ ಪ್ರಮಾಣ ವಚನದಲ್ಲಿ 75 ಮೀರಿದವರಿಗೂ ಅವಕಾಶ ನೀಡಿದೆ.
ಹಣಕಾಸು ಸಚಿವರನ್ನೂ ಮಾಡಿದೆ. ಎಲ್ಲೂ ಕಾಲದಿಂದಲೂ ಸೀಮಿತವಾಗಿ ಮಾಡಿಲ್ಲ. ಆ ಯಾ ಕಾಲ ಪರಿಸ್ಥಿತಿ. ರಾಜ್ಯದ ಪರಿಸ್ಥಿತಿ ಅನುಗುಣವಾಗಿ ಮಾಡುತ್ತೇವೆ ಎಂದಿದ್ದಾರೆ.
ಯಡಿಯೂರಪ್ಪಗೆ ಸಿಎಂ ಜತೆ ಭಿನ್ನಾಭಿಪ್ರಾಯ ವಿಚಾರ: ಯಡಿಯೂರಪ್ಪ ವಿಚಾರದಲ್ಲಿ ಆಥರ ಏನೂ ಇಲ್ಲ. ಎಲ್ಲ ಜನಸಂಕಲ್ಪ ಸಭೆಗಳಿಗೂ ಯಡಿಯೂರಪ್ಪ ಸಿಎಂ ಜತೆಗೇ ಬಂದಿದ್ದಾರೆ. ಯಡಿಯೂರಪ್ಪ ಅವರಿಗೆ ರಾಷ್ಟ್ರೀಯ ಮಟ್ಟದ ಜವಾಬ್ದಾರಿಯೂ ಇದೆ. ನಮ್ಮ ಪಕ್ಷದ ವರಿಷ್ಠ ನಾಯಕರಲ್ಲಿ ಯಡಿಯೂರಪ್ಪ ಸಹ ಒಬ್ಬರು. ಅವರು ಬೇಸರಗೊಂಡಿದ್ದಾರೆ ಅನ್ನೋದು ಸುಳ್ಳು. ನಿನ್ನೆ ಅಹಮದಾಬಾದ್ ನಿಂದ ಒಟ್ಟಿಗೇ ಹೋಗೋಣ ಅಂತ ಬೊಮ್ಮಾಯಿ ಅವರೇ ಯಡಿಯೂರಪ್ಪ ಅವರನ್ನು ಕರೆದರು. ಆದರೆ ಯಡಿಯೂರಪ್ಪ ಅವರು ಇನ್ನೂ ಇಬ್ಬರ ಭೇಟಿ ಮಾಡಿ ಮಾತಾಡಿ ಬರುವುದಾಗಿ ಹೇಳಿದ್ರು. ಹಾಗಾಗಿ ಸಿಎಂ ಒಬ್ಬರೇ ಬಂದ್ರು. ಆ ರೀತಿಯ ಏನೂ ಪ್ರಶ್ನೆ ಇಲ್ಲ. 150+ ಸೀಟು ಗೆಲ್ಲಿಸೋದೇ ನನ್ನ ಗುರಿ ಅಂತ ಪದೇ ಪದೇ ಯಡಿಯೂರಪ್ಪ ಹೇಳಿದ್ದಾರೆ. ಅಷ್ಟಾದ ಮೇಲೂ ಕೂಡಾ ಅವರ ಬಗ್ಗೆ ತಪ್ಪು ಅಭಿಪ್ರಾಯ ಬರುವ ಹಾಗೆ ಪ್ರಶ್ನೆ ಕೇಳೋದು ಬೇಡ. ಯಡಿಯೂರಪ್ಪ ಬೊಮ್ಮಾಯಿ ಈಗಲೂ ಜತೆಗೆ ಇದಾರೆ, ಮುಂದೆಯೂ ಜತೆಗೇ ಇರ್ತಾರೆ ಎಂದಿದ್ದಾರೆ.