ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಶಿಸ್ತು ಮರೆತ ಕಾಂಗ್ರೆಸ್..! ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗದ ಕಾಂಗ್ರೆಸ್! ಗಣೇಶ್ ಅವರನ್ನ ಪಕ್ಷದಿಂದ ಉಚ್ಚಾಟಿಸಿದೇ ಕೇಲವ ಅಮಾನತ್ತು ಮಾಡಿ ಕಣ್ಣೋರೆಸುವ ತಂತ್ರ! ಅತೃಪ್ತರ ಆಟ ನೋಡ್ತಾ ಕಣ್ಮುಚ್ಚಿ ಕುಳಿತ ಕೈ!
ಬೆಂಗಳುರು, [ಜ.26]: ಕಾಂಗ್ರೆಸ್ ಶಿಸ್ತುಬದ್ಧ ಪಕ್ಷ ಎಂದೇ ಬಿಂಬಿತವಾಗಿದೆ. ಆದ್ರೆ ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳು ತನ್ನ ಶಿಸ್ತು ಮರೆತಿದೆ.
ಇದಕ್ಕೆ ಪೂರಕವೆಂಬಂತೆ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರನ್ನು ಸಾಂಕೇತಿಕವಾಗಿ ಪಕ್ಷದಿಂದ ಅಮಾನತು ಮಾಡಿದ್ದೇನೋ ನಿಜ. ಆದ್ರೆ ಗಣೇಶ್ ಅವರನ್ನ ಪಕ್ಷದಿಂದ ಉಚ್ಚಾಟಿಸಿದೇ ಕೇಲವ ಅಮಾನತ್ತು ಮಾಡಿ ಕಣ್ಣೋರೆಸುವ ತಂತ್ರ ಅನುಸರಿಸಿದೆ.
ರೆಸಾರ್ಟ್ ಬಡಿದಾಟ: 6 ದಿನಗಳಾದ್ರೂ ಆನಂದ್ ಸಿಂಗ್ ಕಡೆ ತಲೆಹಾಕದ ತನಿಖಾ ಸಮಿತಿ!
ಮತ್ತೊಂದಡೆ ಯಾವುದೇ ಕಾರಣಕ್ಕೂ ಅರೆಸ್ಟ್ ಆಗದಂತೆ ಕಾಂಗ್ರೆಸ್ ನೋಡಿಕೊಳ್ಳಿತ್ತಿದೆ ಎನ್ನುವ ಮಾತುಗಳು ರಾಜ್ಯ ರಾಜಕರಾಣದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ ಆನಂದ ಸಿಂಗ್ ಮತ್ತು ಗಣೇಶ್ ನಡುವೆ ಸಂಧಾನ ಮಾಡಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ಡಿ.ಕೆ ಶಿವಕುಮಾರ್ ಗೆ ಜವಾಬ್ದಾರಿ ನೀಡಿದ್ದಾರೆ ಎನ್ನಲಾಗಿದೆ.
ಅತೃಪ್ತರ ಮುಂದೆ ಮಂಡಿಯೂರಿದ ಕೈ
ಹೌದು....ಕಳೆದ ಹಲವು ದಿನಗಳಿಂದ ರಮೇಶ್ ಜಾರಕಿಕೊಳಿ ಅವರು ಪರೋಕ್ಷವಾಗಿ ಕಾಂಗ್ರೆಸ್ ಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಆದರೂ ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ರಮೇಶ್ ಜಾರಕಿಜೊಳಿ ಅವರನ್ನು ತಲೆ ಮೇಲೆ ಕೂಡಿಸಿಕೊಂಡಿದೆ.
ಗೈರಾದ ಶಾಸಕರಿಗೆ ಶೋಕಾಸ್ ನೋಟಿಸ್ ಕೊಟ್ಟ ಕಾಂಗ್ರೆಸ್:ನೋಟಿಸ್ನಲ್ಲೇನಿದೆ?
ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ರೆ ಸುಮ್ಮನಿರಲ್ಲ ಎಂಬ ಸಂದೇಶ ರವಾನಿಸಿದ್ದ ರಾಹುಲ್, ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೆಳಗಿಳಿಸಿ ಖಡಕ್ ಎಚ್ಚರಿಕೆ ನೀಡಿದ್ದರು.
ಇದೀಗ ರಮೇಶ್ ಜಾರಕಿಹೊಳಿ ಗುಂಪುಗಾರಿಕೆ ಜೊತೆಗೆ ಕೈ ಶಾಸಕರ ಕಿತ್ತಾಟ ಬೀದಿಗೆ ಬಂದಿದ್ರೂ ಕೈ ಪಾಳೆಯ ಕೈ ಕಟ್ಟಿ ಕುಳಿತಿದೆ. ಸಾರ್ವಜನಿಕ ವಲಯದಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗ್ತಿದ್ರು ಸರ್ಕಾರವನ್ನು ಉಳಿಸಿಕೊಳ್ಳಲು ತನ್ನ ಶಿಸ್ತು ಮರೆಯುತ್ತಿದೆ.
ಒಂದು ವೇಳೆ ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಂಡರೆ ಏನಾಗುತ್ತೋ ಎನ್ನುವ ಭಯದಿಂದ ಹಿಂಜರಿಯುತ್ತಿದೆ. ಇದು ರಮೇಶ್ ಜಾರಕಿಹೊಳಿ ಕಥೆಯಾದ್ರೆ, ನಾಗೇಂದ್ರ ಉಮೇಶ್ ಜಾದವ್ ಮೇಲೂ ಕ್ರಮ ಕೈಗೊಳ್ಳಲು ಸಾಧ್ಯವಾಗ್ತಿಲ್ಲ.
ಬಿಕ್ಕಟ್ಟಿಗೆ ಪರಿಹಾರ ಸೂಚಿಸಿ: ರೆಸಾರ್ಟ್ ಮಾಲೀಕರಿಗೆ ರಾಜ್ಯಪಾಲರ ಮನವಿ?
ಕ್ರಮಕ್ಕೆ ಮುಂದಾದ್ರೆ ಮೈತ್ರಿ ಬಜೆಟ್ ಸೆಷನ್ ನಲ್ಲಿ ಶಾಸಕರು ತಿರತುಗಿಬಿದ್ರೆ ಬಜೆಟ್ ಬಿಲ್ ಪಾಸ್ ಆಗೋದು ಕಷ್ಟವಾಗಲಿದ್ದು, ವಿಧಾನ ಸಭೆಯಲ್ಲಿ ಬಜೆಟ್ ಬಿದ್ದರೆ ಮೈತ್ರಿ ಸರ್ಕಾರವು ಉರುಳಿಹೋಗಲಿದೆ ಎನ್ನುವ ಭಯ ಕಾಂಗ್ರೆಸ್ ಗೆ ಕಾಡುತ್ತಿದೆ.
ಒಟ್ಟಿನಲ್ಲಿ ರಾಜ್ಯ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳು ಕಾಂಗ್ರೆಸ್ ತನ್ನ ಶಿಸ್ತುನ್ನು ಬಲಿ ಕೊಡುತ್ತಿರುವುದಂತೂ ಸತ್ಯ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 26, 2019, 5:54 PM IST