Karnataka MLC Poll Results 2022: ಕಾಂಗ್ರೆಸ್‌ನ​ ಪ್ರಕಾಶ್ ಹುಕ್ಕೇರಿಗೆ ಜಯ, ಬಿಜೆಪಿಗೆ ಮುಖಭಂಗ

* ಕರ್ನಾಟಕ ವಿಧಾನಪರಿಷತ್ ಚುನಾವಣೆ ಫಲಿತಾಂಶ
* ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು
* ಬಿಜೆಪಿಯ ಅರುಣ್ ಶಹಾಪುರ್ ವಿರುದ್ಧ ಗೆದ್ದು ಬೀಗಿದ ಪ್ರಕಾಶ ಹುಕ್ಕೇರಿ

congress candidate prakash hukkeri wins northwestern teachers constituency rbj

ಬೆಳಗಾವಿ, (ಜೂನ್.15) : ಕರ್ನಾಟಕ ವಿಧಾನಪರಿಷತ್ ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ್‌ ಹುಕ್ಕೇರಿ ಭರ್ಜರಿ ಗೆಲುವು ಸಾಧಿಸಿದ್ದು.  ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

20 ಸಾವಿರ ಮತಗಳ ಎಣಿಕೆ ಪೂರ್ಣಗೊಂಡದ್ದು,  20,000 ಮತಗಳ ಪೈಕಿ  ಪ್ರಕಾಶ ಹುಕ್ಕೇರಿ ಅವರು 10,520 ಮತ ಪಡೆದಿದ್ದಾರೆ. ಇನ್ನು ಪ್ರತಿಸ್ಪರ್ಧಿ ಬಿಜೆಪಿಯ ಅರುಣ್ ಶಹಾಪುರ್ 6008 ಮತ ಪಡೆದು ಸೋಲೋಪ್ಪಿಕೊಂಡರು. ಈ ಮೂಲಕ  ಪ್ರಕಾಶ್ ಹುಕ್ಕೇರಿ 4512 ಮತಗಳ ಅಂತರದಿಂದ ಭರ್ಜರಿ ಗೆಲುವಿನ ನಗೆ ಬೀರಿದ್ದಾರೆ.

ಪರಿಷತ್ ಚುನಾವಣೆ ಫಲಿತಾಂಶ: ಬಿಜೆಪಿಯ ಬಸವರಾಜ ಹೊರಟ್ಟಿಗೆ ದಾಖಲೆ ಗೆಲುವು

ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳಿಗೆ ಜೂನ್ 13ರಂದು ನಡೆದಿತ್ತು. ವಾಯವ್ಯ ಪದವೀಧರ, ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿದ್ದವು.  ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ 80, ಮತದಾನವಾಗಿತ್ತು

ಅಭಿಮಾನಿಗಳಿಂದ ಸಂಭ್ರಮಾಚರಣೆ
ಹೌದು....ಚುನಾವಣಾಧಿಕಾರಿ ಅಧಿಕೃತ ಘೋಷಣೆ ಮೊದಲೇ ಪ್ರಕಾಶ ಹುಕ್ಕೇರಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೆಳಗಾವಿಯ ಮತ ಎಣಿಕೆ ಕೇಂದ್ರದ ಎದುರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಪರಸ್ಪರ ಗುಲಾಲ್ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್ ಪ್ರತಿಕ್ರಿಯೆ
ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಸೋಲು ಒಪ್ಪಿಕೊಂಡ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್, ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು ಸ್ವೀಕರಿಸಿದ್ದೇನೆ. ನನ್ನ ಪರ ಮತ ಚಲಾಯಿಸಿರುವ ಶಿಕ್ಷಕರಿಗೆ ಅಭಿನಂದನೆ ಎಂದರು.

ರಾಜಕಾರಣ ಒಂದು ಹೋರಾಟ ಒಪ್ಪಿಕೊಂಡಿದ್ದೇನೆ. ಜನಪ್ರತಿನಿಧಿಗಳು, ಕಾರ್ಯಕರ್ತರು ಪ್ರಾಂಜಲ ಮನಸ್ಸಿನಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ನಾನು ಪ್ರಜಾತಂತ್ರದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ. ಶಿಕ್ಷಕರು ಆ ಒಂದು ಕ್ಷಣಕ್ಕೆ ತಲೆದೂಗಿರಬಹುದು. ಅವರೆಲ್ಲ ಇದ್ದಿದ್ದಕ್ಕೆ ಇಷ್ಟು ಮತಗಳು ಬಂದಿವೆ/ ನನ್ನ ಪರ ವಿರೋಧಿ ಅಲೆ ಇದೆ ಎಂಬುದು ನಾನು ಒಪ್ಪಲ್ಲ/ ನನ್ನ ಪರವಾಗಿ ನಿಂತ ಶಿಕ್ಷಕರೇ ಇದಕ್ಕೆ ಉತ್ತರ/ ನಾನು ಇನ್ನೂ ಗೆಲ್ಲುವ ಕಾನ್ಫಿಡೆಂಟ್‌ನಲ್ಲಿ ಇದ್ದೆ ಎಂದು ಹೇಳಿದರು.

ನಿಮ್ಮ ಸೋಲು ಆರ್‌ಎಸ್ಎಸ್ ಸೋಲು ಒಪ್ಪಿಕೊಳ್ತೀರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತ ಇಲ್ಲ, ಮತದಾರರ ವಿವೇಚನೆ ಇದೆ/ ಒಂದು ನಿರ್ಣಯ ಕೈಗೊಂಡಿದ್ದಾರೆ ಗೌರವಿಸೋಣ. ಸೋಲಿಗೆ ಕಾರಣ ಆತ್ಮಾವಲೋಕನ ಸಭೆ ಮಾಡಿಕೊಳ್ಳುತ್ತೇವೆ ಎಂದರು.

ಹಣದ ಹೊಳೆ ಹರಿಸಿದರ ಮಧ್ಯೆ ಚುನಾವಣೆ ಆಗಿದೆ, ವಿಪಕ್ಷಗಳ ರಾಜಕೀಯ ಷಡ್ಯಂತ್ರ ಹಣದ ಹೊಳೆಯ ಮಧ್ಯೆ ನನ್ನ ಪರ ಸಾವಿರಾರು ಶಿಕ್ಷಕರು ನಿಂತಿದ್ದಾರೆ. ಶಿಕ್ಷಕರ ಪರವಾಗಿ ನಿಂತು ಹೋರಾಟ ಕೈಗೊಳ್ಳುತ್ತೇನೆ. ಮಹಾಂತೇಶ ಕವಟಗಿಮಠ ಸೋಲಿನ ಜೊತೆ ಈ ಸೋಲಿನ ಹೋಲಿಕೆ ಒಪ್ಪಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಕಾರಣದಲ್ಲಿ ಇರ್ತೀರಾ ನಿವೃತ್ತಿ ಆಗ್ತೀರಾ ಅಂತಾ ಮಾಧ್ಯಮಗಳ ಪ್ರಶ್ನೆ  ಉತ್ತರಿಸಿದ ಅರುಣ್, ರಾಜಕಾರಣದಲ್ಲಿ ಇರುವ ಬಗ್ಗೆ ಕಾಲವೇ ಉತ್ತರಿಸುತ್ತೆ. ಮತದಾರರು ತೀರ್ಪು ಕೊಟ್ಟಿದ್ದಾರೆ ಅದನ್ನು ಗೌರವಿಸೋಣ. ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾ ಅನ್ನೋನು. ಬಿಜೆಪಿ ಒಳಜಗಳ ಏನೂ ಕಾರಣ ಅಲ್ಲ ಎಂದ ತಿಳಿಸಿದರು.

ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿಗೆ (Basavaraj Horatti) ಜಯವಾಗಿದೆ. ಬಸವರಾಜ ಹೊರಟ್ಟಿಗೆ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್​ ಗೆಲುವಿನ ಪ್ರಮಾಣಪತ್ರ ವಿತರಣೆ ಮಾಡಿದ್ದಾರೆ. 8 ಬಾರಿ ಗೆದ್ದು ದಾಖಲೆ ಬಸವರಾಜ ಹೊರಟ್ಟಿ ದಾಖಲೆ ನಿರ್ಮಿಸಿದ್ದಾರೆ
 

Latest Videos
Follow Us:
Download App:
  • android
  • ios