ಸಮಾಜದಲ್ಲಿ ನೆಮ್ಮದಿ, ಶಾಂತಿ ಮೂಡಿಸಲು ಸಾಮಾಜಿಕ, ಆರ್ಥಿಕ , ಶೈಕ್ಷಣಿಕ ನ್ಯಾಯ ಒದಗಿಸಲು, ಸುಭದ್ರ ಭ್ರಷ್ಟರಹಿತ ಆಡಳಿತ ನೀಡುವ ವಾಗ್ದಾನಗಳೊಂದಿಗೆ ಜ.11ರಂದು ಬೆಳಗಾವಿಯ ವೀರಸೌಧದಿಂದ ಕಾಂಗ್ರೆಸ್‌ ನಾಯಕರ ಯಾತ್ರೆ ಹೊರಡಲಿದೆ. ಈ ಯಾತ್ರೆ ಯಶಸ್ಸಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಕರೆ ನೀಡಿದರು.

ಬೆಳಗಾವಿ (ಜ.02): ಸಮಾಜದಲ್ಲಿ ನೆಮ್ಮದಿ, ಶಾಂತಿ ಮೂಡಿಸಲು ಸಾಮಾಜಿಕ, ಆರ್ಥಿಕ , ಶೈಕ್ಷಣಿಕ ನ್ಯಾಯ ಒದಗಿಸಲು, ಸುಭದ್ರ ಭ್ರಷ್ಟರಹಿತ ಆಡಳಿತ ನೀಡುವ ವಾಗ್ದಾನಗಳೊಂದಿಗೆ ಜ.11ರಂದು ಬೆಳಗಾವಿಯ ವೀರಸೌಧದಿಂದ ಕಾಂಗ್ರೆಸ್‌ ನಾಯಕರ ಯಾತ್ರೆ ಹೊರಡಲಿದೆ. ಈ ಯಾತ್ರೆ ಯಶಸ್ಸಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಕರೆ ನೀಡಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ಕಾಂಗ್ರೆಸ್‌ ಬಸ್‌ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್‌ ನಾಯಕರ ಜಂಟಿ ಬಸ್‌ಯಾತ್ರೆಯಲ್ಲಿ ಹಲವು ನಾಯಕರು ಭಾಗವಹಿಸುವರು. ಒಟ್ಟು 21 ಜಿಲ್ಲೆಗಳಲ್ಲಿ ಬಸ್‌ ಯಾತ್ರೆ ಸಂಚರಿಸಲಿದೆ. ಬೆಳಗಾವಿ ಜಿಲ್ಲೆ ದೊಡ್ಡದಿದೆ. ಹಾಗಾಗಿ, ಚಿಕ್ಕೋಡಿ, ಬೆಳಗಾವಿ ಎರಡೂ ವಿಭಾಗದಲ್ಲಿ ಸಭೆ ನಡೆಸಲಾಗುವುದು ಎಂದರು.

ಕುಡಿವ ನೀರು ಸರಬರಾಜು ಕಾಮಗಾರಿ ಶೀಘ್ರ ಪೂರ್ಣ: ಶಾಸಕ ರೇಣುಕಾಚಾರ್ಯ

ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಏಕಮಾತ್ರ ಕಾಂಗ್ರೆಸ್‌ ಅಧಿವೇಶನ ಬೆಳಗಾವಿಯಲ್ಲಿ ನಡೆದಿತ್ತು. ಹಾಗಾಗಿ, ಬೆಳಗಾವಿಯಿಂದಲೇ ಬಸ್‌ಯಾತ್ರೆ ಆರಂಭಿಸಲಾಗುತ್ತಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಬಸ್‌ಯಾತ್ರೆ ಮೂಲಕ ಚುನಾವಣಾ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಬಸ್‌ಯಾತ್ರೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಭಾರತ ಜೋಡೊ, ಕಲಬುರಗಿಯಲ್ಲಿ ನಡೆದ ಮಲ್ಲಿಕಾರ್ಜುನ ಖರ್ಗೆ ಅವರ ಬೃಹತ್‌ ಕಾರ್ಯಕ್ರಮ ಸೇರಿ ಕಾಂಗ್ರೆಸ್‌ ಕಾರ್ಯಕ್ರಮಗಳಿಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ದೊರೆತಿದೆ. ಹೀಗಾಗಿ, ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜತೆಗೆ ಕಾಂಗ್ರೆಸ್‌ ಬಸ್‌ಯಾತ್ರೆ ಆರಂಭಗೊಳ್ಳಲಿದೆ. ಪಕ್ಷದ ಸಂಘಟನೆ ಮತ್ತಷ್ಟು ಬಲಿಷ್ಠಗೊಳಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಚುನಾವಣೆ ಹೊಸ್ತಿಲಲ್ಲಿದೆ. ಪಕ್ಷದ ನಾಯಕರು ಕಾರ್ಯಕರ್ತರ ಜೊತೆಗೂಡಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಯಾತ್ರೆ ವೇಳಾಪಟ್ಟಿಇಲ್ಲಿದೆ: ಜ.11ರಂದು ಬೆಳಗಾವಿ ಜಿಲ್ಲೆ , ಜ.16ರಂದು ಹೊಸಪೇಟೆ, ಜ.17ರಂದು ಕೊಪ್ಪಳದ, ಜ.18ರಂದು ಬಾಗಲಕೋಟೆ, ಗದಗ ಜಿಲ್ಲೆ, ಜ.19ರಂದು ಹಾವೇರಿ, ದಾವಣಗೆರೆ ಜಿಲ್ಲೆ , ಜ.21 ಹಾಸನ, ಚಿಕ್ಕಮಗಳೂರು, ಜ.22 ಉಡುಪಿ, ದಕ್ಷಿಣ ಕನ್ನಡ. ಜ.23 ಕೋಲಾರ, ಚಿಕ್ಕಬಳ್ಳಾಪುರ, ಜ.24 ತುಮಕೂರು, ಬೆಂಗಳೂರು ಗ್ರಾಮಾಂತರ, ಜ.25 ಚಾಮರಾಜನಗರ, ಮೈಸೂರು, ಜ.26 ಮಂಡ್ಯ ಮತ್ತು ರಾಮನಗರ, ಜ.27 ಯಾದಗಿರಿ-ಕಲಬುರಗಿಯಲ್ಲಿ ಬಸ್‌ಯಾತ್ರೆ ನಡೆಯಲಿದೆ ಎಂದರು.

ಶಿರಾಡಿ ಘಾಟ್ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 1976 ಕೋಟಿ ಬಿಡ್ ಆಹ್ವಾನ: ನಳಿನ್ ಕಟೀಲ್‌ಗೆ ನಿತಿನ್ ಗಡ್ಕರಿ ಪತ್ರ

ಈ ಸಂದರ್ಭದಲ್ಲಿ ಶಾಸಕಿ ಅಂಜಲಿ ನಿಂಬಾಳಕರ, ಮಾಜಿ ಶಾಸಕ ಅಶೋಕ ಪಟ್ಟಣ, ವೀರಕುಮಾರ ಪಾಟೀಲ, ಕಾಕಾಸಾಹೇಬ ಪಾಟೀಲ, ರಾಜು ಸೇಠ, ರಮೇಶ ಕುಡಚಿ, ಸುನಿಲ್‌ ಹನ್ನಮನವರ, ಮಹಾವೀರ ಮೊಹಿತೆ, ಎಸ್‌.ಬಿ.ಘಾಟಗೆ, ಅಶೋಕ ಪೂಜಾರಿ, ಅರವಿಂದ ದಳವಾಯಿ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಗ್ರಾಮೀಣ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಸುನಿಲ ಸಂಕ, ಸಿದ್ದಕಿ ಅಂಕಲಗಿ, ಹಬೀಬ್‌ ಶೀಲೆದಾರ, ಕಾರ್ತಿಕ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.