Asianet Suvarna News Asianet Suvarna News

ಕಾಂಗ್ರೆಸ್‌ಗೆ ಮತ್ತೊಂದು ಶಾಕ್, ರಾಜಸ್ಥಾನ ಉಸ್ತುವಾರಿ ಸ್ಥಾನಕ್ಕೆ ಅಜಯ್ ಮಾಕೆನ್ ರಾಜೀನಾಮೆ!

ಕಾಂಗ್ರೆಸ್‌ಗೆ ಹೊಸ ಅಧ್ಯಕ್ಷರ ಆಯ್ಕೆ ಬಳಿಕ ಎಲ್ಲಾ ಚಿತ್ತ ಚುನಾವಣೆ ಹಾಗೂ ಭಾರತ್ ಜೋಡೋ ಯಾತ್ರೆ ಮೇಲೆ ನೆಟ್ಟಿದೆ. ಪಕ್ಷದೊಳಗಿನ ಬಂಡಾಯಗಳು ಶಮನವಾಗಿದೆ ಎಂದು ಅಂದುಕೊಂಡಿರುವಾಗಲೇ ಇದೀಗ ಬಂಡಾಯದ ಬಾವುಟದಿಂದ ಹಿರಿಯ ನಾಯಕ ಅಜಯ್ ಮಾಕೆನ್ ಸ್ಥಾನವನ್ನೇ ತ್ಯಜಿಸಿದ್ದಾರೆ.
 

Congress Ajay Maken quit Rajasthan Party IN charge post after CM Ashok Gehlot and Sachin pilot inner Politics ckm
Author
First Published Nov 16, 2022, 5:04 PM IST

ನವದೆಹಲಿ(ನ.16):  ಕರ್ನಾಟಕ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿನ ಬಣ ರಾಜಕೀಯ ಕಾಂಗ್ರೆಸ್ ಹೈಕಮಾಂಡ್‌ ತಲೆನೋವು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬೆನ್ನಲ್ಲೇ ಎಲ್ಲಾ ಬಂಡಾಯಗಳು ಶಮನವಾಗಿದೆ ಎಂದು ಪಕ್ಷದ ನಾಯಕರೇ ಹೇಳಿಕೊಂಡಿದ್ದರು.  ರಾಜಸ್ಥಾನದಲ್ಲಿ ಎದ್ದಿದ್ದ ಬಿರುಗಾಳಿ ತಣ್ಣಗಾಗಿತ್ತು, ಇತ್ತ ಕರ್ನಾಟಕದಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಲಾಗಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಹಿಮಾಚಲ ಪ್ರದೇಶ ಚುನಾವಣೆಯನ್ನು ಎದುರಿಸಲಾಗಿದೆ. ಸದ್ಯ ಕಾಂಗ್ರೆಸ್ ಗುಜರಾತ್ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಇದರ ಬೆನ್ನಲ್ಲೇ ಬಂಡಾಯದ ಬಾವುಟಕ್ಕೆ ಹಿರಿಯ ನಾಯಕ ಅಜಯ್ ಮಾಕೆನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅಜಯ್ ಮಾಕೆನ್ ಇದೀಗ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.

ಅಜಯ್ ಮಾಕೆನ್ ರಾಜೀನಾಮೆ ಹಿಂದೆ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಎದ್ದ ಬಂಡಾಯವೇ ಕಾರಣ. ಈ ಕುರಿತು ಅಜಯ್ ಮಾಕೆನ್ ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದಾರೆ. ಆದರೆ ಹೈಕಮಾಂಡ್ ಅಶೋಕ್ ಗೆಹ್ಲೋಟ್ ಬಣದ ಮೂವರು ಆಪ್ತರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದೆ. ಇತ್ತ ಅಶೋಕ್ ಗೆಹ್ಲೋಟ್ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಸಚಿನ್ ಪೈಲೆಟ್ ಬಣ ಪದೇ ಪದೇ ಶಿಸ್ತು ಕ್ರಮದ ಕುರಿತು ಪ್ರಶ್ನಿಸುತ್ತಿದೆ. ಅತ್ತ ಹೈಕಮಾಂಡ್ ನಿರುತ್ತರ, ಇತ್ತ ಪೈಲೆಟ್ ಬಣದ ಒತ್ತಡದ ನಡುವೆ ಅಜಯ್ ಮಾಕೆನ್ ಅಂತಿಮವಾಗಿ ರಾಜೀನಾಮೆ ನೀಡಿ ಉಸ್ತುವಾರಿ ಸ್ಥಾನದಿಂದ ಹೊರಬಂದಿದ್ದಾರೆ.

 

 

ಕಾಂಗ್ರೆಸ್‌ನಿಂದ ಸ್ಪರ್ಧಿಸಲು 400ಕ್ಕೂ ಅಧಿಕ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲೆಟ್ ಬಣದ ಹಗ್ಗಜಗ್ಗಾಟ ಇನ್ನೂ ನಿಂತಿಲ್ಲ. ಈಗಾಗಲೇ ಸಚಿನ್ ಪೈಲೆಟ್ ಬಣ, ಶಿಸ್ತು ಕ್ರಮಕ್ಕೆ ಆಗ್ರಹಿಸಿ ಭಾರಿ ಆಕ್ರೋಶ ವ್ಯಕ್ತಪಡಿಸಿದೆ.  

ಸೋನಿಯಾ ಗಾಂಧಿಗೆ ಕ್ಷಮೆ ಯಾಚಿಸಿದ್ದ ಗೆಹ್ಲೋಟ್
ಮಹತ್ವದ ಬೆಳವಣಿಗೆಯೊಂದರಲ್ಲಿ ಇತ್ತೀಚಿಗೆ ರಾಜಸ್ಥಾನದಲ್ಲಿ ನಡೆದ ಪಕ್ಷದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬಳಿ ಕ್ಷಮೆಯಾಚಿಸಿದ್ದರು.  ಕಳೆದ 50 ವರ್ಷಗಳಿಂದಲೂ ನಾನು ಪಕ್ಷದ ಶಿಸ್ತಿನ ಸಿಪಾಯಿ. ಇಂದಿರಾ ಗಾಂಧಿ ಕಾಲದಿಂದಲೂ ನಾನು ಪಕ್ಷದ ಯೋಧನಾಗಿ ಕಾರ್ಯನಿರ್ವಹಿಸಿದ್ದೇನೆ.  ರಾಜಸ್ಥಾನದಲ್ಲಿ ಏನಾಯಿತೋ ಅದು ನಮ್ಮನ್ನೆಲ್ಲಾ ತಲ್ಲಣಗೊಳಿಸಿದೆ. ನಾನು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆಂಬ ಕಾರಣಕ್ಕೆಲ್ಲಾ ಈ ಎಲ್ಲಾ ಘಟನೆಗಳು ನಡೆದವು ಎಂಬ ಸಂದೇಶ ರವಾನೆಯಾಗಲು ಕಾರಣವಾದ ಘಟನೆಯಿಂದ ಎಷ್ಟುನೊಂದಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತು ಎಂದು ಹೇಳಿದ್ದರು.

Karnataka Assembly Polls: ಸಿದ್ದು ಕೋಲಾರಕ್ಕೆ 50 ಬಾರಿ ಬಂದರೂ ಗೆಲ್ಲೋಲ್ಲ : ಮುನಿಸ್ವಾಮಿ ಭವಿಷ್ಯ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಗೆಹ್ಲೋಟ್‌ ಬಣದ 90ಕ್ಕೂ ಹೆಚ್ಚು ಶಾಸಕರು ಗೈರಾಗಿದ್ದು ಮಾತ್ರವಲ್ಲದೇ ಪರ್ಯಾಯ ಸಭೆ ನಡೆಸಿದ್ದರು. ಜೊತೆಗೆ ಬಿಕ್ಕಟ್ಟು ಇತ್ಯರ್ಥಕ್ಕೆ ಬಂದಿದ್ದ ಕೇಂದ್ರದ ವೀಕ್ಷಕರ ಜೊತೆ ಪ್ರತ್ಯೇಕ ಭೇಟಿಯೂ ಶಾಸಕರು ನಿರಾಕರಿಸಿದ್ದರು. ಅಲ್ಲದೆ ಸಚಿನ್‌ ಪೈಲಟ್‌ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದು ಪಕ್ಷಕ್ಕೆ ಭಾರೀ ಮುಜುಗರ ಉಂಟು ಮಾಡಿತ್ತು.
 

Follow Us:
Download App:
  • android
  • ios