Asianet Suvarna News Asianet Suvarna News

Karnataka assembly election: ಕಾಂಗ್ರೆಸ್‌ನಲ್ಲಿ ಸಿಎಂ ಪೈಪೋಟಿ ಕಾಮಿಡಿ ಶೋ; ರಾಜು ಗೌಡ ವ್ಯಂಗ್ಯ

  • ಕಾಂಗ್ರೆಸ್‌ನಲ್ಲಿ ಸಿಎಂ ಪೈಪೋಟಿ ಕಾಮಿಡಿ ಶೋ
  • ಕೋಚ್‌ ರೀತಿಯಲ್ಲಿ ಕಾರ್ಯನಿರ್ವಹಿಸುವರು ಬಿಎಸ್‌ವೈ: ಶಾಸಕ ನರಸಿಂಹ (ರಾಜುಗೌಡ) ನಾಯಕ ಅಭಿಪ್ರಾಯ
Competition for the post of CM in Congress says rajugowda rav
Author
First Published Nov 28, 2022, 6:29 AM IST

ಆಲಮಟ್ಟಿ (ನ.28) : ಪಕ್ಷದ ಏಳಿಗೆಗಾಗಿ ತಮ್ಮ ಜೀವನವನ್ನೇ ಸವೆದಿರುವ ಬಿ.ಎಸ್‌.ಯಡಿಯೂರಪ್ಪ, ರಾಜಕಾರಣದಿಂದ ನಿವೃತ್ತಿಯಾಗಲ್ಲ. ಅವರು ಚುನಾವಣಾ ರಾಜಕೀಯದಿಂದ ಮಾತ್ರ ನಿವೃತ್ತರಾಗುತ್ತಾರೆ. ಪಕ್ಷಕ್ಕೆ ಕೋಚ್‌ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಸುರಪುರ ಶಾಸಕ ನರಸಿಂಹ (ರಾಜುಗೌಡ) ನಾಯಕ ಹೇಳಿದರು.

ಆಲಮಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 75 ವರ್ಷ ಪೂರೈಸಿದವರಿಗೆ ರಾಜಕಾರಣದಿಂದ ನಿವೃತ್ತಿ, ಕುಟುಂಬ ರಾಜಕಾರಣ ಎಂಬ ಬಿಜೆಪಿ ತತ್ವ ಎಲ್ಲರಿಗೂ ಅನ್ವಯಿಸುತ್ತದೆ. ಆದರೆ, ಯಡಿಯೂರಪ್ಪ ಅವರ ಕುಟುಂಬಕ್ಕೆ ಇದು ಅನ್ವಯಿಸುವುದಿಲ್ಲ. ಬಿ.ಎಸ್‌.ವಿಜಯೇಂದ್ರ ಯುವಕರ ಐಕಾನ್‌ ಆಗಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿಗಾಗಿ ನಡೆಯುತ್ತಿರುವ ಪೈಪೋಟಿ, ದಿನನಿತ್ಯದ ಗೊಂದಲ ಹೇಳಿಕೆಗಳಿಂದ ಕಾಮಿಡಿ ಶೋ ಎಂಬಂತೆ ಬಿಂಬಿತವಾಗುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.

 

ಮೀಸಲಾತಿ ಹೆಚ್ಚಳ ಬಿಜೆಪಿ ಸರ್ಕಾರದ ಐತಿಹಾಸಿಕ ಸಾಧನೆ: ಶಾಸಕ ರಾಜುಗೌಡ

ಆಲಮಟ್ಟಿಯ ಎಂಡಿ ಕಚೇರಿಯಲ್ಲಿ ಮಂಗಳವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಗೆ ಭಾರಿ ಪೊಲೀಸ್‌ ಬಂದೋಬಸ್ತ ಏರ್ಪಡಿಸಲಾಗಿತ್ತು. ಡಿವೈಎಸ್ಪಿ ಅರುಣಕುಮಾರ ಕೋಳುರ ಹಾಗೂ ಸಿಪಿಐ ಸೋಮಶೇಖರ ಜುಟ್ಟಲ ನಿಂತೂ ಯಾರನ್ನೂ ಒಳಗಡೆ ಬಿಡಲಿಲ್ಲ. ಸಭೆಗೆ ಪತ್ರಕರ್ತರನ್ನು ಸೇರಿ ಸದಸ್ಯರಲ್ಲದ ಯಾರನ್ನೂ ಬಿಡಲಿಲ್ಲ.

ಡಿವೈಎಸ್ಪಿ, ಇಬ್ಬರೂ ಸಿಪಿಐ, 5 ಜನ ಪಿಎಸೈ, 10 ಜನ ಎಎಸೈ, 16 ಜನ ಹೆಡ್‌ ಕಾನ್ಸ್‌ ಟೇಬಲ್‌, 44 ಕಾನ್ಸ್‌ ಟೇಬಲ್‌, 8 ಮಹಿಳಾ ಕಾನ್ಸ್‌ ಟೇಬಲ್‌, 2 ಡಿಆರ್‌ ವಾಹನ ಸೇರಿ ಸುಮಾರು 100 ಜನ ಪೊಲೀಸ್‌ ರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾನಾ ಸಂಘಟನೆ ರೈತರ ಮನವಿ

ಆಲಮಟ್ಟಿ: ಕೃಷ್ಣಾ ನದಿ ನೀರಾವರಿ ಸಲಹಾ ಸಮಿತಿ ಸಭೆಗೆ ರೈತರಿಗೆ ಆಹ್ವಾನ ನೀಡಬೇಕು. ಕಾಲುವೆಯ ನಿರ್ಮಾಣ, ದುರಸ್ತಿ, ಆಲಮಟ್ಟಿಯ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ರಸ್ತೆ ನಿರ್ಮಾಣ ಸೇರಿ ನಾನಾ ಬೇಡಿಕೆಗಳ ಮನವಿಯನ್ನು ರೈತರು ಐಸಿಸಿ ಅಧ್ಯಕ್ಷ, ಸಚಿವ ಸಿ.ಸಿ.ಪಾಟೀಲರಿಗೆ ಗುರುವಾರ ಅರ್ಪಿಸಿದರು.

ಆಲಮಟ್ಟಿಯ ಪುನರ್ವಸತಿ ಕೇಂದ್ರದ ಪಕ್ಕದ ಅರಣ್ಯ ಇಲಾಖೆಯ ಜಮೀನಿನಲ್ಲಿ 10 ಸಾವಿರಕ್ಕೂ ಅಧಿಕ ಜನ ಕಳೆದ 40 ವರ್ಷದಿಂದ ವಾಸಿಸುತ್ತಿದ್ದು, ಗ್ರಾಮ ಪಂಚಾಯತಿಯವರು ಆ ಮನೆಗಳಿಗೆ ಹಕ್ಕುಪತ್ರ ನೀಡುತ್ತಿಲ್ಲ. ಆ ಕುಟುಂಬಗಳಿಗೆ ಹಕ್ಕುಪತ್ರ ನೀಡಿ ಅಲ್ಲಿಯ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶಿವಾನಂದ ಅವಟಿ, ತಾಲೂಕು ರೈತ ಹಿತರಕ್ಷಣಾ ಸಂಘದ ಅಧ್ಯಕ್ಷ ತಿರುಪತಿ ಬಂಡಿವಡ್ಡರ, ಎಸ್‌.ಬಿ.ಕೋತಿನ, ಚಂದ್ರಶೇಖರ ವಡ್ಡರ ಇನ್ನಿತರರು ಮನವಿ ಅರ್ಪಿಸಿದರು.

ಆಲಮಟ್ಟಿ, ನಿಡಗುಂದಿ, ಕಿರಿಶ್ಯಾಳ, ಅಬ್ಬಿಹಾಳ, ಹೆಬ್ಬಾಳ ಮಾರ್ಗವಾಗಿ ಬಸವನಬಾಗೇವಾಡಿ ಸೇರುವ ರಸ್ತೆ ಆಲಮಟ್ಟಿಯ ಹಿನ್ನೀರಿನಲ್ಲಿ ನಿಡಗುಂದಿ ಬಳಿ ಜಲಾವೃತಗೊಂಡಿದೆ. ಅಲ್ಲಿ ಸೇತುವೆ ನಿರ್ಮಿಸಿ ಈ ಹಳೆ ರಸ್ತೆಯನ್ನು ಅಭಿವೃದ್ಧಿಗೊಳಿಸಿ. ಈ ಎಲ್ಲ ಗ್ರಾಮಗಳಿಗೆ ಉತ್ತಮ ಸಂಪರ್ಕ ರಸ್ತೆ ಒದಗಿಸಬೇಕು ಎಂದು ಶಿವಾನಂದ ಅವಟಿ ಮನವಿ ಅರ್ಪಿಸಿದರು.

ಚಿಮ್ಮಲಗಿ ಏತ ನೀರಾವರಿ ಕಾಲುವೆಗೆ (ಸಿಎಲ್‌ಐಎಸ್‌) ಪೂರ್ಣಗೊಳಿಸಲು ಆಗ್ರಹ:

ಸಿಎಲ್‌ ಐಎಸ್‌ ನ ಯೋಜನೆಯ ಡಿ-13ಎ ಕಾಲುವೆಯ ಕಾಮಗಾರಿ ಆರಂಭಗೊಂಡು 10 ವರ್ಷ ಕಳೆದರೂ ಇನ್ನೂವರೆಗೂ ಪೂರ್ಣಗೊಳಿಸಿಲ್ಲ. ಈ ಕಾಮಗಾರಿ ಅರಸನಾಳ ಗ್ರಾಮದ ಹತ್ತಿರ ಸ್ಥಗಿತಗೊಂಡಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ನಾಲತವಾಡ ಹೋಬಳಿ ರೈತ ಹೋರಾಟ ವೇದಿಕೆಯ ನೂರಾರು ರೈತರು ಆಗಮಿಸಿ ಸಚಿವ ಸಿ.ಸಿ.ಪಾಟೀಲರಿಗೆ ಮನವಿ ಅರ್ಪಿಸಿದರು.

'ಸಿದ್ದರಾಮೋತ್ಸವ ಪೋಸ್ಟರ್‌ನಲ್ಲಿ ಬಿಜೆಪಿ ಶಾಸಕರ ಫೋಟೋ, ಸ್ಪಷ್ಟನೆ ಕೊಟ್ಟ ರಾಜುಗೌಡ

ಇದೇ ಕಾಲುವೆಯ ಲ್ಯಾಟರಲ್‌ ಪೂರ್ಣಗೊಂಡಿದೆ. ಆದರೆ, ನೀರು ಹರಿಸದ ಕಾರಣ ಲ್ಯಾಟರಲ್‌ಗಳು ಸಂಪೂರ್ಣ ಹೂಳುಮಯವಾಗಿವೆ ಎಂದು ಆರೋಪಿಸಿದರು. ಆಲಮಟ್ಟಿಎಡದಂಡೆ ಮುಖ್ಯ ಕಾಲುವೆಯ 69 ಕಿಮೀನಲ್ಲಿ ಔಟ್‌ ಲೇಟ್‌ ಮಾಡದೇ, ಅಲ್ಲಿಂದ ಲ್ಯಾಟರಲ್‌ ಕಾಲುವೆ ನಿರ್ಮಿಸಲಾಗಿದೆ. ಈಗ ಮುಖ್ಯ ಕಾಲುವೆಗೆ ಲ್ಯಾಟರಲ್‌ಗೆ ಯಾವುದೇ ಸಂಪರ್ಕ ಇಲ್ಲ. ಇದರಿಂದ ಅಲ್ಲಿ ನೀರು ಹರಿಯುತ್ತಿಲ್ಲ ಎಂದು ಆರೋಪಿಸಲಾಗಿದೆ. ಗುರುಪ್ರಸಾದ ದೇಶಮುಖ, ಮಹಾಂತಯ್ಯ ಮೇನೆದಾಳಮಠ, ಅಪ್ಪು ದೇಶಮುಖ, ಸಂಗಣ್ಣ ಕುಳಗೇರಿ, ಶಶಿ ಬಂಗಾರಿ, ಚಂದ್ರು ಗಂಗನಗೌಡರ, ಮಹಾಂತೇಶ ಗಂಗನಗೌಡರ ಇನ್ನೀತರರು ಉಪಸ್ಥಿತರಿದ್ದರು.

Follow Us:
Download App:
  • android
  • ios