ಜನಕಲ್ಯಾಣೋತ್ಸವ ಯಶಸ್ಸು ನನಗೆ ಆನೆಬಲ ನೀಡಿದೆ: ಸಿದ್ದರಾಮಯ್ಯ
ಹಾಸನದಲ್ಲಿ ನಡೆದ ಜನಕಲ್ಯಾಣೋತ್ಸವದ ಅಭೂತಪೂರ್ವ ಯಶಸ್ಸು ಆನೆಬಲ ನೀಡಿದೆ. ಪಕ್ಷದ ಮೇಲಿನ ಪ್ರೀತಿಯಿಂದ ದೂರದ ಊರು ಗಳಿಂದ ದ್ವೇಷರಾಜಕಾರಣದ ವಿರುದ್ಧದ ನನ್ನ ದನಿಗೆ ದನಿಗೂಡಿಸಿದ ಎಲ್ಲಾ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಿಗೆ ನಾನು ಋಣಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು(ಡಿ.06): 'ಸತ್ಯ, ಧರ್ಮ ಮತ್ತು ನ್ಯಾಯದ ನಡಿಗೆ ಯಲ್ಲಿ ನನ್ನ ಜೊತೆ ಈ ನಾಡಿನ ಪ್ರಜ್ಞಾ ವಂತರು, ಶೋಷಿತರು ಇದ್ದಾರೆಂಬುದಕ್ಕೆ ಸಮಾವೇಶದಲ್ಲಿ ಸೇರಿದ್ದ ಜನಸಾಗರವೇ ಸಾಕ್ಷಿ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇರುವವರೆಗೆ ರಾಜಕೀಯ ವಿರೋಧಿಗಳ ಯಾವ ಷಡ್ಯಂತ್ರ, ಬೆದರಿಕೆಗಳಿಗೂ ಜಗ್ಗದೆ, ಕುಗ್ಗದೆ ಎದುರಿಸುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹಾಸನದ ಸಮಾವೇಶ ಯಶಸಿನ ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೆ ನೀಡಿರುವ ಅವರು, 'ಹಾಸನದಲ್ಲಿ ನಡೆದ ಜನಕಲ್ಯಾಣೋತ್ಸವದ ಅಭೂತಪೂರ್ವ ಯಶಸ್ಸು ಆನೆಬಲ ನೀಡಿದೆ. ಪಕ್ಷದ ಮೇಲಿನ ಪ್ರೀತಿಯಿಂದ ದೂರದ ಊರು ಗಳಿಂದ ದ್ವೇಷರಾಜಕಾರಣದ ವಿರುದ್ಧದ ನನ್ನ ದನಿಗೆ ದನಿಗೂಡಿಸಿದ ಎಲ್ಲಾ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಿಗೆ ನಾನು ಋಣಿ' ಎಂದು ಹೇಳಿದ್ದಾರೆ.
ಅಧಿಕಾರ ಹಂಚಿಕೆ: ಏನೋ ಮಾತಾಡಿದ್ದೇವೆ, ಅದನ್ನು ಬಹಿರಂಗವಾಗಿ ಹೇಳಲಾಗುತ್ತಾ?, ಡಿಕೆಶಿ
ಕಾರ್ಯಕ್ರಮದ ಆಯೋಜನೆಗೆ ಶ್ರಮಿಸಿದ ಶೋಷಿತ ಸಮುದಾಯಗಳ ಸಂಘಟನೆಗಳು ಮತ್ತು ಪಕ್ಷದ ನಾಯಕರಿಗೆ ಅನಂತ ಧನ್ಯವಾದಗಳು. ಸತ್ಯ, ಧರ್ಮ ಮತ್ತು ನ್ಯಾಯದ ನಡಿಗೆಯಲ್ಲಿ ನನ್ನ ಜೊತೆ ಈ ನಾಡಿನ ಪ್ರಜ್ಞಾವಂತರು, ಶೋಷಿತ ಜನ ಇದ್ದಾರೆ ಎಂಬುದಕ್ಕೆ ಇಂದು ಸೇರಿದ್ದ ಜನ ಸಾಗರಸಾಕ್ಷಿ. ನಿಮ್ಮೆಲ್ಲರ ಪ್ರೀತಿ-ಆಶೀರ್ವಾದ ಇರುವವರೆಗೆ ನಾನು ಎಲ್ಲವನ್ನೂ ಎದುರಿಸಿ ಗೆಲ್ಲುತ್ತೇನೆ. ನಾನು ಸತ್ಯದ ಪರವಾಗಿದ್ದೇನೆ, ಅಂತಿಮವಾಗಿ ಗೆಲ್ಲುವುದು ಸತ್ಯವೇ ಎಂದು ಹೇಳಿದ್ದಾರೆ.
'ಸಿದ್ದರಾಮಯ್ಯ ನನ್ನಿಂದ ಬೆಳೆದ' ಅಂತಾರೆ' ನಾನು ಇಲ್ಲಂದಿದ್ರೆ ದೇವೇಗೌಡರು ಸಿಎಂ ಆಗ್ತಿರಲಿಲ್ಲ: ಸಿಎಂ ವಾಗ್ದಾಳಿ
ಹಾಸನ: ಜೆಡಿಎಸ್ ಭದ್ರಕೋಟೆ ಹಾಸನದ ಎಸ್.ಎಂ.ಕೃಷ್ಣ ನಗರದಲ್ಲಿ ನಡೆದ ಕಾಂಗ್ರೆಸ್ ಜನ ಕಲ್ಯಾಣ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಜಿಲ್ಲೆ ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸುವ ಮೂಲಕ ಕೆಪಿಸಿಸಿ-ಹಿಂದುಳಿದ ವರ್ಗಗಳ ಒಕ್ಕೂಟಗಳ ಆಶ್ರಯದಲ್ಲಿ ನಡೆದ ಸ್ವಾಭಿಮಾನಿ ಸಮಾವೇಶಕ್ಕೆ ಕೈ ಜೋಡಿಸಿದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಹಾಸನ ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಸಮಾವೇಶ ಆಗಿರಲಿಲ್ಲ. ಮೊದಲ ಬಾರಿಗೆ ಆಗಿದೆ ಎಂದರು. ಡಾ.ರಾಜ್‌ಕುಮಾರ್ ಅಭಿಮಾನಿಗಳೇ ದೇವರು ಅಂದ್ರು, ನಮಗೆ ಮತದಾರರ ಬಂಧುಗಳೇ ದೇವರು. ಎಲ್ಲ ವರ್ಗಗಳ ಜನರ ಆಶೀರ್ವಾದಿಂದ ಇತ್ತೀಚೆಗೆ 3 ಉಪ ಚುನಾವಣೆ ಗೆಲ್ಲಲು ಕಾರಣವಾಯಿತು ಎಂದು ಹರ್ಷ ವ್ಯಕ್ತಪಡಿಸಿದ್ದರು.
ರಾಜ್ಯ, ದೇಶದಲ್ಲಿ ಕಾಂಗ್ರೆಸ್‌ನಿಂದ ಮಾತ್ರ ಸುಭದ್ರ ಸರ್ಕಾರ ಎಂದ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಎಂದೂ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ. ಕುಮಾರಸ್ವಾಮಿ ಒಮ್ಮೆ ಬಿಜೆಪಿ ಮತ್ತೊಮ್ಮೆ ನಮ್ಮ ಬೆಂಬಲದಿಂದ ಸಿಎಂ ಆದರು. ಬಿಜೆಪಿ ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿದೆ ಎಂದು ಟೀಕಿಸಿದರು.
ಡಿಕೆಶಿ ಮುಖ್ಯಮಂತ್ರಿ ಆಗೋದಕ್ಕೆ ಸಿದ್ದರಾಮಯ್ಯ ಬಿಡಲ್ಲ: ಛಲವಾದಿ ಬಾಂಬ್
ಆ ಎರಡೂ ಪಕ್ಷಗಳೂ ಸುಭದ್ರ ಸರ್ಕಾರ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಸಿಎಂ, ಎಲ್ಲ ಕಾಲದಲ್ಲೂ ನಾವೇ ಸುಭದ್ರ ಸರ್ಕಾರ ಕೊಟ್ಟಿದ್ದೇವೆ. ಹಾಗಾಗಿ ಮುಂದಿನ ದಿನಗಳಲ್ಲಿ ಅವರನ್ನು ಬೆಂಬಲಿಸಬೇಕಾ ಯೋಚಿಸಿ ಎಂದರು. 2013-18 ರಲ್ಲಿ ನಾವು ಅಧಿಕಾರ ನಡೆಸಿದಾಗ 165 ರಲ್ಲಿ 158 ಭರವಸೆ ಈಡೇರಿಸಿದೆವು, ಆದರೆ ಅವರು ಶೇ.10ರಷ್ಟನ್ನೂ ಈಡೇರಿಸಲಿಲ್ಲ. ಕೊಟ್ಟ ಮಾತಿನಂತೆ ನಡೆದಿರುವುದು ನಾವು, ಅವರಲ್ಲ ಎಂದು ಛೇಡಿಸಿದರು.
ಬಿಪಿಎಲ್ ಕಾರ್ಡ್ ಬಗ್ಗೆ ಭಾರೀ ಮಾತನಾಡುತ್ತಿದ್ದಾರೆ. 5 ಕೆಜಿ ಉಚಿತ ಅಕ್ಕಿ ಕೊಟ್ಟಿದ್ದು, 7 ಕೆಜಿಗೆ ಏರಿಸಿದ್ದು ನಾವು, ಬಡವರ ಹೊಟ್ಟೆ ಮೇಲೆ ಹೊಡೆದಿರುವುದು ಅವರು ಎಂದು ಕಿಡಿ ಕಾರಿದರು. ಇಡೀ ದೇಶದಲ್ಲೇ ತಲಾವಾರು 10 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಬಿಜೆಪಿಯವರು ದೇಶದ ಒಂದೇ ಒಂದು ರಾಜ್ಯದಲ್ಲಿ ಕೊಡುತ್ತಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುವ ಎಂದು ಸವಾಲು ಹಾಕಿದರು. ಅವರಿಗೆ ಬಡವರ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಜರಿದರು.