Asianet Suvarna News Asianet Suvarna News

ನನ್ನನ್ನು ರಾಜಕೀಯವಾಗಿ ಮುಗಿಸಲು ಸಿಎಂ ಸಿದ್ದರಾಮಯ್ಯ ಪ್ಲಾನ್: ಪ್ರತಾಪ್ ಸಿಂಹ

ರಾಜಕೀಯವಾಗಿ ನನ್ನನ್ನು ಮುಗಿಸುವುದಕ್ಕಾಗಿ ನನ್ನನ್ನು ಮತ್ತು ನನ್ನ ಕುಟುಂಬದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಮರ ಕಡಿದ ಪ್ರಕರಣದಲ್ಲಿ ನನ್ನ ತಮ್ಮನನ್ನು ಸಿಕ್ಕಿ ಹಾಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

CM Siddaramaiah plan to finish me off politically Says MP Pratap Simha gvd
Author
First Published Jan 2, 2024, 12:30 AM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜ.02): ರಾಜಕೀಯವಾಗಿ ನನ್ನನ್ನು ಮುಗಿಸುವುದಕ್ಕಾಗಿ ನನ್ನನ್ನು ಮತ್ತು ನನ್ನ ಕುಟುಂಬದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಮರ ಕಡಿದ ಪ್ರಕರಣದಲ್ಲಿ ನನ್ನ ತಮ್ಮನನ್ನು ಸಿಕ್ಕಿ ಹಾಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಸಂಪಾಜೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. 

ವಿಕ್ರಂ ಸಿಂಹ ಅವರನ್ನು ಬಂಧಿಸಿದ್ದ ವಿಷಯದಲ್ಲಿ ಸಂಸದ ಪ್ರತಾಪ್ ಸಿಂಹ ರಾಜಕಾರಣ ಮಾಡುತ್ತಿದ್ದಾರೆ ಎಂಬ ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ನನಗೆ ಜಿ. ಪರಮೇಶ್ವರ್ ಸಹೇಬ್ರ ಬಗ್ಗೆ ಅಪಾರವಾದ ಗೌರವವಿದೆ. ನಾನು ಇಷ್ಟಪಡುವ ರಾಜಕಾರಣಿಗಳಲ್ಲಿ ಜಿ. ಪರಮೇಶ್ವರ್ ಅವರು ಒಬ್ಬರು. ಆದರೆ ಇಲ್ಲಿ ರಾಜಕಾರಣ ಮಾಡುತ್ತಿರುವವರು ಯಾರು ಎಂಬುದನ್ನು ಅರಿತುಕೊಳ್ಳಲಿ. ಡಿಸೆಂಬರ್ 20 ರಂದು ಅಕ್ರಮವಾಗಿ ಮರ ಕಡಿದಿದ್ದಾರೆ ಎಂದು ಎಫ್ಐಆರ್ ದಾಖಲಾಗುತ್ತದೆ. ಬಳಿಕ ಎ1 ರಾಕೇಶ್ ಶೆಟ್ಟಿ, ಎ2 ಜಯಮ್ಮ ಸೇರಿದಂತೆ ಜೊತೆಗೆ ಇತರರು ಎಂದು ಪ್ರಕರಣ ದಾಖಲಾಗುತ್ತದೆ. 

ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೋದಿ ನಿಂತರೂ ಬಿಜೆಪಿ ಗೆಲ್ಲುವುದಿಲ್ಲ: ಎಂ.ಲಕ್ಷ್ಮಣ್ ಭವಿಷ್ಯ

ಅದರಲ್ಲಿ ತಲೆಮರೆಸಿಕೊಂಡಿರುವವರು ರವಿ ಎಂದು ದಾಖಲಾಗುತ್ತದೆ. ಆ ಬಳಿಕ 24 ನೇ ತಾರೀಖು ನಾನು ಕೆಲವು ವಿಚಾರಗಳ ಬಗ್ಗೆ ಹೇಳಿಕೆ ಕೊಟ್ಟೆ. ನಾನು ಹೇಳಿಕೆ ಕೊಟ್ಟ ಎರಡೇ ಗಂಟೆಯಲ್ಲಿ ಕಾಂಗ್ರೆಸ್ ನ ಟ್ವಿಟರ್ ಮತ್ತು ಫೇಸ್ ಬುಕ್ ಖಾತೆಯಲ್ಲಿ ಟ್ವೀಟ್ ಮಾಡಲಾಗುತ್ತದೆ. ಪ್ರತಾಪ್ ಸಿಂಹನ ತಮ್ಮ ಮರಗಳ್ಳ ಇವನು ನಾಡಗಳ್ಳ ಎಂದು ಟ್ವೀಟ್ ಮಾಡಲಾಗುತ್ತದೆ. ಇಲ್ಲಿ ರಾಜಕಾರಣ ಮಾಡುತ್ತಿರುವವರು ಯಾರು ಕಾಂಗ್ರೆಸ್ ನವರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆ ಎಫ್ಐಆರ್ ನಲ್ಲಿ ನನ್ನ ತಮ್ಮನ ಹೆಸರಿದೆಯಾ?, ಎ1 ಮತ್ತು ಎ2 ಇಬ್ಬರಿಗೂ ಸ್ಟೇಷನ್ ನಲ್ಲಿ ಬೇಲ್ ಆಗುತ್ತದೆ. ನನ್ನ ತಮ್ಮನ ಬಳಿಯೂ 22 ನೇ ತಾರೀಖು ಹೇಳಿಕೆ ತಗೊಂಡಿದ್ದಾರೆ. 

ಹೇಳಿಕೆ ಕೊಟ್ಟ ಬಳಿಕ ಅವರು ಬೆಂಗಳೂರಿಗೆ ಹೋಗಿದ್ದಾನೆ. ಆದರೆ ಹೇಳಿಕೆಕೊಟ್ಟು ಆ ನಂತರ ಸಕಲೇಶಪುರ ಬಿಟ್ಟು ಎಲ್ಲಿಯೂ ಹೋಗಬಾರದು ಎಂದು ಎಲ್ಲಾದರೂ ಕಾನೂನು ಇದೆಯಾ.? ಅಥವಾ ಕೋರ್ಟ್ ಅರ್ಡರ್ ಇತ್ತಾ. ಹೀಗಾಗಿ ಅವನು ತನ್ನ ಸ್ವಂತ ಕಾರು ತೆಗೆದುಕೊಂಡು, ಮೊಬೈಲ್ ತೆಗೆದುಕೊಂಡು ಬೆಂಗಳೂರಿಗೆ ಹೋಗಿದ್ದಾನೆ. ಇದನ್ನು ತರೆಮರೆಸಿಕೊಂಡು ಹೋಗಿದ್ದಾನೆ ಎಂದು ರಾಜಕಾರಣ ಮಾಡಿದ್ಯಾರು. ತರೆಮರೆಸಿಕೊಂಡು ಹೋಗುವವರು ಸ್ವಂತ ಕಾರು, ಮೊಬೈಲ್ ತೆಗೆದುಕೊಂಡು ಹೋಗುತ್ತಾರಾ ಎಂದು ಪ್ರತಾಪ್ ಸಿಂಹ ಗೃಹಸಚಿವ ಪರಮೇಶ್ವರ್ ಅವರಿಗೆ ಪ್ರಶ್ನೆ ಮಾಡಿದರು. 

ಮಧು ಬಂಗಾರಪ್ಪ ಅವರಿಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಕೋಟಿಗಟ್ಟಲೆ ದಂಡಹಾಕಲಾಗಿತ್ತು. ಜೈಲುವಾಸ ಕೂಡ ಫಿಕ್ಸ್ ಆಗಿತ್ತು. ಇದನ್ನು ಮುಚ್ಚಿಹಾಕಲು, ಮಾಧ್ಯಮಗಳ ಗಮನ ಬೇರೆಡೆ ಸೆಳೆದು ವಿಷಯಾಂತರ ಮಾಡಲು ನನ್ನ ತಮ್ಮನನ್ನು ಅರೆಸ್ಟ್ ಮಾಡಿಸಿದ್ದೀರಾ. ಆದರೆ ಕೋರ್ಟಿನಲ್ಲಿ ಜಡ್ಜ್ ನಿಮಗೆ ಮಂಗಳಾರತಿ ಮಾಡಿ ಐದು ನಿಮಿಷಕ್ಕೆ ಬೇಲ್ ಕೊಟ್ಟಿದ್ದಾರೆ. ಇಲ್ಲಿ ರಾಜಕಾರಣ ಮಾಡುತ್ತಿರುವವರು ನೀವು ಸರ್ ಎಂದು ಸಚಿವ ಪರಮೇಶ್ವರ್ ಅವರಿಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ನಿಮ್ಮ ಬಳಿ ಎಲ್ಲಾ ಅಧಿಕಾರವಿದೆ, ತನಿಖೆ ಮಾಡಲು ಅಲ್ಲಿಗೆ ಎಲ್ಲರನ್ನು ಕಳುಹಿಸಿ. 

ವಿ.ಸೋಮಣ್ಣ ಜೊತೆ ಮಾತನಾಡಿದ್ದೇನೆ, ಅವರು ಬಿಜೆಪಿ ಪಕ್ಷ ಬಿಡೊಲ್ಲ: ಆರ್.ಅಶೋಕ್

ಯಾರು ಮರ ಕಡಿದಿದ್ದಾರೆ ತಿಳಿಸಿ ಸರ್. ಇದರಲ್ಲಿ ರಾಜಕಾರಣ ಮಾಡುತ್ತಿರುವವರು ನೀವು ಸರ್ ಎಂದು ಸಂಸದ ಪ್ರತಾಪ್ ಸಿಂಹ ಪರಮೇಶ್ವರ್ ಅವರಿಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯನವರಿಗೆ 2024 ಲೋಕಸಭೆ ಚುನಾವಣೆಯಲ್ಲಿ ಕೊಡಗು ಮೈಸೂರು ಕ್ಷೇತ್ರದಲ್ಲಿ ಅವರ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲ್ಲ ಅಂತ ಗೊತ್ತಾಗಿದೆ. ಹೀಗಾಗಿ ಪ್ರತಾಪ್ ಸಿಂಹನನ್ನು ರಾಜಕೀಯವಾಗಿ ಮುಗಿಸಬೇಕು, ಟೆಕೆಟ್ ತಪ್ಪಿಸಬೇಕು. ಇಲ್ಲದಿದ್ದರೆ ಪ್ರತಾಪ್ ಸಿಂಹ ವಿರುದ್ಧ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲ್ಲ ಅಂತ ಗೊತ್ತಿದೆ. ಹಾಗಾಗಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೊಡಗಿನ ಸಂಪಾಜೆಯಲ್ಲಿ ಪ್ರತಾಪ್ ಸಿಂಹ ವಾಗ್ದಾಳಿ ಮಾಡಿದರು.

Follow Us:
Download App:
  • android
  • ios