ನನ್ನ ಮುಂದಿನ ರಾಜಕೀಯದ ಬಗ್ಗೆ ಈಗಾಗಲೇ ಡಿಕೆ ಶಿವಕುಮಾರ್ ಬಳಿ ಮಾತನಾಡಿದ್ದೇನೆ ಎಂದು ಕಾಂಗ್ರೆಸ್ ವಿರುದ್ಧ ಮುಖಂಡರೋರ್ವರು ತಮ್ಮ ಅಸಮಾಧಾನಹೊರಗೆ ಹಾಕಿದ್ದಾರೆ.
ಬೆಂಗಳೂರು (ಡಿ.16): ಕಾಂಗ್ರೆಸ್ ಗೆ ಮುಸ್ಲೀಮರು ಇನ್ನೆಷ್ಟು ವರ್ಷ ಮತ ಹಾಕ್ತಾ ಇರಬೇಕು...? ನಾವು ಮುಂದೆ ಬಂದು ನಿಮಗೆ ಮತ ಹಾಕೋದು - ಮತ ಹಾಕಿ ಹಿಂದೆ ಹೋಗೋದಾ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಒಬ್ಬನೆ ಒಬ್ಬ ಮುಸ್ಲಿಂನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟಿಲ್ಲ. ಶೇಕಡಾ 16 ರಷ್ಟು ಇರೋ ಮುಸ್ಲೀಮರು ನಿಮಗೆ ಓಟ್ ಮಾತ್ರ ಹಾಕಬೇಕಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.
ಸೋತಿರುವವನಿಗೆ ಪರಿಷತ್ ಸ್ಥಾನ ಕೊಟ್ಟಿದ್ದೀರಿ ಅನ್ನೋದು ಸರಿಯಲ್ಲ. ಡಾ.ಜಿ.ಪರಮೇಶ್ವರ್ ಚುನಾವಣೆಯಲ್ಲಿ ಸೋತಿರಲಿಲ್ಲವೇ..? ಪರಮೇಶ್ವರ್ ಅವರಿಗೆ ಸಚಿವ ಸ್ಥಾನ ಕೊಟ್ಟಿರಲಿಲ್ಲವೇ ಎಂದರು.
ಕಾಂಗ್ರೆಸ್ ತೊರೆಯದಂತೆ ಹಿರಿಯ ನಾಯಕನ ಮನೆಗೆ ಹೋಗಿ ಮನವಿ ಮಾಡಿದ ಡಿಕೆಶಿ ...
ಕಾಂಗ್ರೆಸ್ ನಲ್ಲಿ ಇರದೇ ಇರೋದು ಜೆಡಿಎಸ್ ನಲ್ಲಿ ಏನಿದೆ ಎನ್ನುವ ಬಗ್ಗೆ ಮಾತನಾಡಲು ಬಹಳಷ್ಟು ಇದೆ. ನನ್ನ ರಾಜಕೀಯ ನಡೆಯ ಬಗ್ಗೆ ಯಾವುದೇ ಅನುಮಾನ ಬೇಡ. ರಾಜ್ಯಾದ್ಯಂತ ಪ್ರವಾಸ ಮಾಡಿದ ಬಳಿಕ ನನ್ನ ನಿಲುವು ತಿಳಿಸುತ್ತೇನೆ. ನನ್ನನ್ನು ಭೇಟಿಯಾದ ಡಿ.ಕೆ.ಶಿವಕುಮಾರ್ ಗೆ ಈ ಬಗ್ಗೆ ತಿಳಿಸಿದ್ದೇನೆ ಎಂದು ಇಬ್ರಾಹಿಂ ಹೇಳಿದರು.
ಮುಸ್ಲಿಂ ನಾಯಕತ್ವದ ಸಂಘರ್ಷದ ಭಾಗವಾಗಿ ನನ್ನ ನಡೆ ಅನುಮಾನ ಮೂಡಿಸಿದೆ ಅನ್ನೋದು ಸರಿಯಲ್ಲ. ಆದರೆ ಸಮಾಜಕ್ಕೆ ಏನು ನ್ಯಾಯ ಸಿಗಬೇಕೋ ಅದನ್ನು ಹೇಳುತ್ತಿದ್ದೇನೆ ಎಂದು ಸುವರ್ಣ ನ್ಯೂಸ್ ಡಾಟ್ ಕಾಂಗೆ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯಿಸಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 16, 2020, 12:15 PM IST