ಸಂಪುಟ ವಿಸ್ತರಣೆ ಸಂಬಂಧ ಬಿಜೆಪಿ ಶಾಸಕರು ತಂಡವೊಂದು ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ರಹಸ್ಯ ಸಭೆ ನಡೆಸಿದೆ. ಈ ಸಭೆಯ ರೂವಾರಿಯ ಹೆಸರನ್ನ ಸ್ವತ ಸಿಎಂ ಬಿಎಸ್ ಯಡಿಯೂರಪ್ಪ ಬಹಿರಂಗ ಪಡಿಸಿದ್ದಾರೆ

ಬೆಂಗಳೂರು, (ನ.13): ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಬೆನ್ನಲ್ಲೇ ಸಂಪುಟ ವಿಸ್ತರಣೆ ಸರ್ಕಸ್‌ ತೀವ್ರಗೊಂಡಿದೆ. ಶೀಘ್ರದಲ್ಲಿಯೇ ಬಿಎಸ್‌ ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಇದ್ದು ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Add Asianetnews Kannada as a Preferred SourcegooglePreferred

ಇದರ ನಡುವೆ ಇತ್ತ ಸಚಿವ ಆಕಾಂಕ್ಷಿಗಳ ಕಸರತ್ತು ಸಹ ಜೋರಾಗಿದ್ದು, ಈ ವಿಚಾರವಾಗಿ ಕೆಲ ಬಿಜೆಪಿ ಶಾಸಕರು ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ಇದು ರಾಜ್ಯ ಬಿಜೆಪಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಸಾಹುಕಾರ್ ಮನೆಯಲ್ಲಿ ಬಿಜೆಪಿ ಶಾಸಕರ ರಹಸ್ಯ ಸಭೆ: ಇಲ್ಲಿದೆ ಇನ್‍ಸೈಡ್ ಮಾಹಿತಿ

ಇನ್ನು ಈ ಬಗ್ಗೆ ಇಂದು (ಶುಕ್ರವಾರ) ಸ್ವತಃ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು, ಈಗ ಮಾಡದೇ ಇನ್ಯಾವಾಗ ಮಾಡ್ತಾರೆ. ಆ ಸಭೆಯನ್ನ ಈಶ್ವರಪ್ಪನವರೇ ಮಾಡಿಸಿದ್ದು ಎಂದು ಹೇಳಿ ತೆರೆಳಿದರು. 

ಈ ಮಾತನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮಾಷೆಗೆ ಹೇಳಿದ್ರೋ ಅವಥಾ ಜೋಕ್‌ನಲ್ಲಿಯೇ ಸಿರೀಯಸ್ ಆಗಿ ಹೇಳಿದ್ದಾರೋ ಎನ್ನುವ ಪ್ರಶ್ನೆ ಬಿಜೆಪಿ ನಾಯಕರಲ್ಲಿ ಕಾಡಡತೊಡಗಿದೆ.

ಮೊದಲಿನಿಂದಲೂ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರಿಗೆ ಅಷ್ಟಕಷ್ಟೇ. ಮೇಲ್ನೋಟಕ್ಕೆ ಇಬ್ಬರು ಚೆನ್ನಾಗಿ ಮತನಾಡುತ್ತಿದ್ದರೂ ಒಳಗೆ ಹಾವು-ಮುಂಗಸಿಯಂತಿದ್ದಾರೆ.

ಈ ಹಿಂದೆ ಬಹಿರಂಗವಾಗಿಯೇ ಕಿತ್ತಾಡಿಕೊಂಡಿದ್ದು, ಈಶ್ವರಪ್ಪನವರು ಯಡಿಯೂರಪ್ಪ ವಿರುದ್ಧ ರಾಯಣ್ಣ ಬ್ರಿಗೇಡ್ ಕಟ್ಟಿದ್ದು. ಇವೆಲ್ಲ ಗುಟ್ಟಾಗಿ ಉಳಿದಿಲ್ಲ.