ಸಿದ್ದು ಆಪ್ತ ಎಚ್‌.ಸಿ.ಮಹದೇವಪ್ಪಗೆ ಸಿಎಂ ಯಡಿಯೂರಪ್ಪ ಸನ್ಮಾನ!| ಹೊಗಳಿ ಅಚ್ಚರಿ ಮೂಡಿಸಿದ ಬಿಎಸ್‌ವೈ

ಹುಬ್ಬಳ್ಳಿ[ಡಿ.19]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಅವರನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಜಗದಿಶ್‌ ಶೆಟ್ಟರ್‌ ಸನ್ಮಾನಿಸುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಜತೆಗೆ ಈ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದಾಗ ಮಹದೇವಪ್ಪ ಮಾಡಿದ ಕಾರ್ಯಗಳನ್ನು ಬಾಯ್ತುಂಬ ಹೊಗಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬುಧವಾರ ನಗರದಲ್ಲಿನ ಟೆಂಡರ್‌ ಶ್ಯೂರ್‌ ರಸ್ತೆ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿಗಳು, ಇದೇ ವೇಳೆ ಮಹದೇವರಪ್ಪ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಮಹದೇವಪ್ಪ, ಈ ಹಿಂದೆ ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ಈ ಟೆಂಡರ್‌ ಶ್ಯೂರ್‌ ರಸ್ತೆ ಮಂಜೂರು ಮಾಡಿ . 48 ಕೋಟಿ ಅನುದಾನ ನೀಡಿದ್ದೆ. ಕಾಮಗಾರಿ ಪೂರ್ಣಗೊಂಡು ಅದೀಗ ರಾಜ್ಯದಲ್ಲಿಯೇ ಮಾದರಿ ರಸ್ತೆಯಾಗಿದೆ. ಇದರ ಉದ್ಘಾಟನೆ ವೇಳೆ ತಾವು ಉಪಸ್ಥಿತರಿರ ಬೇಕೆಂದು ಸ್ವತಃ ಯಡಿಯೂರಪ್ಪ, ಕಾರಜೋಳ, ಶೆಟ್ಟರ್‌ ಮನವಿ ಮಾಡಿದ್ದರು. ಆದಕಾರಣ ಇಲ್ಲಿಗೆ ಬಂದೆ. ನನ್ನನ್ನು ವೇದಿಕೆಗೆ ಕರೆದು ಸನ್ಮಾನಿಸಿ, ಗೌರವ ತೋರಿದ್ದಾರೆ. ಅವರ ಈ ಉದಾರತೆಗೆ ಋುಣಿಯಾಗಿದ್ದೇನೆ ಎಂದರು.