ಬೆಂಗಳೂರು, (ಜ.12) : ಬಹುದಿನಗಳ ಬಳಿಕ ನಾಳೆ ಅಂದ್ರೆ ಜನವರಿ 13ರಂದು  7 ರಿಂದ 8 ಜನ ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ನಾಳೆ (ಬುಧವಾರ) ಮಧ್ಯಾಹ್ನ 3.50ಕ್ಕೆ ರಾಜಭವನದಲ್ಲಿ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯ ನಡೆಯಲಿದ್ದು, ಈ ಹಿನ್ನಲೆ ನೂತನ ಸಚಿವರಾಗಲಿರುವ ಶಾಸಕರಿಗೆ ಮುಖ್ಯಮಂತ್ರಿಗಳೇ ಕರೆ ಮಾಡಿ ಆಹ್ವಾನ ನೀಡುತ್ತಿದ್ದಾರೆ.

ಸಿಎಂ ಬಿಎಸ್‌ವೈ ಮತ್ತೊಂದು ಲಂಚ್ ಮೀಟಿಂಗ್: ಈ ಬಾರಿ ಕಾಂಗ್ರೆಸ್ ಶಾಸಕರು ಭಾಗಿ..!

ಮತ್ತೊಂದೆಡೆ ಸಚಿವಾಕಾಂಕ್ಷಿಗಳು ಕೊನೆ ಕ್ಷಣದವರೆಗೂ ಮಂತ್ರಿಗಿರಿಗಾಗಿ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಸಿಎಂ ಬಿಎಸ್ ಯಡಿಯೂರಪ್ಪಗೆ ದುಂಬಾಲು ಬಿದ್ದಿದ್ದಾರೆ.

ಸಂಪುಟ ವಿಸ್ತರಣೆಯ ಕಸರತ್ತಿನಲ್ಲಿರುವ ಸಿಎಂ ಬಿಎಸ್​ ಯಡಿಯೂರಪ್ಪ ಇಂದು (ಮಂಗಳವಾರ) ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯಿರುವ ಜನಾರ್ದನ ಹೋಟೆಲ್​​ನಲ್ಲಿ ದೋಸೆ ಸವಿದು ಆತ್ಮೀಯರೊಂದಿಗೆ ಚರ್ಚಿಸಿದರು. 

ಸಿಎಂ ಜೊತೆ ಸಚಿವ ಆರ್ ಅಶೋಕ್ ಹಾಗೂ ಶಾಸಕರಾದ ಎಸ್ ಆರ್ ವಿಶ್ವನಾಥ್, ಎಂ ಕೃಷ್ಣಪ್ಪ ಸಾಥ್ ಕೊಟ್ಟರು. ಈ ವೇಳೆ ಸಂಪುಟ ವಿಸ್ತರಣೆ ಸಂಬಂಧಿಸಿದಂತೆ ಚರ್ಚೆಗಳು ಸಹ ನಡೆದಿವೆ ಎಂದು ತಿಳಿದುಬಂದಿದೆ.