Asianet Suvarna News Asianet Suvarna News

ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರಾ: ಸಿಎಂ ಬೊಮ್ಮಾಯಿ ಕಿಡಿ

ಪರ್ಸೆಂಟೇಜ್‌ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮ್ಮನೆ ರಾಜಕೀಯ ಆರೋಪ ಮಾಡುತ್ತಿದ್ದಾರೆ. ಅವರೇನು ಸತ್ಯಹರಿಶ್ಚಂದ್ರರಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. 

cm basavaraj bommai slams to siddaramaiah over 40 commission charge gvd
Author
Bangalore, First Published Aug 26, 2022, 8:15 AM IST

ಬೆಂಗಳೂರು (ಆ.26): ಪರ್ಸೆಂಟೇಜ್‌ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮ್ಮನೆ ರಾಜಕೀಯ ಆರೋಪ ಮಾಡುತ್ತಿದ್ದಾರೆ. ಅವರೇನು ಸತ್ಯಹರಿಶ್ಚಂದ್ರರಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇನು ಸತ್ಯ ಹರಿಶ್ಚಂದ್ರರಾ? ಕಾಂಗ್ರೆಸ್‌ ಇದ್ದಾಗ ಎಲ್ಲಾ ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದರೆ? ರಾಜಕೀಯವಾಗಿ ಮಾಡುತ್ತಿರುವ ಪ್ರಯತ್ನ ಇದಾಗಿದೆ. ಆಧಾರರಹಿತವಾಗಿ ಗುತ್ತಿಗೆದಾರರು ಸಹ ರಾಜಕಾರಣಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆಂಪಣ್ಣ ಅವರು ನನ್ನನ್ನು ಭೇಟಿಯಾದಾಗಲೂ ಸಾಕ್ಷ್ಯಾಧಾರಗಳಿದ್ದರೆ ಕೊಡಿ ಎಂದು ಹೇಳಿದ್ದೇನೆ. ಅವರ ಬೇಡಿಕೆಗಳನ್ನು ಈಡೇರಿಸಲಾಗಿದೆ. ಪ್ಯಾಕೇಜ್‌ ದೊಡ್ಡದಿದೆ ಎಂದಾಗ ತಾಲೂಕು ಮಟ್ಟದಲ್ಲಿ ಒಂದು ಕೋಟಿ ರು.ಗಿಂತ ಹೆಚ್ಚಿನ ಟೆಂಡರ್‌ ಆಗಬಾರದು ಎಂದು ಆದೇಶಿಸಲಾಗಿದೆ. ಅಂದಾಜು ಪಟ್ಟಿಯಲ್ಲಿ ಹೆಚ್ಚಿಗೆಯಾದರೆ ಪರಿಶೀಲಿಸಲು ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಅಂದಾಜು ಪಟ್ಟಿಯ ಮುನ್ನವೇ ಸಂಪೂರ್ಣವಾಗಿ ತನಿಖೆಯಾಗುತ್ತದೆ. ಟೆಂಡರ್‌ ನಿಯಮಗಳನ್ನೂ ಸಹ ಪರಿಶೀಲಿಸುತ್ತಾರೆ. ಪಾರದರ್ಶಕವಾಗಿ ಕೆಲಸ ಮಾಡಲಾಗುತ್ತಿದೆ. ಗುತ್ತಿಗೆದಾರರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ಸಿದ್ದುಗೆ ಮೊಟ್ಟೆ ಎಸೆತ ಬಗ್ಗೆ ತನಿಖೆ: ಸಿಎಂ ಬೊಮ್ಮಾಯಿ

ಹಲವು ಗುತ್ತಿಗೆದಾರರ ಸಂಘಗಳಿವೆ. ಶೇ.5ಕ್ಕಿಂತ ಹೆಚ್ಚಿನ ಗುತ್ತಿಗೆಯನ್ನು ಕೊಡಬಾರದು ಎಂದು ಹೇಳಲಾಗಿದ್ದು, ಅದನ್ನು ಪಾಲನೆ ಮಾಡುತ್ತಿದ್ದೇವೆ. ಸಣ್ಣ ಗುತ್ತಿಗೆದಾರರ ಬಿಲ್ಲುಗಳನ್ನು ಅನುಮೋದಿಸಲಾಗುತ್ತಿದೆ. ಗುತ್ತಿಗೆಯಲ್ಲಿ ಪಾರದರ್ಶಕತೆ ಮತ್ತು ಜ್ಯೇಷ್ಠತೆಯನ್ನು ತರಲಾಗಿದೆ. ಸಣ್ಣ ಪ್ಯಾಕೇಜುಗಳನ್ನು ಮಾಡಬೇಕೆಂಬ ಅವರ ಬೇಡಿಕೆಯನ್ನು ಒಪ್ಪಿ ಆದೇಶ ಮಾಡಿದ್ದೇವೆ. ಎಲ್ಲಾ ಆದೇಶಗಳನ್ನು ಮಾಡಿಯೂ ಇವರು ಆರೋಪ ಮಾಡುತ್ತಾರೆ ಎಂದರೆ ಅರ್ಥವೇನು? ಯಾರಾದರೂ ಒಬ್ಬ ಅಧಿಕಾರಿ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ಹೇಳಲಿ, ಅವರ ಹೆಸರನ್ನು ತಿಳಿಸಲಿ. ಇಷ್ಟುದಿನ ಅವರು ಯಾರ ಹೆಸರನ್ನೂ ಹೇಳಿಲ್ಲ, ನಿನ್ನೆ ಹೆಸರು ಹೇಳಿದ್ದಾರೆ. ಸಚಿವ ಮುನಿರತ್ನ ಅವರು ಮಾನನಷ್ಟ ಮೊಕದ್ದಮೆಯನ್ನು ಹಾಕುವುದಾಗಿ ತಿಳಿಸಿದ್ದಾರೆ. ಬೇಡವೆಂದರೂ ಅವರು ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ಕಾಂಗ್ರೆಸ್ಸಿಗರಿಗೆ ಜಿನ್ನಾ ಕನಸೇ ಬೀಳೋದು: ಕಾಂಗ್ರೆಸ್ಸಿನವರು ಈ ದೇಶ ಒಡೆದೇ ಆಡಳಿತಕ್ಕೆ ಬಂದವರು. ಅವರಿಗೆ ಜಿನ್ನಾ ಮೇಲೆ ಬಹಳ ಪ್ರೀತಿ. ಅವರಿಗೆ ಯಾವಾಗಲೂ ಜಿನ್ನಾ ಕನಸೇ ಬೀಲೋದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು. ಜಿನ್ನಾ ಮತ್ತು ಸಾವರ್ಕರ್‌ ಇಬ್ಬರೂ ಒಂದೇ ಎಂಬ ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ್‌ ಹೇಳಿಕೆ ಕುರಿತು ರಾಣಿಬೆನ್ನೂರಿನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರಿಗೆ ಜಿನ್ನಾ ಕಂಡರೆ ಪ್ರೀತಿ. 

ರೈತರು ಆತಂಕಕ್ಕೆ ಒಳಗಾಗುವುದು ಬೇಡ: ಸಚಿವ ಪ್ರಭು ಚವ್ಹಾಣ್

ಅದಕ್ಕಾಗಿ ಅವರು ಈ ರೀತಿ ಹೇಳಿರುವುದರಲ್ಲಿ ಆಶ್ಚರ್ಯವೂ ಇಲ್ಲ. ಹೀಗಾಗಿ ಅವರ ಹೇಳಿಕೆ ಬಗ್ಗೆ ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ ಎಂದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಂದ ಮತ್ತೆ ಸರ್ಕಾರದ ಮೇಲೆ ಪರ್ಸೆಂಟೇಜ್‌ ಆರೋಪ ವಿಚಾರವಾಗಿ ಮಾತನಾಡಿದ ಅವರು, ಇದು ರಾಜಕೀಯ ಪ್ರೇರಿತ ಆರೋಪ. ಅವರಲ್ಲಿ ಸಾಕ್ಷಿ, ಆಧಾರಗಳಿದ್ದರೆ ಲೋಕಾಯುಕ್ತಕ್ಕೆ ಕೊಡಲಿ. ಅವರು ಸಾಕ್ಷಿ, ಆಧಾರ ಕೊಡಬೇಕು, ತನಿಖೆ ಆಗಬೇಕು, ಸತ್ಯ ಹೊರಬರಬೇಕು ಎಂದು ಪ್ರತಿಕ್ರಿಯಿಸಿದರು.

Follow Us:
Download App:
  • android
  • ios