ಸಿದ್ದು ಅವಧಿಯಲ್ಲಿ ನಡೆದ ಭ್ರಷ್ಟಾಚಾರ ದೇಶದಲ್ಲೆಲ್ಲೂ ನಡೆದಿಲ್ಲ: ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ದಾಖಲೆಗಳನ್ನು ರಾಹುಲ್ ಗಾಂಧಿ ಅವರಿಗೆ ಕಳುಹಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಡ್ಯ (ಅ.17): ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರದ ದಾಖಲೆಗಳನ್ನು ರಾಹುಲ್ ಗಾಂಧಿ ಅವರಿಗೆ ಕಳುಹಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕೆ.ಆರ್.ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆದಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿ ಸರ್ಕಾರದಲ್ಲಿ ದುಡ್ಡಿದ್ದವರಿಗೆ ನೌಕರಿ ಸಿಗಲಿದೆ ಎಂಬ ರಾಹುಲ್ ಆರೋಪಕ್ಕೆ ತಿರುಗೇಟು ನೀಡಿದರು.
ಬಹುಶಃ ರಾಹುಲ್‌ಗಾಂಧಿಗೆ ಮರೆವಿರಬಹುದು ಅಥವಾ ಕಾಂಗ್ರೆಸ್‌ನವರು ಅವರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವಷ್ಟು ಭ್ರಷ್ಟಾಚಾರ ಭಾರತದ ಯಾವುದೇ ರಾಜ್ಯದಲ್ಲೂ ನಡೆದಿಲ್ಲ. ಪೊಲೀಸರು, ಶಿಕ್ಷಕರು, ಪಿಯುಸಿ ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣಗಳಲ್ಲಿ ಸಾಕಷ್ಟು ಅಕ್ರಮ-ಅವ್ಯವಹಾರ ನಡೆದಿದೆ. ಅದೆಲ್ಲ ಪ್ರಕರಣಗಳ ತನಿಖೆ ನಡೆಯುತ್ತಿದೆ. ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ರಾಹುಲ್‌ಗೆ ಕಳುಹಿಸುತ್ತೇನೆ. ಬೇರೆಯವರ ಕನ್ನಡಿಯನ್ನು ನೋಡಿ ಅಣಕಿಸುವುದಕ್ಕಿಂತ ನಿಮ್ಮ ಕನ್ನಡಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಿ ಎಂದು ಪ್ರತಿಕ್ರಿಯಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಪ್ರಭಾಕರ ಕೋರೆ: ಸಿಎಂ ಬೊಮ್ಮಾಯಿ
ಸಿದ್ದರಾಮಯ್ಯ ಹೇಳುವುದು ಯಾವುದೂ ನಡೆಯದು: ಸಿದ್ದರಾಮಯ್ಯ ಹೇಳುವುದೆಲ್ಲಾ ಬರೀ ಸುಳ್ಳು. ಅವರು ಹೇಳಿದಂತೆ ಯಾವುದೂ ನಡೆಯುವುದಿಲ್ಲ. ಕಳೆದ ಚುನಾವಣೆ ಸಮಯದಲ್ಲಿ ನಮ್ಮಪ್ಪನಾಣೆಗೂ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಿಲ್ಲ ಎಂದಿದ್ದರು. ಇಬ್ಬರೂ ಮುಖ್ಯಮಂತ್ರಿಯಾದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
178 ಕೋಟಿ ಬಿಡುಗಡೆ: ಕೆಲವು ದಿನಗಳ ಮಳೆಯಿಂದ ಅನೇಕ ಕಡೆ ತೀವ್ರ ಹಾನಿಯಾಗಿದೆ. ಈಗಾಗಲೇ ಜಿಲ್ಲಾಧಿಕಾರಿ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ತಕ್ಷಣದ ಪರಿಹಾರ ಕಾಮಗಾರಿಗಳಿಗೆ .178 ಕೋಟಿ ಬಿಡುಗಡೆ ಮಾಡಿರುವುದಾಗಿ ಹೇಳಿದರು. ಮಳೆ ಪರಿಹಾರ ಕಾಮಗಾರಿಯನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದೇನೆ. ದೀರ್ಘಕಾಲಕ್ಕೆ ಅನುಸರಿಸಬೇಕಾದ ಪರಿಹಾರ ಕಾಮಗಾರಿಗಳಿಗೆ .600 ಕೋಟಿ ಹಣ ನೀಡಿದ್ದೇನೆ. ತುರ್ತು ಕಾಮಗಾರಿಗಳಿಗೆ ಬೇಕಾದ ಹಣದ ಅಂದಾಜುಪಟ್ಟಿಕಳುಹಿಸಿದರೆ ಬಿಡುಗಡೆಗೆ ಕ್ರಮ ವಹಿಸುವುದಾಗಿ ಆಯಾ ಭಾಗದ ಡಿಸಿ, ಸಿಇಓಗಳಿಗೆ ತಿಳಿಸಿರುವುದಾಗಿ ಹೇಳಿದರು. ಮಂಡ್ಯ ಜಿಲ್ಲೆಯಲ್ಲಿ ಹತ್ತು ಹಲವಾರು ಕೆರೆಗಳು ತುಂಬಿ ತೊಂದರೆಯಾಗಿದೆ. ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದೆ.
ಎಲ್ಲ 243 ವಾರ್ಡ್‌ನಲ್ಲೂ ಮೀನೂಟ ಮಳಿಗೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೀನಿಗೆ ಬಹಳ ಬೇಡಿಕೆ ಇರುವುದರಿಂದ 243 ವಾರ್ಡ್‌ಗಳಲ್ಲೂ ಮೀನು ಮಳಿಗೆ ಪ್ರಾರಂಭಿಸುವ ಯೋಜನೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅರಮನೆ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಒಳನಾಡು ಮೀನು ಉತ್ಪಾದಕರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 1500 ರಿಂದ 2 ಸಾವಿರ ಚದರ ಅಡಿ ಸ್ಥಳಾವಕಾಶದಲ್ಲಿ ಮೀನಿನ ಆಹಾರ ಮಳಿಗೆ ಪ್ರಾರಂಭಿಸುವ ಯೋಜನೆ ಇದೆ.
ಮಂಡ್ಯ ಬಾಲಕಿ ರೇಪ್ ಕೇಸ್: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಶೋಭಾ ಕರಂದ್ಲಾಜೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಹಾರ ಮಳಿಗೆ ಯೋಜನೆ ಯಶಸ್ವಿಯಾದರೆ ರಾಜ್ಯದ ಉಳಿದ ಎಲ್ಲ ಪಾಲಿಕೆಗಳಿಗೂ ಈ ಯೋಜನೆ ವಿಸ್ತರಿಸಲಾಗುವುದು ಎಂದರು. ಬಿಬಿಎಂಪಿಯಿಂದ ಸ್ಥಳಾವಕಾಶ ನೀಡಲಿದ್ದು, ಖಾಸಗಿಯವರು ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗುವುದು. ಬೆಂಗಳೂರಿನಲ್ಲಿ ಮೀನಿನ ಆಹಾರಕ್ಕೆ ಹೆಚ್ಚು ಬೇಡಿಕೆ ಇದೆ. ಕಬ್ಬನ್ ಪಾರ್ಕ್ನಲ್ಲಿ ಮೀನುಗಾರಿಕಾ ಇಲಾಖೆ ನಡೆಸುತ್ತಿರುವ ಮತ್ಸ್ಯ ದರ್ಶಿನಿ ಹೋಟೆಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸುತ್ತಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.