Asianet Suvarna News Asianet Suvarna News

ನೆಹರು ಚಿತ್ರ ಹಾಕದ್ದಕ್ಕೆ ಕಾಂಗ್ರೆಸ್ಸಿಗೆ ದುಃಖ: ಸಿಎಂ ಬೊಮ್ಮಾಯಿ

‘ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಮಹನೀಯರ ಗುರುತಿಸುವ ಕೆಲಸ ಮಾಡಿದ ನಮ್ಮನ್ನು ಶ್ಲಾಘಿಸುವ ಬದಲು ತಮ್ಮ ನಾಯಕರ (ಜವಾಹರ್‌ಲಾಲ್‌ ನೆಹರು) ಫೋಟೋ ಕೈ ಬಿಡಲಾಗಿದೆ ಎಂಬುದಾಗಿ ಕಾಂಗ್ರೆಸ್‌ ನಾಯಕರು ದುಃಖ ಪಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ಕುರಿತು ವ್ಯಂಗ್ಯವಾಡಿದ್ದಾರೆ. 

cm basavaraj bommai slams to congress gvd
Author
Bangalore, First Published Aug 16, 2022, 4:30 AM IST

ಬೆಂಗಳೂರು (ಆ.16): ‘ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಮಹನೀಯರ ಗುರುತಿಸುವ ಕೆಲಸ ಮಾಡಿದ ನಮ್ಮನ್ನು ಶ್ಲಾಘಿಸುವ ಬದಲು ತಮ್ಮ ನಾಯಕರ (ಜವಾಹರ್‌ಲಾಲ್‌ ನೆಹರು) ಫೋಟೋ ಕೈ ಬಿಡಲಾಗಿದೆ ಎಂಬುದಾಗಿ ಕಾಂಗ್ರೆಸ್‌ ನಾಯಕರು ದುಃಖ ಪಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ಕುರಿತು ವ್ಯಂಗ್ಯವಾಡಿದ್ದಾರೆ. 

ಸೋಮವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾದ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಪ್ರಕಟಣೆಯಲ್ಲಿ ಹಿಂದೆಂದೂ ಬಾರದ ಕನ್ನಡ ನಾಡಿನ ಹೋರಾಟಗಾರರ ಚಿತ್ರಗಳನ್ನು ಹಾಕಿ ಪ್ರಕಟಣೆ ಮಾಡಲಾಯಿತು. ಅದರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಲಿಲ್ಲ. ಈವರೆಗೆ ಅವರ ಕಾರ್ಯಗಳನ್ನು ಗುರುತಿಸಿರಲಿಲ್ಲ. ನಾವು ಅದನ್ನು ಮಾಡಿದರೆ, ಅವರ ನಾಯಕರ ಚಿತ್ರವಿಲ್ಲ ಎಂದು ದುಃಖಪಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಮಾಂಸ ಉತ್ಪಾದನಾ ಒಕ್ಕೂಟವಾಗಿ ಕುರಿ ನಿಗಮ ಪರಿವರ್ತನೆ: ಸಿಎಂ ಬೊಮ್ಮಾಯಿ

65 ವರ್ಷ ಮಾಜಿ ಪ್ರಧಾನಿ ಜವಾಹರ್‌ ಲಾಲ್‌ ನೆಹರು ಅವರ ಹೆಸರಿನಲ್ಲಿಯೇ ದೇಶ ನಡೆಸಿದ್ದಾರೆ. ನಾವು ಅವರನ್ನು ಮರೆತಿಲ್ಲ. ಅವರ ಕೆಲಸಗಳನ್ನು ಮರೆತಿಲ್ಲ. ಅವರ ಬಗ್ಗೆ ಗೌರವವಿದೆ. ಪ್ರಕಟಣೆಯಲ್ಲಿ ನೆಹರು ಅವರ ಚಿತ್ರವೂ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಎಲ್ಲಾ ಪ್ರಧಾನಿಗಳ ಸಾಧನೆ, ಉತ್ತಮ ಕಾರ್ಯಗಳ ಕುರಿತು ವಸ್ತು ಸಂಗ್ರಹಾಲಯ ಸ್ಥಾಪಿಸಿದ್ದಾರೆ. ನಮ್ಮ ಸಂಸ್ಕೃತಿ ಒಳ್ಳೆಯದನ್ನು ಸ್ಮರಿಸುವುದು. ಅದರೊಂದಿಗೆ 65 ವರ್ಷ ಬಿಟ್ಟಿರುವ ಹೆಸರುಗಳನ್ನು ಸ್ಮರಿಸುತ್ತಿದ್ದೇವೆ ಎಂದರು.

ಸಂವಿಧಾನ ನೀಡಿದ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಸಂಸತ್‌ ಭವನದೊಳಗೆ ಜಾಗ ಕೊಡಲಿಲ್ಲ. ತೀರಿಕೊಂಡಾಗ ಸ್ಥಳ ನೀಡಲಿಲ್ಲ. ಸ್ಮಾರಕಗಳನ್ನು ಅಲ್ಲಲ್ಲೇ ಬಿಟ್ಟಿದ್ದಾರೆ. ಅವುಗಳನ್ನು ಅಭಿವೃದ್ಧಿ ಮಾಡುವ ಕೆಲಸ ಮಾಡಲಾಗಿದೆ. ರಾಜ್ಯದಲ್ಲಿ ಅಂಬೇಡ್ಕರ್‌ ಭೇಟಿ ನೀಡಿದ 10 ಸ್ಥಳಗಳ ಸ್ಮಾರಕಕ್ಕೆ 25 ಕೋಟಿ ರು. ಹಣವನ್ನು ಬಜೆಟ್‌ನಲ್ಲಿ ನೀಡಲಾಗಿದೆ ಎಂದ ಅವರು, ಈ ದೇಶ ನಮ್ಮದೆಂಬ ಭಾವನೆಯಿಂದ ಅಭಿಮಾನದಿಂದ ಮುಂದೆ ಹೋಗಬೇಕಿದೆ. 

ದೊಡ್ಡಬಳ್ಳಾಪುರ ಸೇರಿ 5 ಕಡೆ ಜನೋತ್ಸವ: ಸಿಎಂ ಬೊಮ್ಮಾಯಿ

ದೇಶದ ಪ್ರತಿಯೊಬ್ಬರ ಶಕ್ತಿಯನ್ನು, ಆತ್ಮವನ್ನು ಒಂದುಗೂಡಿಸಿರುವುದು ನಮ್ಮ ಪ್ರಧಾನಿಗಳು. ಅಮೃತ ಕಾಲಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಹೇಳಿದರು. ಕರ್ನಾಟಕ ಸರ್ಕಾರ ಸ್ವಾತಂತ್ರ್ಯೋತ್ಸವ ನಿಮಿತ್ತ ನೀಡಿದ ಜಾಹೀರಾತಿನಲ್ಲಿ ಸ್ವಾತಂತತ್ರಕ್ಕಾಗಿ ಹೋರಾಡಿದ ಮಹನೀಯರ ಫೋಟೋಗಳಲ್ಲಿ ನೆಹರು ಫೋಟೋ ಇರದ್ಕಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸೇರಿದಂತೆ ಕಾಂಗ್ರೆಸಿಗರು ಕಿಡಿ ಕಾರಿದ್ದರು.

Follow Us:
Download App:
  • android
  • ios