* ಕೊರೋನಾ ಮಹಾಮಾರಿಗೆ ಮತ್ತೋರ್ವ ಕರ್ನಾಟಕದ ಹಿರಿಯ ರಾಜಕಾರಣಿ ಸಾವು* ಚಿಕ್ಕೋಡಿಯ ಮಾಜಿ ಶಾಸಕ ಕೊರೋನಾಗೆ ಬಲಿ* ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ

ಬೆಳಗಾವಿ, (ಮೇ.10): ಚಿಕ್ಕೋಡಿಯ ಮಾಜಿ ಶಾಸಕ ಮನೋಹರ ಕಟ್ಟಿಮನಿ (65) ಸೋಮವಾರ ಕೊರೋನಾ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ. 

ಕಳೆದ ಕೆಲ ದಿನಗಳ ಹಿಂದೆ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಅವರು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು (ಸೋಮವಾರ) ಮೃತಪಟ್ಟಿದ್ದಾರೆ.

ಕರ್ನಾಟಕದ ಮಾಜಿ ಸಚಿವ ಕೊರೋನಾಗೆ ಬಲಿ, ಬಿಎಸ್‌ವೈ ಸಂತಾಪ

1990 ರ ಚುನಾವಣೆಯಲ್ಲಿ ಮನೋಹರ ಕಟ್ಟೀಮನಿ ಅವರು ಜನತಾದಳ (ಸಂಯುಕ್ತ) ದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಮೃತರಿಗೆ ಪತ್ನಿ, ಓರ್ವ ಪುತ್ರಿ ಹಾಗೂ ಪುತ್ರಿ ಇದ್ದಾರೆ.

ಇದೇ ಕಿಲ್ಲರ್ ಕೊರೋನಾ ಮಾಜಿ ಸಚಿವ ಕೆ.ಶಾಣಪ್ಪ ಅವರನ್ನ ಸಹ ಭಾನುವಾರ) ಬಲಿಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಇನ್ನು ಸ್ಯಾಂಡಲ್‌ವುಡ್, ನಟ, ನಿರ್ಮಾಪಕರು ಸಹ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.