Asianet Suvarna News Asianet Suvarna News

ಬಿಜೆಪಿ ಮಾಡಿದ ಉತ್ತಮ ರಸ್ತೆಯಲ್ಲಿ ಕಾಂಗ್ರೆಸ್ ಯಾತ್ರೆ ಸಾಗಲಿ, ಫ್ಲೆಕ್ಸ್ ಹರಿದ ಆರೋಪಕ್ಕೆ ಛಲವಾದಿ ತಿರುಗೇಟು!

ಭಾರತ ಇಬ್ಬಾಗ ಮಾಡಿದ, ಕಾಶ್ಮೀರವನ್ನೇ ಭಾರತದಿಂದ 75 ವರ್ಷ ಬೇರ್ಪಡಿಸಿದ ಕಾಂಗ್ರೆಸ್ ಇದೀಗ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವುದು ಹಾಸ್ಸಾಸ್ಪದವಾಗಿದೆ. ಕರ್ನಾಟಕ ಪ್ರವೇಶಿಸಿರುವ ಯಾತ್ರೆ ಬಿಜೆಪಿ ಮಾಡಿದ ಉತ್ತಮ ರಸ್ತೆಯಲ್ಲಿ ಸಾಗಲಿ ಎಂದು ಬಿಜೆಪಿ ತಿರುಗೇಟು ನೀಡಿದೆ.
 

chalavadi narayanaswamy slams congress Bharat Jodo yatra ask Rahul gandhi to unite siddaramaiah and DK Shivakumar ckm
Author
First Published Sep 30, 2022, 1:32 PM IST

ಬೆಂಗಳೂರು(ಸೆ.30):  ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಿಸಿದೆ. ಇದರ ಬೆನ್ನಲ್ಲೇ ವಿವಾದ, ಆರೋಪ ಪ್ರತ್ಯಾರೋಪ ಜೋರಾಗಿದೆ. ಭಾರತ್ ಜೋಡೋ ಯಾತ್ರೆ ಫ್ಲೆಕ್ಸ್ ಬಿಜೆಪಿ ಕಾರ್ಯಕರ್ತರು ಹರಿದು ಹಾಕಿದ್ದಾರೆ ಅನ್ನೋ ಆರೋಪಕ್ಕೆ ಬಿಜೆಪಿ ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.  ಯಾತ್ರೆ ಕರ್ನಾಟಕ ಪ್ರವೇಶ ಮಾಡುವ ಮೊದಲೇ ಫ್ಲೆಕ್ಸ್ ಕಿತ್ತು ಹಾಕಿದ್ದಾರೆ ಅನ್ನೋ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರೇ ಇದನ್ನು ಮಾಡಿ ಭಾರತ್ ಜೋಡೋ ಯಾತ್ರೆಯ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಈ ರೀತಿ ಮಾಡಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಿಸಿದೆ. ಅಟಲ್ ಬಿಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿ ಉತ್ತಮ ರಸ್ತೆಗಳನ್ನು ಮಾಡಿದ್ದಾರೆ. ಈ ರಸ್ತೆ ಮೂಲಕ ಜೋಡೋ ಯಾತ್ರೆ ಮುಂದುವರಿಯಲಿ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. ಭಾರತವನ್ನೇ ಇಬ್ಬಾಗ ಮಾಡಿದ ಕಾಂಗ್ರೆಸ್ ಇದೀಗ ಭಾರತವನ್ನು ಒಗ್ಗೂಡಿಸಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಚರ್ಚ್, ಮಸೀದಿಗೆ ಭೇಟಿ ನೀಡಿದ್ದೀರಿ. ಆದರೆ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗಿಲ್ಲ. ಹಲವು ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ್ದೀರಿ. ಆದರೆ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿಲ್ಲ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

 

Bharat Jodo Yatra: ರಾಹುಲ್‌ ಯಾತ್ರೆ ಬ್ಯಾನರ್‌ ಹರಿದ ಕಿಡಿಗೇಡಿಗಳು: ಪೊಲೀಸರಿಗೆ ದೂರು

ಪಾಕಿಸ್ತಾನ ಜಿಂದಾಬಾದ್, ಭಾರತವನ್ನೇ ಬೈದ ಕ್ರಿಶ್ಚಿಯನ್ ಮಿಶಿನರಿಯನ್ನು ವಿರೋಧಿಸುವ ಬದಲು ರಾಹುಲ್ ಗಾಂಧಿ ಭೇಟಿ ಮಾಡಿದ್ದಾರೆ. ಇದೀಗ ಕರ್ನಾಟಕ ಪ್ರವೇಶಿಸಿರುವ ಜೋಡೋ ಯಾತ್ರೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೋಡಿಸು ಕೆಲಸ ಮಾಡುತ್ತೀರಾ ಎಂದು ಛಲವಾದಿ ಪ್ರಶ್ನಿಸಿದ್ದಾರೆ.   ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370 ಕುರಿತು ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದ್ದರು. ಆದರೆ ಹೆಸರಿಗೆ ಮಾತ್ರ ಅಂಬೇಡ್ಕರ್ ಎಂದು ಹೇಳುವ ಕಾಂಗ್ರೆಸ್ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಕೆಲಸ ಮಾಡಿತು. ಆದರೆ ನರೇಂದ್ರ ಮೋದಿ ಆರ್ಟಿಕಲ್ 370 ರದ್ದು ಮಾಡಿ ದೇಶವನ್ನು ಒಂದೂಗಿಡಿಸಿದ್ದಾರೆ.  ಇದೀಗ ಅಧಿಕಾರಕ್ಕೆ ಬಂದರೆ ಅರ್ಟಿಕಲ್ 370 ವಾಪಸ್ ಪಡೆಯುವುದಾಗಿ ಹೇಳಿದ್ದಾರೆ.  ಈ ಮೂಲಕ ಮತ್ತೆ ಭಾರತವನ್ನು ವಿಭಜಿಸುವ ಕೆಲಸಕ್ಕೆ ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ. 

India Gate: ಕೈ ಬಿಟ್ಟು ಹೋಗದಂತೆ ಗಾಂಧಿಗಳ ಕಸರತ್ತು

ಪಾಕಿಸ್ತಾನ, ಬಾಂಗ್ಲಾದೇಶ ಮಾಡಿದವರು ಯಾರು?  ನಿಮ್ಮ ಕುಟುಂಬವೇ ಭಾರತವನ್ನು ಇಬ್ಬಾಗ ಮಾಡಿ ಇದೀಗ ಇರುವ ಭಾರತವನ್ನು ಜೋಡಿಸಲು ಹೊರಟ್ಟಿದ್ದೀರಿ. ಇದು ಯಾವ ರಾಜಕೀಯ?  ಈ ಹಿಂದೆ ಕಾಂಗ್ರೆಸ್ ಸರ್ಕಾರ ಏನು ಪ್ಲಾನ್ ಮಾಡುತ್ತಿದೆ? ಅನ್ನೋದು ಭಯೋತ್ಪಾದಕರಿಗೆ ತಿಳಿಯುತ್ತಿತ್ತು. ಭಯೋತ್ಪಾದಕರನ್ನು ಕರೆಸಿ ಕಾಂಗ್ರೆಸ್ ಪ್ರಧಾನ ಮಂತ್ರಿಗಳೇ ಕೈಕುಲುಕಿದ್ದರು. ಆದರೆ ಈಗ ಎನ್‌ಡಿಎ ಸರ್ಕಾರ ಭಯೋತ್ಪಾದಕರಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದೆ. ಭಾರತ ವಿರೋಧಿ ಚಟುವಟಿಕೆ ಮಾಡುವವರಿಗೂ ತಕ್ಕ ಶಾಸ್ತಿ ಮಾಡುತ್ತಿದೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.  
 

Follow Us:
Download App:
  • android
  • ios