Asianet Suvarna News Asianet Suvarna News

ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ನೀಡುತ್ತಿಲ್ಲ: ಸಚಿವ ಚಲುವರಾಯಸ್ವಾಮಿ

ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ 4 ಲಕ್ಷ ಕೋಟಿ ರು. ಅಧಿಕ ತೆರಿಗೆ ಹಣ ಹೋದರೂ ಕೇಂದ್ರ ಮಾತ್ರ ರಾಜ್ಯಕ್ಕೆ ಬರ ಪರಿಹಾರದ ಹಣ ನೀಡುತ್ತಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

Central govt is not providing drought relief to the state Says Minister N Cheluvarayaswamy gvd
Author
First Published Nov 23, 2023, 1:00 AM IST

ಹಲಗೂರು (ನ.23): ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ 4 ಲಕ್ಷ ಕೋಟಿ ರು. ಅಧಿಕ ತೆರಿಗೆ ಹಣ ಹೋದರೂ ಕೇಂದ್ರ ಮಾತ್ರ ರಾಜ್ಯಕ್ಕೆ ಬರ ಪರಿಹಾರದ ಹಣ ನೀಡುತ್ತಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಹಲಗೂರು ಸೇರಿದಂತೆ ವಿವಿಧ ಗ್ರಾಮಗಳ ಜಮೀನುಗಳಲ್ಲಿ ಒಣಗಿರುವ ರಾಗಿ ಮತ್ತು ಜೋಳದ ಬೆಳೆ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದ ಅಧಿಕಾರಿಗಳು ಮಾಡಿದ ವರದಿಗೆ ಕೇಂದ್ರ ಸರ್ಕಾರ ಪರಿಹಾರ ಕೊಡುತ್ತಿಲ್ಲ. ಜೆಡಿಎಸ್ ಬಿಜೆಪಿಯವರು ಮಾಡಿದ ಸರ್ವೆಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಪರಿಹಾರ ಘೋಷಣೆ ಮಾಡುತ್ತಾರಾ ಎಂದು ಪ್ರಶ್ನೆ ಮಾಡಿದರು.

ನಾನು ಎಸಿ ರೂಂ ನಲ್ಲಿ ಕುಳಿತು ಬರ ಅಧ್ಯಯನ ಮಾಡುತ್ತಿಲ್ಲ. ಬರ ಪರಿಸ್ಥಿತಿಯ ವೀಕ್ಷಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇವೆ. ನಾವು ಮೊದಲಿಂದಲೂ ಬರ ಕುರಿತು ಸರ್ವೇ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬರಗಾಲದ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಇದೆ. ಎಲ್ಲ ಸಂದರ್ಭಗಳನ್ನು ಎದರಿಸಲು ಸಿದ್ಧರಿದ್ದೇವೆ ಎಂದರು. ರಾಜ್ಯದಿಂದ ಸಾಕಷ್ಟು ತೆರಿಗೆ ಹಣ ಕೇಂದ್ರಕ್ಕೆ ಹೋದರೂ ರಾಜ್ಯದ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಕೇಂದ್ರದಿಂದ ನಮಗೆ ಕೊಡೋದು ಕೇವಲ 50 ಸಾವಿರ ಕೋಟಿ ಅಷ್ಟೇ. ಮೋದಿ ಏನು ಬಿಹಾರದ್ದು ಅಥವಾ ಅಮೆರಿಕಾದಿಂದಲೂ ತಂದು ಕೊಡಲ್ಲ. ನಮ್ಮ ಹಣ ನಮಗೆ ಕೊಡಲು ಏನು ಎಂದು ಪ್ರಶ್ನಿಸಿದರು.

ಸದಾಶಿವ ಆಯೋಗದ ವರದಿ ಜಾರಿ ಮಾಡೇ ಮಾಡ್ತೀವಿ: ಸಚಿವ ಪರಮೇಶ್ವರ್ ಅಭಯ

ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಮಾತ್ರ ಕೊಡುತ್ತಿದೆ. ಇದರ ಜೊತೆಗೆ 5 ಕೆಜಿ ಸೇರಿ 10 ಕೆ.ಜಿ ಕೊಡುತ್ತಿದ್ದೇವೆ. ಬರದ ಹಿನ್ನೆಲೆಯಲ್ಲಿ ಜನರ ಕೈಗೆ ಬೆಳೆ ಸೇರುವ ವಾತಾವರಣ ಕಡಿಮೆ ಇದೆ. ಇಂದಿನ ಬರ ಅಧ್ಯಯನ ವರದಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಸರ್ಕಾರ ನಿಮ್ಮ ಸುಖ ದುಃಖಗಳಿಗೆ ಸ್ಪಂದಿಸುತ್ತದೆ ಎಂದು ರೈತರಿಗೆ ಧೈರ್ಯ ತುಂಬಿದರು. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 18 ಸಾವಿರ ಕೋಟಿ ಅನುದಾನ ಕೇಳಿದ್ದೇವೆ. ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡುವುದು ತಡವಾದರೆ, ರಾಜ್ಯ ಸರ್ಕಾರವೇ ರೈತರ ನೆರವಿಗೆ ನಿಲ್ಲಲಿದೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಹಂತ ಹಂತವಾಗಿ ಪರಿಹಾರ ವಿತರಿಸುತ್ತೇವೆ‌ ಎಂದರು.

ಎಚ್‌ಡಿಕೆ ಹೇಳಿದಂತೆ ಕೀಳುಮಟ್ಟಕ್ಕೆ ಇಳಿದಿದ್ರೆ ರಾಜಕೀಯ ನಿವೃತ್ತಿ: ಡಿ.ಕೆ.ಶಿವಕುಮಾರ್‌

ಇದೇ ಸಂದರ್ಭದಲ್ಲಿ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಎಸ್ಪಿ ಯತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್ ಅಶೋಕ್, ಉಪ ವಿಭಾಗಾಅಧಿಕಾರಿ ಶಿವಮೂರ್ತಿ, ಮಳವಳ್ಳಿ ತಾಪಂ ಇಒ ಮಮತ, ತಹಸೀಲ್ದಾರರ ಲೋಕೇಶ್, ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೀಪಕ್ , ಕೃಷಿ ಅಧಿಕಾರಿ ಮಹದೇವಯ್ಯ, ಡಿ.ಟಿ ಸುನೀಲ್, ಆರ್ ಐ ಮಧುಸೂದನ್, ಪಿಡಿಒ ಸಿ.ರುದ್ರಯ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.

Latest Videos
Follow Us:
Download App:
  • android
  • ios