Asianet Suvarna News Asianet Suvarna News

Assembly election: ಎಸ್‌ಸಿ ಎಸ್‌ಟಿ ಮೀಸಲಾತಿ ಏರಿಕೆಗೆ ಶೀರ್ಘರ ಕೇಂದ್ರದಿಂದಲೂ ಅನುಮತಿ: ಸಚಿವ ಶ್ರೀರಾಮುಲು

ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವನ್ನು ಸರ್ವಾನುಮತದಿಂದ ಒಪ್ಪಿಗೆ ಪಡೆದು ಬಿಲ್‌ ಪಾಸ್‌ ಮಾಡಲಾಗಿದೆ. ಇದನ್ನು ವಿಧಾನ ಪರಿಷತ್‌ನಲ್ಲೂ ಬಿಲ್‌ ಪಾಸ್ ಮಾಡಿ, ಶೆಡ್ಯೂಲ್‌ 9ರಲ್ಲಿ ಸೇರಿಸಿ ಕೇಂದ್ರದಿಂದಲೂ ಅನುಮತಿ ಪಡೆಯಲಾಗುವುದು.

Central also gives permission for increase in SC ST reservation Minister Sriramulu sat
Author
First Published Dec 27, 2022, 1:00 PM IST

ಬೆಳಗಾವಿ (ಡಿ.27):  ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವನ್ನು ಸರ್ವಾನುಮತದಿಂದ ಒಪ್ಪಿಗೆ ಪಡೆದು ಬಿಲ್‌ ಪಾಸ್‌ ಮಾಡಲಾಗಿದೆ. ಇದನ್ನು ವಿಧಾನ ಪರಿಷತ್‌ನಲ್ಲೂ ಬಿಲ್‌ ಪಾಸ್ ಮಾಡಿ, ಶೆಡ್ಯೂಲ್‌ 9ರಲ್ಲಿ ಸೇರಿಸಿ ಕೇಂದ್ರದಿಂದಲೂ ಅನುಮತಿ ಪಡೆಯಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಸದನದಲ್ಲಿ ಎಸ್‌ಸಿ ಎಸ್ ಟಿ ಮೀಸಲಾತಿ ಹೆಚ್ಚಳದ ಮೂಲಕ ಐತಿಹಾಸಿಕ ತೀರ್ಮಾನ ಆಗಿದೆ. ಈ ಬಗ್ಗೆ ಸಿದ್ದರಾಮಯ್ಯ ಚರ್ಚೆಗೆ ಕೇಳಿದರು. ಆಗ ಕಾನೂನುಮಂತ್ರಿ ಮಾಧುಸ್ವಾಮಿ ಹಾಗೂ ಸಿದ್ದರಾಮಯ್ಯ ಮತ್ತು ಎಲ್ಲ ಶಾಸಕರು ಚರ್ಚೆಯಲ್ಲಿ ಭಾಗಿಯಾಗಿದರು. ನಂತರ ನಿಯಮ 69 ಅಡಿಯಲ್ಲಿ ಮೀಸಲಾತಿ ಹೆಚ್ಚಳದ ಬಿಲ್ ಪಾಸ್ ಮಾಡಿದ್ದೇವೆ. ಎಲ್ಲರ ಸರ್ವಾನುಮತದಿಂದ ಬಿಲ್ ಪಾಸ್ ಮಾಡಲಾಗಿದೆ ಎಂದು ತಿಳಿಸಿದರು.

ಇನ್ನು ರಾಜ್ಯದಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಆಧಾರ ಮೇಲೆ ಮೀಸಲಾತಿ ನೀಡಬೇಕಾಗಿತ್ತು. ಇಂದು ಪರಿಶಿಷ್ಟ ಜಾತಿಗಳು 102 ಜಾತಿಗಳಿವೆ. ಕೇಂದ್ರ ಸರ್ಕಾರ ಈಗಾಗಲೇ ಮೀಸಲಾತಿ ಕೊಟ್ಟಿತ್ತು. ರಾಜ್ಯ ಸರ್ಕಾರ ಕೊಟ್ಟಿರಲಿಲ್ಲ. ಈಗ ಮೀಸಲಾತಿಯನ್ನು ಕೊಟ್ಟು ವಿಧಾನಪರಿಷತ್ ನಲ್ಲೂ ಬಿಲ್ ಪಾಸ್ ಮಾಡಿಸುತ್ತೇವೆ. ನಂತರ ಶೆಡ್ಯೂಲ್ 9ರಲ್ಲಿ ಸೇರಿಸಿ ಕೇಂದ್ರದಿಂದಲೂ ಅನುಮತಿ ಪಡೆಯುತ್ತೇವೆ ಎಂದು ಮೀಸಲಾತಿ ಹೆಚ್ಚಳದ ಬಗ್ಗೆ ಮಾಹಿತಿಯನ್ನು ನೀಡಿದರು.

SC ST Reservation: ಎಸ್ಸಿ, ಎಸ್ಟಿ ಮೀಸಲು ಹೆಚ್ಚಳ ಮಸೂದೆ ಪಾಸ್‌

150 ಸ್ಥಾನ ಗೆಲ್ಲುವುದು ನಮ್ಮ ಟಾಸ್ಕ್: ಜನಾರ್ಧನರೆಡ್ಡಿ ಅವರು ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ. ಇದರಿಂದ ನಮಗೆ ಯಾವುದೇ ಟಾಸ್ಕ್‌ ಆರಂಭವಾಗಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. 2023ರಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವುದು ನಮ್ಮ‌ ಟಾಸ್ಕ್ ಆಗಿದೆ. ನಮ್ಮ ಟಾಸ್ಕ್ ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದಾಗಿದೆ. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವ ಮೂಲಕ, ಕಾಂಗ್ರೆಸ್ ಮುಕ್ತ ರಾಜ್ಯ ಆಗಬೇಕು ಎಂಬುದು ಉದ್ದೇಶವಾಗಿದೆ ಎಂದು ಹೇಳಿದರು.

ಜನಾರ್ಧನರೆಡ್ಡಿ ವಿರುದ್ಧ ಪ್ರಚಾರಕ್ಕೂ ಸಮ್ಮತಿ: ನಮ್ಮದು ರಾಷ್ಟ್ರೀಯ ಪಕ್ಷ, ಪಕ್ಷ ನನಗೆ ತಾಯಿ ಇದ್ದಹಾಗೆ. ನನಗೆ ಇಷ್ಟೊಂದು ಸ್ಥಾನಮಾನ ನೀಡಿದೆ. ಸ್ನೇಹ ಮತ್ತು ರಾಜಕಾರಣ ಒಂದೇ ತಟ್ಟಿಯಲ್ಲಿ ತೂಗಲು ಹೋಗಬೇಡಿ. ನಮ್ಮ ಪಕ್ಷ ಏನೇ ಕೆಲಸ ಹೇಳಿದರೂ ಮಾಡುವೆ ಎನ್ನುವ ಮೂಲಕ ಪರೋಕ್ಷವಾಗಿ ಜನಾರ್ದನ ರೆಡ್ಡಿ ವಿರುದ್ದ ಪ್ರಚಾರಕ್ಕೂ ಸಿದ್ದ ಎಂದು ಹೇಳಿದರು. ರಾಜ್ಯ ಕಾಂಗ್ರೆಸ್‌ನಿಂದ ಸ್ನೇಹ ಮುಖ್ಯವೋ. ಅಧಿಕಾರ ಮುಖ್ಯವೋ ಅಂತಾ ಕಾಂಗ್ರೆಸ್ ಟ್ವೀಟ್ ಮಾಡಿದೆ. ಕಾಂಗ್ರೆಸ್‌ ನವರದ್ದು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಸಿದ್ಷಾಂತಗಳು ಬೇರೆ, ಸ್ನೇಹವೇ ಬೇರೆಯಾಗಿದೆ. ನಾನು ಯಾಕೆ ಅವರ ಜೊತೆ ಹೋಗಲಿ? ಸ್ನೇಹ ಬೇರೆ ರಾಜಕಾರಣ ಬೇರೆ. ನನಗೆ ಪಕ್ಷ ಮುಖ್ಯ, ಪಕ್ಷ ಹೇಳಿದ ಕೆಲಸ ಮಾಡುವೆ. ಅವರಿಗೆ ಒಳ್ಳೆಯದು ಆಗಲಿ ಅಂತಾ ಬಯಸುವೆ ಎಂದು ಹೇಳಿದರು. 

ಶೇ.3ರಷ್ಟು ಮೀಸಲಾತಿ ಪಡೆಯಲು ಒಕ್ಕಲಿಗರೇನು ಭಿಕ್ಷುಕರಲ್ಲ: ಡಿಕೆಶಿ

 

ಸಾರಿಗೆ ನೌಕರರು ಮೆಮೋಗೆ ಸಹಿ ಮಾಡಿ ಕೆಲಸಕ್ಕೆ ಬರಲಿ: ಇನ್ನು ಸಾರಿಗೆ ನೌಕರರಿಗೆ ಮುಷ್ಕರ ಬೇಡವೆಂದು ಪ್ರಯಿಭಟನಾ ಸ್ಥಳಕ್ಕೆ ನಾನೇ ಅವರಿಗೆ ಹೋಗಿ ಹೇಳಿದ್ದೇನೆ. ನನ್ನ ಮಾತಿಗೆ ಅವರು ಬೆಲೆ ಕೊಡದೇ ಪ್ರತಿಭಟನೆ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹೋರಾಟಗಾರರು ಹುಟ್ಟಿಕೊಳ್ಳುತ್ತಾರೆ. ಪ್ರತಿಭಟನೆ ಮಾಡುವವರು ಬೇರೆಯವರ ಮಾತು ಕೇಳಬಾರದು. ಎಲ್ಲ ನಿಗಮಗಳಲ್ಲಿ 600 ಜನರು ಇದಾರೆ. ಅವರನ್ನು ಮತ್ತೆ ಸಾರಿಗೆ ಇಲಾಖೆಗೆ ಸೇರಿಸಿಕೊಳ್ಳಲು ಸಿದ್ದವಾಗಿದ್ದೇವೆ. ಅವರು ಮೆಮೋಗೆ ಸಹಿ ಮಾಡಿ ಇಲಾಖೆಗೆ ಸೇರಲಿ ಹೇಳಿದ್ದೇನೆ. ಆದರೆ, ಇದಕ್ಕೆ ಅವರು ಒಪ್ಪಿಕೊಳ್ಳುತ್ತಿಲ್ಲ. ಈ ಬಗ್ಗೆ ಕಾನೂನು ಸಲಹೆ ಪಡೆದು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.

Follow Us:
Download App:
  • android
  • ios