ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ| ಬಂಡೆದ್ದ ನಾಯಕರಿಗೆ ಶಾಕ್ ಕೊಟ್ಟ ಸಿಎಂ| ಅಸಾಮಾಧಾನವಿದ್ದರೆ ಹೈಕಮಾಂಡ್ ಜೊತೆ ಮಾತನಾಡಲಿ ಎಂದ ಸಿಎಂ
ಬೆಂಗಳೂಋಉ(ಜ.14): ಬಹುನಿರೀಕ್ಷಿತ ಬಿಎಸ್‌ವೈ ಸಂಪುಟ ವಿಸ್ತರಣೆಯಾಗಿದೆ. ಏಳು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರೆ, ಅಬಕಾರಿ ಸಚಿವ ಎಚ್. ನಾಗೇಶ್ ರಾಜೀನಾಮೆ ನೀಡಿದ್ದಾರೆ. ಹೀಗಿರುವಾಗ ತಾವು ಸಚಿವರಾಗುತ್ತೇವೆಂಬ ನಿರೀಕ್ಷೆಯಲ್ಲಿದ್ದ ಹಲವರ ಕನಸು ಭಗ್ನವಾಗಿದೆ. ಇವರಲ್ಲಿ ಆರ್. ಆರ್. ನಗರ ಶಾಸಕ ಮುನಿರತ್ನ ಕೂಡಾ ಒಬ್ಬರು. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಹೀಗಿರುವಾಗ ಅಸಮಾಧಾನಗೊಂಡ ನಾಯಕರಿಗೆ ಸಿಎಂ ಯಡಿಯೂರಪ್ಪ ಶಾಕ್ ನಿಡಿದ್ದಾರೆ.
"
ಹೌದು ಸಚಿವ ಸ್ಥಾನ ಸಿಗದೆ ರೆಬೆಲ್ ಆಗಿರುವ ನಾಯಕರು ಬಿಎಸ್‌ವೈ ವಿರುದ್ಧ ಕಿಡಿ ಕಾರಿದ್ದರು. ಒಬ್ಬರಾದ ಬಳಿಕ ಮತ್ತೊಬ್ಬರಂತೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಿಎಂ ಬಿ. ಎಸ್. ಯಡಿಯೂರಪ್ಪ 'ಅಸಮಾಧಾನ ಇದ್ದವರು ಬಿಜೆಪಿ ವರಿಞ್ಠರ ಜೊತೆ ಮಾತನಾಡಲಿ. ಹೈಕಮಾಂಡ್‌ಗೆ ದೂರು ನೀಡಲಿ ನನ್ನ ಅಭ್ಯಂತರವಿಲ್ಲ. ಸಚಿವ ಸಂಪುಟ ವಿಸ್ತರಣೆಯಾಗಿದ್ದು ಹೈಕಮಾಂಡ್‌ಗೆ ಗೊತ್ತಿದೆ. ಇದರಲ್ಲಿ ಅವರ ಪಾತ್ರ ದೊಡ್ಡದು. ಏನೇ ಇದ್ದರೂ ಅವರು ನೊಡಿಕೊಳ್ಳುತ್ತಾರೆ. ಹಗುರ ಮಾತುಗಳನ್ನಾಡಿ ಪಕ್ಷದ ಗೌರವಕ್ಕರೆ ಧಕ್ಕೆ ತರಬೇಡಿ' ಎಂದಿದ್ದಾರೆ.
ಅಸಮಾಧಾನಗೊಂಡವರು ಕಿಡಿ ಕಾರುತ್ತಿರುವ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ನೀಡಿರುವ ಈ ಹೇಳಿಕೆ ಭಾರೀ ಮಹತ್ವ ಪಡೆದಿದೆ. ಸಿಎಂ ಮಾತಿನಂತೆ ರೆಬೆಲ್ ನಾಯಕರು ಹೈಕಮಾಂಡ್ ಭೇಟಿಯಾಗುತ್ತಾರಾ? ಅಥವಾ ಬೇರೆ ಯಾವುದಾದರೂ ನಿರ್ಧಾರ ತೆಗೆದುಕೊಳ್ಳುತ್ತಾರಾ ಕಾದು ನೊಡಬೇಕಿದೆ.
ಬಿಎಸ್‌ವೈಗಿದೆ ಮತ್ತೊಂದು ಸವಾಲು:
ಸಚಿವ ಸಂಪುಟವೇನೋ ವಿಸ್ತರಣೆಯಾಗಿದೆ. ಸಚಿವ ಸ್ಥಾನ ಸಿಗದವರು ಸದ್ಯ ಅಸಮಾಧಾನಗೊಂಡಿದ್ದಾರೆ. ಈ ಟಾಸ್ಕ್ ಮುಗಿಯುತ್ತಿದ್ದಂತೆಯೇ ಸಿಎಂ ಎದುರು ಖಾತೆ ಹಂಚಿಕೆ ಸವಾಲು ಕೂಡಾ ನಿಂತಿದೆ. ಸೂಕ್ತ ಖಾತೆ ಸಹಂಚಿ, ಸಚಿವರಾದವರನ್ನು ಸಮಾಧಾನ ಪಡಿಸುವ ಮತ್ತೊಂದು ಮಹತ್ವದ ಟಾಸ್ಕ್ ಸಿಎಂಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 14, 2021, 12:24 PM IST