ಆರ್‌ಎಸ್‌ಎಸ್ ದೇಶ ಭಕ್ತ ಸಂಘಟನೆ, ಸಿದ್ದರಾಮಯ್ಯ ವಿರುದ್ದ ಸಿ.ಟಿ ರವಿ ಕಿಡಿ
ಕೇಂದ್ರ ಸರ್ಕಾರ ಪಿಎಫ್ ಐ ಸಂಘಟನೆ ನಿಷೇಧದ ಬೆನ್ನೆಲ್ಲೇ ರಾಜಕೀಯ ಮುಖಂಡರ ಹೇಳಿಕೆಗಳು ಕೂಡ ಜೋರಾಗಿದೆ. ಆರ್.ಎಸ್.ಎಸ್.ಸಂಘಟನೆಯನ್ನು ಬ್ಯಾನ್ ಮಾಡುವಂತೆ ಹೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಸೆ.29) : ಕೇಂದ್ರ ಸರ್ಕಾರ ಪಿಎಫ್ ಐ ಸಂಘಟನೆ ನಿಷೇಧದ ಬೆನ್ನೆಲ್ಲೇ ರಾಜಕೀಯ ಮುಖಂಡರ ಹೇಳಿಕೆಗಳು ಕೂಡ ಜೋರಾಗಿದೆ. ಆರ್.ಎಸ್.ಎಸ್ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಹೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್ ಬ್ಯಾನ್ ಮಾಡುವುದು ಎಂದರೆ, ಏನೆಂದು ತಿಳಿದುಕೊಂಡಿದ್ದಾರೆ. ಮಾತನಾಡುವ ಮುಂಚೆ ಎಚ್ಚರಿಕೆ ವಹಿಸಿ ಮಾತನಾಡಿ ಎಂದು ಕಿಡಿಕಾರಿದ್ದಾರೆ. 1925ನೇ ಇಸವಿಯಿಂದಲೂ ಆರ್.ಎಸ್.ಎಸ್. ದೇಶಭಕ್ತ ಸಂಘಟನೆ. ಬಾಹ್ಯ ಅಕ್ರಮಣ ಮತ್ತು ಪ್ರಕೃತಿ ವಿಕೋಪಗಳಾದಾಗ ದೇಶದ ಜೊತೆ ನಿಂತಿದ್ದು ಆರ್.ಎಸ್.ಎಸ್. ಆರ್.ಎಸ್.ಎಸ್ ಸ್ವಯಂಸೇವಕನೇ ದೇಶದ ಪ್ರಧಾನಿಯಾಗಿದ್ದಾರೆ. ನಿಷೇಧ ಮಾಡಲು ಒಂದು ಕಾರಣ ಬೇಕಲ್ವಾ ಎಂದು ಪ್ರಶ್ನಿಸಿದ್ದಾರೆ. ದೇಶಭಕ್ತಿ ಹಾಗೂ ದೇಶದ್ರೋಹ ಎರಡರ ನಡುವಿನ ವ್ಯತ್ಯಾಸ ನಿಮಗೆ ಗೊತ್ತಿಲ್ಲವಾ ಎಂದು ಪ್ರಶ್ನಿಸಿದ್ದಾರೆ. ಅಲ್ಪಸಂಖ್ಯಾತರ ವೋಟಿಗೆ ಆಸೆ ಪಟ್ಟು ದೇಶದ್ರೋಹದ ಕೆಲಸಕ್ಕೆ ಕಾಂಗ್ರೆಸ್-ಜೆಡಿಎಸ್ ಕುಮ್ಮಕ್ಕು ನೀಡುತ್ತಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಬದುಕು, ಜೀವನ, ಅಧಿಕಾರಕ್ಕಿಂತ ದೇಶ ದೊಡ್ಡದು. ಆದರೆ, ಆದರೆ, ಅವರಿಗೆ ದೇಶ ಹಾಳಾದ್ರೂ ಪರವಾಗಿಲ್ಲ ಅಧಿಕಾರ ಬೇಕು. ದೇಶದ್ರೋಹಿಗಳ ಜೊತೆ ಸೇರಿ ದೇಶಪ್ರೇಮಿಗಳನ್ನ ಅವಮಾನಿಸಿದರೆ ನೀವೂ ಉಳಿಯಲ್ಲ. ದೇಶದ್ರೋಹ ಮಾಡುವರನ್ನ ಹೊರ ಹಾಕಬೇಕು, ಬ್ಯಾನ್ ಮಾಡಬೇಕು. ದೇಶಪ್ರೇಮಿಗಳನ್ನ ಹೊರ ಹಾಕಿದರೆ ದೇಶವನ್ನು ಉಳಿಸಿಕೊಳ್ಳುವವರು ಯಾರು ಎಂದು ಕಾಂಗ್ರೆಸ್-ಜೆಡಿಎಸ್ಗೆ ತಿವಿದಿದ್ದಾರೆ.
Chikkamagaluru: ಕಾಂಗ್ರೆಸ್ಸಿನ ಪೇಸಿಎಂ ಪೇ ಪೋಸ್ಟರ್‌ಗೆ ಸಿ.ಟಿ.ರವಿ ಟಾಂಗ್
ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ: ಹಫ್ತಾ ಗ್ಯಾಂಗಿನ ನಾಯಕರೆಲ್ಲಾ ಪೋಲಿಟಿಕಲ್ ಲೇಬಲ್ ಅಂಟಿಸಿಕೊಂಡರೆ ಲೀಡರ್ ಆಗೋಕೆ ಸಾಧ್ಯವಿಲ್ಲ. ಹರಿಪ್ರಸಾದ್ ಒಂದು ಕಾಲದಲ್ಲಿ ಹಫ್ತಾ ವಸೂಲಿ ಗ್ಯಾಂಗನಲ್ಲಿದ್ದವರು. ಅವರ ಸರ್ಟಿಫಿಕೇಟ್ ನನಗೆ ಬೇಕಿಲ್ಲ ಎಂದು ಶಾಸಕ ಸಿ.ಟಿ.ರವಿ ಬಿ.ಕೆ.ಹರಿಪ್ರಸಾದ್ ವಿರುದ್ಧ ಕಿಡಿಕಾರಿದ್ದಾರೆ.
PFI Ban: ಇಷ್ಟು ಸಾಕಾಗುವುದಿಲ್ಲ, ಸಮಾಜವು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೆಕು: ಸಿ.ಟಿ.ರವಿ
ಲೂಟಿ ರವಿ ಮೊದಲು ಸಂವಿಧಾನಕ್ಕೆ ಗೌರವ ಕೊಡುವುದನ್ನು ಕಲಿಯಲಿ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಹರಿಪ್ರಸಾದ್ ನನಗೆ ಸರ್ಟಿಫಿಕೇಟ್ ಕೊಡುವ ಅವಶ್ಯಕತೆ ಇಲ್ಲ. ನಾನು ಏನೆಂದು ಚಿಕ್ಕಮಗಳೂರು ಜನಕ್ಕೆ ಗೊತ್ತಿದೆ. ಅದಕ್ಕೆ ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಈವರೆಗೆ ಕಾರ್ಪೋರೇಷನ್ನಿಂದ ಪಾರ್ಲಿಮೆಂಟ್ವರೆಗೂ ಒಂದೇ ಒಂದು ಚುನಾವಣೆ ಗೆಲ್ಲೋಕೆ ಆಗಿಲ್ಲ. ಗೆಲ್ಲೋ ಸಾಧ್ಯತೆಯೂ ಇಲ್ಲ. ಹರಿಪ್ರಸಾದ್ ರೀತಿಯಲ್ಲಿ ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯನೂ ಅಲ್ಲ. ನನ್ನ ಹಿಂದೆ ಹಪ್ತ ವಸೂಲಿ ಮಾಡಿದ ಕ್ಯಾರೆಕ್ಟರ್ರೂ ಇಲ್ಲ ಎಂದು ಲೇವಡಿ ಮಾಡಿದ್ದಾರೆ.