'ಮತ್ತೆ ವರುಣಾ ಕ್ಷೇತ್ರದಲ್ಲಿ ಚುನಾವಣಾ ಸ್ಪರ್ಧೆ ಸುಳಿವು ನೀಡಿದ ವಿಜಯೇಂದ್ರ'
- ನಾನು ಉಪಾಧ್ಯಕ್ಷನಾಗಿ ಇಡಿ ರಾಜ್ಯ ಸುತ್ತಬೇಕಿದೆ.
- ವಿಶೇಷವಾಗಿ ಹಳೆಮೈಸೂರು ಭಾಗದಲ್ಲಿ ಹೆಚ್ಚು ಒತ್ತು ಕೊಡಬೇಕಿದೆ ಅದನ್ನು ರಾಷ್ಟ್ರೀಯ ಅಧ್ಯಕ್ಷರೇ ಹೇಳಿದ್ದಾರೆ
- ವರುಣಾ ಕ್ಷೇತ್ರದಲ್ಲಿ ಟಿಕೆಟ್ ಕೊಡೋದು ಬಿಡೋದು ಪಕ್ಷ ತೀರ್ಮಾನ ಮಾಡುತ್ತದೆ
ಬೆಂಗಳೂರು (ಆ.05): ನಾನು ಉಪಾಧ್ಯಕ್ಷನಾಗಿ ಇಡಿ ರಾಜ್ಯ ಸುತ್ತಬೇಕಿದೆ. ವಿಶೇಷವಾಗಿ ಹಳೆಮೈಸೂರು ಭಾಗದಲ್ಲಿ ಹೆಚ್ಚು ಒತ್ತು ಕೊಡಬೇಕಿದೆ ಅದನ್ನು ರಾಷ್ಟ್ರೀಯ ಅಧ್ಯಕ್ಷರೇ ಹೇಳಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಬೆಂಗಳೂರಿನಲ್ಲಿಂದು ಮಾತನಾಡಿದ ವಿಜಯೇಂದ್ರ ಇಡಿ ರಾಜ್ಯದಲ್ಲಿ ಇಂದು ವಿಜಯೇಂದ್ರ ಎಂದು ಗುರುತಿಸಿದ್ದರೆ ಅದು ವರುಣಾ ಕ್ಷೇತ್ರ. ಅಲ್ಲಿ ಟಿಕೆಟ್ ಕೊಡೋದು ಬಿಡೋದು ಪಕ್ಷ ತೀರ್ಮಾನ ಮಾಡುತ್ತದೆ ಎಂದರು.
ಸಂಪುಟಕ್ಕೆ ನೂತನ ಸಚಿವರು : ಆಯ್ಕೆ ಸೀಕ್ರೇಟ್ ಹೇಳಿದ ವಿಜಯೇಂದ್ರ
ಇನ್ನು ನಮ್ಮದು ರಾಷ್ಟ್ರೀಯ ಪಕ್ಷ. ಇದು ಒಂದು ಸಮುದಾಯಕ್ಕೆ ಸೀಮಿತವಾಗಿರುವುದಿಲ್ಲ. ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ. ಎಲ್ಲಾ ಸಮುದಾಯದವನ್ನು ಜೊತೆಗೆ ತೆಗೆದುಕೊಂಡು ಸಂಘಟನೆ ಮಾಡುತ್ತದೆ. ರಾಜ್ಯದಲ್ಲಿ ಯಡಿಯೂರಪ್ಪ ನವರು ಮಾಡಿದ್ದು ಅದನ್ನೆ. ಒಂದು ಕಾಲದಲ್ಲಿ ಬಿಜೆಪಿ ಅಂದರೆ ನಗರಕ್ಕೆ ಸೀಮಿತವಾಗಿತ್ತು. ಈಗ ಹೇಗೆ ಬದಲಾಗಿದೆ. ಯಡಿಯೂರಪ್ಪನವರು ಪ್ರತಿಜ್ಞೆ ಮಾಡಿದ್ದಾರೆ. ರಾಜ್ಯ ಸುತ್ತಿ ಸಂಘಟನೆ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಪ್ರತಿಜ್ಞೆ ಮಾಡಿದ್ದಾರೆ ಎಂದರು.
ವಿಜಯೇಂದ್ರಗೆ ಸಚಿವ ಸ್ಥಾನ ಮಿಸ್ ವಿಚಾರ : ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಸಚಿವ ಸ್ಥಾನ ಮಿಸ್ ಅಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲವೆಂಬ ನೋವಿಲ್ಲ. ನನಗೆ ಕೊಡಿ ಎಂದು ಯಡಿಯೂರಪ್ಪ ಒತ್ತಡ ಹೇರಿಲ್ಲ. ಯಡಿಯೂರಪ್ಪ ಕಂಡೀಷನ್ ಇಟ್ಟಿದ್ದರು ಎನ್ನುವುದು ಸುಳ್ಳು ಎಂದು ವಿಜಯೇಂದ್ರ ಹೇಳಿದರು.
ನಮ್ಮದು ರಾಷ್ಟ್ರೀಯ ಪಕ್ಷ, ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಅವರು ಪಕ್ಷವನ್ನ ಈ ಹಂತಕ್ಕೆ ತಂದಿದ್ದಾರೆ. ವಿಜಯೇಂದ್ರ ತೆಗೆದುಕೊಳ್ಳುವಂತೆ ಅವರು ಒತ್ತಡ ಹೇರಿಲ್ಲ. ಯಡಿಯೂರಪ್ಪ ಯಾವುದೇ ಕಂಡೀಷನ್ ಇಟ್ಟಿಲ್ಲ. ನನಗೆ ಸಂಪುಟದಲ್ಲಿ ಅವಕಾಶ ಸಿಗಲಿಲ್ಲವೆಂಬ ಅಸಮಾಧಾನವಿಲ್ಲ. ಪಕ್ಷ ಸಂಘಟನೆಗೆ ಅವಕಾಶ ಕೊಟ್ಟಿದೆ. ನಾನು ಮುಂದುವರಿಸುತ್ತೇನೆ ಎಂದು ವಿಜಯೇಂದ್ರ ಹೇಳಿದರು.
ಲಿಂಗಾಯತ ಸಮುದಾಯ ಒಟ್ಟು ಮಾಡ್ತೀರ ಎಂಬ ಪ್ರಶ್ನೆಗೂ ಉತ್ತರಿಸಿದ ವಿಜಯೇಂದ್ರ ಯಾಕೆ ಮಾಡಬಾರದು,ಮಾಡುತ್ತೇನೆ. ಆದರೆ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಬೇಕು ಎಂದು ಹೇಳಿದರು.