Asianet Suvarna News Asianet Suvarna News

ಕ್ವಾರಂಟೈನ್‌ನಲ್ಲಿ ವಿಶೇಷ ಬುಕ್ ಹಿಡಿದು ಕಾಲ ಕಳೆಯುತ್ತಿರೋ ಸಿಎಂ..!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಕೆಲ ಸಿಬ್ಬಂದಿಗೆ ಕೊರೋನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೋಂ ಕ್ವಾರಂಟೈನ್ ಆಗಿದ್ದಾರೆ. ಈ ವೇಳೆ ಪುಸ್ತಕ ಓದುವಲ್ಲಿ ಬಿಎಸ್​ವೈ ಮಗ್ನರಾಗಿದ್ದಾರೆ.

bs yediyurappa spending time by reading books in home quarantine
Author
Bengaluru, First Published Jul 12, 2020, 2:29 PM IST

ಬೆಂಗಳೂರು, (ಜು.12):  ಸಿಎಂ ಗೃಹ ಕಚೇರಿ ಕೃಷ್ಣಾಕ್ಕೂ ಕೊರೋನಾ ವಕ್ಕರಿಸಿಕೊಂಡಿದ್ದರಿಂದ ಬಿಎಸ್ ಯಡಿಯೂರಪ್ಪ ಅವರು ಸ್ವಯಂ ಕ್ವಾರಂಟೈನ್ ಆಗಿದ್ದು. ಹೀಗಾಗಿ ಶುಕ್ರವಾರದಿಂದ ಕೆಲ ದಿನಗಳ ಕಾಲ ಯಡಿಯೂರಪ್ಪ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. 

ಈ ಮಧ್ಯೆ ಅವರು ಪುಸ್ತಕ ಓದುವ ಮೂಲಕ ಕಾಲ ಕಳೆಯುತ್ತಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಬಿಎಸ್​ವೈ, ಬಿಡುವಿನ ವೇಳೆಯಲ್ಲಿ ನನಗೆ ಅತ್ಯಂತ ಪ್ರಿಯವಾದ ಕಾಲಕ್ಷೇಪವೆಂದರೆ ಓದುವುದು. ನೂರಾರು ಸಂಗತಿಗಳ ಬಗ್ಗೆ ತಿಳಿದಷ್ಟೂ ತಿಳಿಯಬಹುದಾದ ವಿಷಯಗಳಿವೆ, ಜ್ಞಾನಾರ್ಜನೆ ಎಂದೂ ಮುಗಿಯದ ಕಾಯಕ. ಇಂದಿನ ಭಾನುವಾರದ ಲಾಕ್ ಡೌನ್ ಮತ್ತು ಸ್ವ-ಕ್ವಾರಂಟೈನ್ ನಲ್ಲಿರುವ ವೇಳೆ ಸಿಕ್ಕ ಸ್ವಲ್ಪ ಬಿಡುವಿನ ಸಮಯವನ್ನು ಖಾಂಡೇಕರ್ ಅವರ ಯಯಾತಿಯ ಜೊತೆಗೆ ಕಳೆಯುತ್ತಿದ್ದೇನೆ. ಎಂದಿದ್ದಾರೆ.

ಸಿಎಂ ಬದಲಿ ಕಾರು ಚಾಲಕನಿಗೆ ವಕ್ಕರಿಸಿದ ಕೊರೋನಾ;  BSY ಸೆಲ್ಫ್ ಕ್ವಾರಂಟೈನ್

ಕೊರೋನಾ ವೈರಸ್​ ರಾಜ್ಯಕ್ಕೆ ಕಾಲಿಟ್ಟಾಗಿನಿಂದಲೂ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನಿರಂತರವಾಗಿ ಮೀಟಿಂಗ್​ ನಡೆಸುತ್ತಲೇ ಇದ್ದರು. ಈಗ ಕ್ವಾರಂಟೈನ್​ನಿಂದಾಗಿ ಅವರಿಗೆ ಕೊಂಚ ಬಿಡುವು ಸಿಕ್ಕಂತಾಗಿದೆ. 

ಆದರೂ ಬಿಎಸ್​ವೈ ಮನೆಯಿಂದಲೇ ಎಲ್ಲವನ್ನೂ ನಿರ್ವಹಣೆ ಮಾಡುತ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್ ‌ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು  ನೀಡುತ್ತಿದ್ದಾರೆ. 

Follow Us:
Download App:
  • android
  • ios