ಸೋಮಣ್ಣರ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣರಲ್ಲ: ಎಂ.ಪಿ.ರೇಣುಕಾಚಾರ್ಯ

ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದ್ದು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾಗಿದೆ. ಅಲ್ಲದೆ ಪಕ್ಷದ ಸೋಲಿಗೆ ನೀವು (ಯತ್ನಾಳ್) ನಿರಂತರವಾಗಿ ಮಾತನಾಡಿದ್ದೂ ಒಂದು ಕಾರಣ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

BS Yediyurappa and BY Vijayendra not responsible for V Somannas defeat Says MP Renukacharya gvd

ತುಮಕೂರು (ಡಿ.15): ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಇಳಿಸಿದ್ದು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾಗಿದೆ. ಅಲ್ಲದೆ ಪಕ್ಷದ ಸೋಲಿಗೆ ನೀವು (ಯತ್ನಾಳ್) ನಿರಂತರವಾಗಿ ಮಾತನಾಡಿದ್ದೂ ಒಂದು ಕಾರಣ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ. ಯಡಿಯೂರಪ್ಪ ರಾಜೀನಾಮೆ ಕೊಟ್ಟ ಮೇಲೂ. ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಹಾದಿ-ಬೀದಿಯಲ್ಲಿ ಮಾತನಾಡಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯತ್ನಾಳ್ ಹಿರಿಯರಿದ್ದಾರೆ. ಯತ್ನಾಳ್ ಮೇಲೆ ಗೌರವ ಇದೆ. ಆದರೆ ನೀವು ಆಡಿಯೋ ಮಾಡಿ ಲೀಕ್ ಮಾಡಿದ್ದೀರಲ್ಲ ಎಂದು ಕಿಡಿಕಾರಿದರು. ಯಡಿಯೂರಪ್ಪರನ್ನು ಇಳಿಸಿದ ಮೇಲೆ ವೀರಶೈವ ಲಿಂಗಾಯತರು ಅಷ್ಟೇ ಅಲ್ಲ. ಎಲ್ಲಾ ವರ್ಗದ ಜನರು ವಿರುದ್ಧ ಆದರು. ಹಾಗಾಗಿ ಸೋಲಬೇಕಾಗಿತ್ತು ಎಂದರು. ಶಿಕಾರಿಪುರದಲ್ಲಿ ವಿಜಯೇಂದ್ರ ಅವರನ್ನು ಸೋಲಿಸಲು ಕೆಲವರು ಷಡ್ಯಂತ್ರ ನಡೆಸಿದರು. ಸ್ವಪಕ್ಷದವರೇ ಷಡ್ಯಂತ್ರ ಮಾಡಿದರು. ಆದರೆ ಶಿಕಾರಿಪುರದ ಜನರ ಆಶೀರ್ವಾದದಿಂದ ವಿಜಯೇಂದ್ರ ಗೆದ್ದರು. ಷಡ್ಯಂತ್ರ ನಡೆಸಿದವರ ಹೆಸರನ್ನು ಮುಂದಿನ ದಿನಗಳಲ್ಲಿ ಹೇಳುವುದಾಗಿ ತಿಳಿಸಿದರು.

ಚೂರು ವ್ಯತ್ಯಾಸವಾದ್ರೂ ಡ್ಯಾಂಗಳ ಕೀಲಿ ಕೇಂದ್ರ ಸರ್ಕಾರದ ಕೈಗೆ: ಡಿಕೆಶಿ

ಸೋಮಣ್ಣ ಅವರ ಸೋಲಿಗೆ ಯಡಿಯೂರಪ್ಪ ವಿಜಯೇಂದ್ರ ಕಾರಣರಲ್ಲ ಎಂದರು. ಬಸವರಾಜ ಬೊಮ್ಮಾಯಿ ಅವರನ್ನು ಸೋಲಿಸಬೇಕೆಂದು, ವಿಜಯೇಂದ್ರ ಮತ್ತು ಯಡಿಯೂರಪ್ಪ ಎಲ್ಲೂ ಕೂಡ ಪ್ರಯತ್ನ ಮಾಡಿಲ್ಲ. ಗೋವಿಂದರಾಜ ನಗರ ಕ್ಷೇತ್ರದಲ್ಲಿ ಫಲಿತಾಂಶ ತದ್ವಿರುದ್ಧ ಆಗಲಿದೆ ಎಂದು ತಿಳಿದು, ಸ್ವತಃ ಸೋಮಣ್ಣ ಅವರೇ, ಮೈಸೂರಿಗೆ ಹೋದರು. ಲಿಂಗಾಯತ ನಾಯಕರಾಗಬೇಕು ಮತ್ತು ಸಿಎಂ ಆಗಬೇಕೆಂದು ಹಗಲುಗನಸುಗಳ ಕಂಡು ಅಲ್ಲಿಗೆ ಹೋದರು ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನ ಹೇಳಿದ್ದಕ್ಕೆ ಸೋಮಣ್ಣ ಅವರಿಗೆ ಅಷ್ಟು ಮತಗಳು ಬಂದಿವೆ. ಸೋಮಣ್ಣ ಮತ್ತು ಯತ್ನಾಳ್ ಇಬ್ಬರು ಮೆದುಳಿಗೂ ನಾಲಿಗೆಗೂ ಲಿಂಕ್ ಇಲ್ಲದಂತೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಸೋಮಣ್ಣ ದೆಹಲಿಯ ವರಿಷ್ಠರನ್ನ ಭೇಟಿ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವಾಗ್ದಾಳಿ ಮಾಡುವುದು ಸರಿಯಲ್ಲ ಎಂದರು. ಗೋವಿಂದರಾಜನಗರ ಕ್ಷೇತ್ರದಲ್ಲಿ ಸೋಮಣ್ಣ ಸೋಲುತ್ತಾರೆ ಅನ್ನುವಂಥದ್ದು ಮೊದಲೇ ಗೊತ್ತಿತ್ತು. ಹಾಗಾಗಿ ಸೋಮಣ್ಣ ಬೇರೆ ಕಡೆ ಹೋಗಿ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್‌ನಲ್ಲಿ ಅವರಿಗೆ ಯಾವುದೇ ಸ್ಥಾನಮಾನ ಕೊಟ್ಟಿರಲಿಲ್ಲ. ಆದ್ದರಿಂದ ಯಡಿಯೂರಪ್ಪರ ಕಾಲನ್ನು ಹಿಡಿದುಕೊಂಡು ಕಾಡಿ ಬೇಡಿ ಬಿಜೆಪಿಗೆ ಬಂದರು ಎಂದರು.

ಸೋಮಣ್ಣ ಸೋತು ಕಣ್ಣೀರು ಹಾಕುತ್ತಿದ್ದಾಗ ಯಡಿಯೂರಪ್ಪ ಅವರ ಮನೆಗೋಗಿ ಸಮಾಧಾನ ಮಾಡಿದ್ದರು ಎಂದರು. ಸೋಮಣ್ಣ ಅವರು ಕಾಂಗ್ರೆಸ್‌ನಿಂದ ಬಂದಿದ್ದಾರೆ. ಯಡಿಯೂರಪ್ಪ ಕಟ್ಟಿ ಬೆಳೆಸಿದ ಬಿಜೆಪಿ ಬಗ್ಗೆ ಮಾತಾಡುವುದಕ್ಕೆ ನಿಮಗೆ ಯಾವ ನೈತಿಕತೆ ಇದೆ. ಸೋಮಣ್ಣ ನೀವು ಮೂಲ ಕಾಂಗ್ರೆಸ್ಸಿಗರು ನೀವೇನು ಹೋರಾಟ ಮಾಡಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದೀರ ಎಂದು ಪ್ರಶ್ನಿಸಿದರು. ಸೋಮಣ್ಣ ಸುಳ್ಳಿನಲ್ಲಿ ಭಾರಿ ಮೋಡಿಗಾರ. ಅಬ್ಬಬ್ಬಾ ಅವರ ಬಾಯಲ್ಲಿ ಬರುತ್ತವೆ ಎಂದರೆ ಎಂದು ಹೀಯಾಳಿಸಿದರು. ಸೋಮಣ್ಣ ಸತ್ಯ ಹರಿಶ್ಚಂದ್ರ ಎನ್ನುವ ಹಾಗೆ ಮಾತಾಡುತ್ತಾರೆ. ಸುಳ್ಳಿಗೆ ಮತ್ತೊಂದು ಹೆಸರೇ ಸೋಮಣ್ಣ ಅಂತ ಜನ ಮಾತನಾಡುತ್ತಾರೆ. ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುವುದಕ್ಕೆ ಸೋಮಣ್ಣನೇ ಕಾರಣ ಎಂದರು.

ಕಾಂಗ್ರೆಸ್ ಔತಣ ಕೂಟಕ್ಕೆ ಬಿಜೆಪಿಗರು ಗಂಭೀರ ವಿಚಾರ: ಬಿ.ವೈ.ವಿಜಯೇಂದ್ರ

ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕ ಅಂದರೆ ಯಡಿಯೂರಪ್ಪ. ಯಡಿಯೂರಪ್ಪನವರ ಟೀಕೆ ಮಾಡುವ ನೈತಿಕ ಹಕ್ಕು ಸೋಮಣ್ಣ ಅವರಿಗೆಲ್ಲ ಪದೇ ಪದೇ ವಾಗ್ದಾಳಿ ಮಾಡುವುದು ಸರಿಯಲ್ಲ. ಈಗಲಾದರೂ ಬಿಡ್ರಿ ಅದನ್ನು ಎಂದು ಸೋಮಣ್ಣ ವಿರುದ್ಧ ಹರಿಹಾಯ್ದರು. ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಜಾಸ್ತಿ ಮಾಡಲು ಹೊರಟಿದ್ದಾರೆ. ನೀವೇನಾದ್ರು ಪೆಟ್ರೋಲ್, ಡಿಸೇಲ್ ದರ ಜಾಸ್ತಿ ಮಾಡಿದರೆ ದೊಡ್ಡ ಹೋರಾಟ ಮಾಡುತ್ತೇವೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ತೊಲಗಬೇಕು, ಅಲ್ಲಿಯವರೆಗೆ ದೊಡ್ಡ ಹೋರಾಟ ಮಾಡುವುದಾಗಿ ತಿಳಿಸಿದರು. ಇದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ. ಜನಸಾಮಾನ್ಯರು ದಿನನಿತ್ಯ ಬಳಸುವ ವಸ್ತುಗಳ ದರ ಗಗನಕ್ಕೆರಿದೆ. ಸರ್ಕಾರ ರಚನೆಯಾಗಿ 6 ತಿಂಗಳಾದರೂ, ಇನ್ನು ಟೇಕ್ ಅಪ್ ಆಗಿಲ್ಲ ಎಂದು ಟೀಕಿಸಿದರು.

Latest Videos
Follow Us:
Download App:
  • android
  • ios