ಜೆಡಿಎಸ್‌ ಪರ ಪ್ರಚಾರಕ್ಕೆ ಕೆಸಿಆರ್‌ ಪಕ್ಷದ 50 ಜನರ ತಂಡ ರವಾನೆ: ಚುನಾವಣಾ ದಿನಾಂಕ ಘೋಷಣೆ ಬಳಿಕ ಪ್ರಚಾರ ಶುರು..!

ಈ ಕಾರಣಕ್ಕಾಗಿಯೇ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಲೇ, ಬಿಆರ್‌ಎಸ್‌ನ ಸಂಸದರು, ಸಚಿವರು, ಶಾಸಕರು, ಹಿರಿಯ ನಾಯಕರನ್ನು ಒಳಗೊಂಡ 50 ಜನರ ತಂಡ ರಾಜ್ಯದ ವಿವಿಧ ಭಾಗಗಳಲ್ಲಿ ಜೆಡಿಎಸ್‌ ಪರ ಪ್ರಚಾರ ಮಾಡಲು ಪಕ್ಷದ ನಿರ್ಧರಿಸಿದೆ.

brs leaders to campaign for jds in karnataka ash

ಹೈದರಾಬಾದ್‌ (ಮಾರ್ಚ್‌ 9, 2023): ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಅವರ ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷ, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳ ಪರ ಪ್ರಚಾರ ನಡೆಸಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರಸ್‌ ಮತ್ತು ಜೆಡಿಎಸ್‌ ನಡುವೆ ತ್ರಿಕೋನ ಸಮರ ಏರ್ಪಟ್ಟಿದೆಯಾದರೂ, ಈ ಚುನಾವಣೆಯಲ್ಲಿ ಪ್ರಚಾರದಲ್ಲಿ ಭಾಗಿಯಾಗುವ ಮೂಲಕ, ಅದನ್ನು ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮುವ ತನ್ನು ಕನಸನ್ನು ನನಸಾಗಿಸುವ ವೇದಿಕೆಯಾಗಿ ಬಳಸಿಕೊಳ್ಳಲು ಬಿಆರ್‌ಎಸ್‌ ನಿರ್ಧರಿಸಿದೆ. 

ಈ ಕಾರಣಕ್ಕಾಗಿಯೇ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections) ದಿನಾಂಕ ಪ್ರಕಟವಾಗುತ್ತಲೇ, ಬಿಆರ್‌ಎಸ್‌ನ (BRS) ಸಂಸದರು, ಸಚಿವರು, ಶಾಸಕರು, ಹಿರಿಯ ನಾಯಕರನ್ನು ಒಳಗೊಂಡ 50 ಜನರ ತಂಡ ರಾಜ್ಯದ ವಿವಿಧ ಭಾಗಗಳಲ್ಲಿ ಜೆಡಿಎಸ್‌ ಪರ ಪ್ರಚಾರ ಮಾಡಲು ಪಕ್ಷದ ನಿರ್ಧರಿಸಿದೆ. ಈ ಪ್ರಚಾರದಲ್ಲಿ ಸ್ವತಃ ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ (K Chandrasekhar Rao) ಭಾಗಿಯಾಗುವ ಕುರಿತು ಇನ್ನೂ ಯಾವುದೇ ನಿರ್ಧಾರ ಹೊರಬಿದ್ದಿಲ್ಲ.

ಇದನ್ನು ಓದಿ: Telangana ಶಾಸಕರಿಗೆ ಹಣದ ಆಮಿಷ ಆರೋಪ: ಪ್ರಧಾನಿ ಮೋದಿ ವಿರುದ್ಧ ಕೆಸಿಆರ್‌ ವಾಗ್ದಾಳಿ

ತಮ್ಮ ಬಿಆರ್‌ಎಸ್‌ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿಸುವ ಗುರಿ ಹೊಂದಿರುವ ಚಂದ್ರಶೇಖರ್‌ ರಾವ್‌, ಇದಕ್ಕಾಗಿ ಜೆಡಿಎಸ್‌ ಬೆಂಬಲ ಯಾಚಿಸಿದ್ದಾರೆ. ಇದಕ್ಕೆ ಪೂರಕವಾಗಿ ಬಿಆರ್‌ಆರ್‌ ಆಯೋಜಿಸಿದ್ದ ಹಲವು ಕಾರ್ಯಕ್ರಮಗಳಲ್ಲಿ ಜೆಡಿಎಸ್‌ (JDS) ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (H.D. Kumaraswamy) ಕೂಡಾ ಭಾಗಿಯಾಗಿದ್ದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕರ್ನಾಟಕದಲ್ಲಿ (Karnataka) ಜೆಡಿಎಸ್‌ ಜೊತೆ ಮೈತ್ರಿಕೊಂಡು ಕೆಲ ಸ್ಥಾನಗಳಲ್ಲಿ ಸ್ಪರ್ಧಿಸುವ ಇರಾದೆಯನ್ನೂ ಬಿಆರ್‌ಎಸ್‌ ಹೊಂದಿದೆ ಎನ್ನಲಾಗಿದೆ.

ಇದನ್ನೂ ಓದಿ: ದೇಶದಲ್ಲಿ ಹೊಸ ರಾಷ್ಟ್ರೀಯ ಪಕ್ಷ ‘BRS’ ಉದಯ: ತೆಲಂಗಾಣ ಸಿಎಂ KCR ಜತೆ ಮಾಜಿ ಸಿಎಂ ಎಚ್‌ಡಿಕೆ ಭಾಗಿ..!

Latest Videos
Follow Us:
Download App:
  • android
  • ios