ರಾಯಚೂರಿನಿಂದ ರಾಮನಗರವರೆಗೆ ಬಿಜೆಪಿ Jana Sankalpa Yatre ಶುರು
- ಬಿಜೆಪಿ ಯಾತ್ರೆ: ರಾಯಚೂರಿನಿಂದ ರಾಮನಗರವರೆಗೆ
- ವಿವಿಧ ಕ್ಷೇತ್ರ, ಜಿಲ್ಲೆಗಳಲ್ಲಿ ಪಕ್ಷದ ಬೇರೆ ಬೇರೆ ಘಟಕಗಳ ಸಮಾವೇಶ
- 50 ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮ
ಬೆಂಗಳೂರು (ಅ.11) : ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೈಗೊಂಡಿರುವ ಜನಸಂಕಲ್ಪ ಯಾತ್ರೆಗೆ ಮಂಗಳವಾರ ಚಾಲನೆ ಸಿಗಲಿದೆ. ರಾಯಚೂರು ಜಿಲ್ಲೆಯಿಂದ ಪ್ರಾರಂಭವಾಗುವ ಯಾತ್ರೆಯು ಡಿ.25ರಂದು ರಾಮನಗರ ಜಿಲ್ಲೆಯಲ್ಲಿ ಮುಕ್ತಾಯವಾಗಲಿದೆ.
ಯಾವ ಸರ್ಕಾರ ಬಂದ್ರೂ ರಾಯಚೂರಿನ ಜ್ವಲಂತ ಸಮಸ್ಯೆಗಳಿಗೆ ಸಿಗದ ಪರಿಹಾರ..!
ಮೊದಲಿಗೆ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಯಾತ್ರೆಯು ಪ್ರಾರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಯಚೂರು ಗ್ರಾಮೀಣ ಕ್ಷೇತ್ರ ಮತ್ತು ಮಧ್ಯಾಹ್ನ 3 ಗಂಟೆಗೆ ಮಸ್ಕಿಯಲ್ಲಿ ಎಸ್‌ಟಿ ಸಭೆ ನಡೆಯಲಿದೆ. ಅ.12ರಂದು ಕೊಪ್ಪಳ ಜಿಲ್ಲೆ ಕುಷ್ಠಗಿ, ವಿಜಯನಗರದಲ್ಲಿ ಸಾಮಾನ್ಯ ಸಭೆ ಜರುಗಲಿದೆ. ಅ.13ರಂದು ವಿಜಯನಗರ ಜಿಲ್ಲೆ ಹೂವಿನಹಡಗಲಿಯಲ್ಲಿ ಎಸ್‌ಸಿ, ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ಎಸ್‌ಟಿ ಸಭೆ ನಡೆಯಲಿದೆ. ಅ.16ರಂದು ಮೈಸೂರಿನಲ್ಲಿ ಎಸ್‌ಸಿ ಮೋರ್ಚಾದ ಸಮಾವೇಶ ನಡೆಯಲಿದೆ.
ಆ.18ರಂದು ಬೀದರ್ ಜಿಲ್ಲೆಯ ಹುಮನಾಬಾದ್‌ನಲ್ಲಿ ಸಾಮಾನ್ಯ, ಔರಾದ್‌ನಲ್ಲಿ ಎಸ್‌ಸಿ ಸಭೆ ನಡೆಯಲಿದೆ. ಅ.19ರಂದು ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಎಸ್‌ಟಿ, ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಸಾಮಾನ್ಯ, ಅ.23ರಂದು ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಎಸ್‌ಸಿ, ಅಳಂದದಲ್ಲಿ ಸಾಮಾನ್ಯ ವರ್ಗದ ಸಭೆ ನಡೆಯಲಿದೆ. ಅ.30ರಂದು ಕಲಬುರಗಿಯಲ್ಲಿ ಒಬಿಸಿ ಮೋರ್ಚಾದ ಸಮಾವೇಶ ಜರುಗಲಿದೆ. ನ.2ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಸಾಮಾನ್ಯ, ರಾಯಭಾಗ್‌ನಲ್ಲಿ ಎಸ್‌ಸಿ., ನ.6ರಂದು ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಎಸ್‌ಸಿ, ಧಾರವಾಡ ಜಿಲ್ಲೆಯ ಕುದಗೋಳ್‌ನಲ್ಲಿ ಸಾಮಾನ್ಯ, ನ.8ರಂದು ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ಬ್ಯಾಡಗಿಯಲ್ಲಿ ಸಾಮಾನ್ಯ, ನ.9ರಂದು ಬೆಳಗಾವಿ ಜಿಲ್ಲೆಯ ಬೆಳಗಾವಿ ಉತ್ತರ ಮತ್ತು ಹಳಿಯಾಳದಲ್ಲಿ ಸಾಮಾನ್ಯ ಸಭೆ ನಡೆಯಲಿದೆ. ನ.13ರಂದು ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.
ನ.15ರಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಮತ್ತು ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಸಾಮಾನ್ಯ, ನ.16ರಂದು ಉಡುಪಿ ಜಿಲ್ಲೆಯ ಬೈಂದೂರು ಮತ್ತು ಕಾಪುವಿನಲ್ಲಿ ಸಾಮಾನ್ಯ, ನ.20ರಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಸಾಮಾನ್ಯ, ನ.22ರಂದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಎಸ್‌ಟಿ, ಹರಿಹರದಲ್ಲಿ ಸಾಮಾನ್ಯ, ನ.23ರಂದು ತುಮಕೂರು ಜಿಲ್ಲೆ ಶಿರಾದಲ್ಲಿ ಸಾಮಾನ್ಯ ವರ್ಗದ ಸಭೆ ನಡೆಯಲಿದೆ. ನ.27ರಂದು ಶಿವಮೊಗ್ಗದಲ್ಲಿ ಯುವ ಮೋರ್ಚಾ ಸಮಾವೇಶ ಜರುಗಲಿದೆ. ನ.29ರಂದು ತುಮಕೂರು ನಗರ ಮತ್ತು ತುರುವೇಕೆರೆಯಲ್ಲಿ ಸಾಮಾನ್ಯ, ನ.30ರಂದು ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಎಸ್‌ಸಿ, ಮಾಲೂರಿನಲ್ಲಿ ಸಾಮಾನ್ಯ, ಡಿ.4ರಂದು ಬೆಂಗಳೂರು ನಗರದ ಬ್ಯಾಟರಾನಪುರದಲ್ಲಿ ಸಾಮಾನ್ಯ ಮತ್ತು ಕೋಲಾರ ಜಿಲ್ಲೆಯ ಗೌರಿಬಿದನೂರಿನಲ್ಲಿ ಸಾಮಾನ್ಯ, ಡಿ.7ರಂದು ಬೆಂಗಳೂರಿನ ಗಾಂಧಿನಗರ ಮತ್ತು ಬೆಂಗಳೂರು ದಕ್ಷಿಣದಲ್ಲಿ ಸಾಮಾನ್ಯ, ಅನೇಕಲ್‌ನಲ್ಲಿ ಎಸ್‌ಸಿ ಸಭೆ ನಡೆಸಲು ನಿರ್ಣಯಿಸಲಾಗಿದೆ. ಡಿ.11ರಂದು ಬಳ್ಳಾರಿಯಲ್ಲಿ ಎಸ್‌ಟಿ ಮೋರ್ಚಾದ ಸಮಾವೇಶ ನಡೆಯಲಿದೆ.
ದೇಶದಲ್ಲಿ ರಾಹುಲ್, ರಾಜ್ಯದಲ್ಲಿ ನನ್ನನ್ನು ಕಂಡ್ರೆ ಬಿಜೆಪಿಗೆ ಭಯ: ಸಿದ್ದರಾಮಯ್ಯ
ಡಿ.11ರಂದು ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಸಾಮಾನ್ಯ, ದೇವರಹಿಪ್ಪರಗಿಯಲ್ಲಿ ಸಾಮಾನ್ಯ, ಡಿ.13ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ತೇರದಾಳದಲ್ಲಿ ಸಾಮಾನ್ಯ, ಡಿ.14ರಂದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಸಾಮಾನ್ಯ, ಸಕಲೇಶಪುರದಲ್ಲಿ ಎಸ್‌ಸಿ, ಡಿ.18ರಂದು ಮೈಸೂರು ಜಿಲ್ಲೆಯ ಹುಣಸೂರು ಮತ್ತು ಮೈಸೂರು ನಗರದಲ್ಲಿ ಸಾಮಾನ್ಯ, ಡಿ.20ರಂದು ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ಮೇಲುಕೋಟೆಯಲ್ಲಿ ಸಾಮಾನ್ಯ, ಡಿ.21ರಂದು ಚಾಮರಾಜ ನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಎಸ್‌ಸಿ, ಚಾಮರಾಜನಗರದಲ್ಲಿ ಸಾಮಾನ್ಯ, ಡಿ.25ರಂದು ರಾಮನಗರ ಜಿಲ್ಲೆ ಮಾಗಡಿಯಲ್ಲಿ ಸಾಮಾನ್ಯ ಸಭೆ ನಡೆಯಲಿದೆ. ಅದೇ ದಿನ ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಅಲ್ಲದೇ, ಜ.8ರಂದು ವಿಜಯಪುರದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ಸಮಾವೇಶ ಜರುಗಲಿದೆ.