ದಾವಣಗೆರೆ, (ಫೆ.24):  ದಾವಣಗೆರೆ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಭರ್ಜರಿ 
ಗೆಲುವು ಸಾಧಿಸಿದೆ.

ಮೇಯರ್ ಆಗಿ ಎಸ್. ಟಿ. ವೀರೇಶ್ ಹಾಗೂ ಉಪ ಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾದರು. ಬುಧವಾರ ದಾವಣಗೆರೆಯ ನೂತನ ಮೇಯರ್ ಆಯ್ಕೆಗೆ ಚುನಾವಣೆ ನಡೆದಿದ್ದು, ಬಿಜೆಪಿ 29 ಮತಗಳನ್ನು ಪಡೆಯುವ ಮೂಲಕ ದಾವಣಗೆರೆ ಪಾಲಿಕೆ ಅಧಿಕಾರ ಹಿಡಿದಿದೆ. 

ಮೈಸೂರು ಮೇಯರ್ ಪಟ್ಟ ಜೆಡಿಎಸ್‌ಗೆ, ಆದ್ರೂ ಕುಮಾರಸ್ವಾಮಿಗೆ ಭಾರೀ ಮುಖಭಂಗ

ಕಾಂಗ್ರೆಸ್ 22 ಮತಗಳನ್ನು ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದೆ. ಈ ಮೂಲಕ 7 ಮತಗಳ ಅಂತರದಲ್ಲಿ ಬಿಜೆಪಿ ಮೇಯರ್, ಉಪಮೇಯರ್ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ಬಿಜೆಪಿಯಿಂದ ಸಚಿವ ಆರ್. ಶಂಕರ್, ಸಂಸದ ಜಿ. ಎಂ. ಸಿದ್ದೇಶ್ವರ್, ಚಿದಾನಂದಗೌಡ ಸೇರಿದಂತೆ 29 ಸದಸ್ಯರು ಚುನಾವಣೆಯಲ್ಲಿ ಭಾಗಿಯಾದರು. ಕಾಂಗ್ರೆಸ್‌ನ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮೂವರು ಎಂಎಲ್‌ಸಿಗಳಾದ ಕೆ. ಸಿ. ಕೊಂಡಯ್ಯ, ರಘು ಆಚಾರ್, ಯು. ಬಿ. ವೆಂಕಟೇಶ್ ಗೈರಾದರು.

ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಮನಸ್ಸು ಮಾಡದಿದ್ದರಿಂದ ಬಿಜೆಪಿ ಸರಳವಾಗಿ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಯ್ತು.