Asianet Suvarna News Asianet Suvarna News

ಕಲಬುರಗಿಯಲ್ಲಿ ಬಿಜೆಪಿ ಹೊಸ ಇತಿಹಾಸ: ವಿಜಯೇಂದ್ರ

ವಿಧಾನಸಭೆ ಉಪಚುನಾವಣೆ ಗೆಲುವುಗಳ ರುವಾರಿ ಎಂದೇ ಬಿಂಬಿತರಾಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದೀಗ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಅಖಾಡ ಪ್ರವೇಶಿಸಿದ್ದಾರೆ. ಇವರು ಕಾಲಿಡುತ್ತಿದ್ದಂತೆಯೇ ಪಾಲಿಕೆ ಅಂಗಳದಲ್ಲಿ ರಾಜಕೀಯ ರಂಗೇರಿದೆ. ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿರುವ ವಿಜಯೇಂದ್ರ  ಮಾತನಾಡಿ ಕಲಬುರಗಿಯಲ್ಲಿ ಕಮಲ ಅರಳೋದು ನಿಶ್ಚಿತ ಎಂದಿದ್ದಾರೆ.

BJP will create history in kalaburagi says by vijayendra snr
Author
Bengaluru, First Published Aug 31, 2021, 10:40 AM IST | Last Updated Aug 31, 2021, 10:40 AM IST

ವಿಶೇಷ ಸಂದರ್ಶನ :  ಶೇಷಮೂರ್ತಿ ಅವಧಾನಿ

ವಿಧಾನಸಭೆ ಉಪಚುನಾವಣೆ ಗೆಲುವುಗಳ ರುವಾರಿ ಎಂದೇ ಬಿಂಬಿತರಾಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದೀಗ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಅಖಾಡ ಪ್ರವೇಶಿಸಿದ್ದಾರೆ. ಇವರು ಕಾಲಿಡುತ್ತಿದ್ದಂತೆಯೇ ಪಾಲಿಕೆ ಅಂಗಳದಲ್ಲಿ ರಾಜಕೀಯ ರಂಗೇರಿದೆ. ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿರುವ ವಿಜಯೇಂದ್ರ  ಮಾತನಾಡಿ ಕಲಬುರಗಿಯಲ್ಲಿ ಕಮಲ ಅರಳೋದು ನಿಶ್ಚಿತ ಎಂದಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಬಗ್ಗೆ ಏನಂತೀರಿ?

ನಗರ ಪ್ರದೇಶಗಳ ಪ್ರಗತಿಗೆ ಬಿಜೆಪಿ ತೋರಿದಷ್ಟುಆಸಕ್ತಿ ಬೇರಾರೂ ತೋರಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರವಿರುವುದರಿಂದ ಪ್ರಗತಿ ಬಯಸುವ ನಗರ ಮತದಾರರು ಬಿಜೆಪಿಗೆ ಬೆಂಬಲಿಸೋದು ನಿಶ್ಚಿತ. ಕಲಬುರಗಿಯಲ್ಲಿ 6 ವಾರ್ಡ್‌ಗಳಲ್ಲಿ ನಾನೇ ರೋಡ್‌ ಶೋ ಮಾಡಿರುವೆ. ಅಲ್ಲಿ ಕಂಡುಬಂದ ಜನ ಬೆಂಬಲ ಅಭೂತಪೂರ್ವವಾಗಿತ್ತು.

ಬಿಎಸ್‌ವೈ, ವಿಜಯೇಂದ್ರ ಬಗ್ಗೆ ದಿಲ್ಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮಾತು

ಪಾಲಿಕೆ ಕಣದಲ್ಲಿ ನಿಮ್ಮ ಪ್ರಚಾರದ ಮುಖ್ಯ ಅಂಶಗಳು ಯಾವುವು?

ಬಿಜೆಪಿ ಸರ್ಕಾರ ಇದ್ದಾಗೆಲ್ಲಾ ಕಲಬುರಗಿ ಪ್ರಗತಿಗೆ ಆದ್ಯತೆ ನೀಡಲಾಗಿದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಂತೂ ನಗರಕ್ಕೆ ನೀಡಿರುವ 200 ಕೋಟಿ ರು. ನಗರೋತ್ಥಾನ ನಿಧಿಯಲ್ಲೇ ಅಲ್ಲವೆ ಇಲ್ಲಿ ಮೂಲ ಸವಲತ್ತು ಮೇಲೆದ್ದಿದ್ದು? ಕಾಂಗ್ರೆಸ್‌ನ ಘಟಾನುಘಟಿಗಳಿಲ್ಲಿದ್ದರೂ, ಸಿಎಂ, ಕೇಂದ್ರ ಸಚಿವರಾಗಿದ್ದರೂ ಕಲಬುರಗಿ ಹಾಳು ಕೊಂಪೆಯಾಗಿತ್ತು. ಅದನ್ನ ಜನವಾಸಯೌಗ್ಯ ನಗರವಾಗಿಸಿದ್ದೇ ಬಿಜೆಪಿಯಲ್ಲವೆ? ಯಡಿಯೂರಪ್ಪ ಸರ್ಕಾರದಲ್ಲಿ ಇಲ್ಲಿ ಆಗಿರುವ ಕೆಲಸಗಳೇ ನಮಗೆ ಗೆಲುವಿನ ಶ್ರೀರಕ್ಷೆಯಾಗಲಿವೆ. ಇನ್ನು ಪಕ್ಷದ ಸಂಘಟನೆ ಇಲ್ಲಿ ಗಟ್ಟಿಯಾಗಿರುವುದೂ ಗೆಲುವಿಗೆ ವರದಾನ.

ಕಲಬುರಗಿಗೆ ಬಿಜೆಪಿ ಕೊಡುಗೆ ಏನೂ ಇಲ್ಲವೆಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರಲ್ಲ?

ಬಿಜೆಪಿ ಬಗ್ಗೆ ಕಾಂಗ್ರೆಸ್‌ ಏನೇ ಹೇಳಿದರೂ ಕೂಡಾ ನಮ್ಮ ಪಕ್ಷದತ್ತ ಬೆರಳು ಮಾಡಲು ಕಾಂಗ್ರೆಸ್‌ ನೈತಿಕತೆ ಉಳಿಸಿಕೊಂಡಿಲ್ಲ, 5 ದಶಕದ ಆಡಳಿತದಲ್ಲಿ ಕಾಂಗ್ರೆಸ್‌ ರಾಜ್ಯಕ್ಕೆ, ಕಲಬುರಗಿಗೆ ಏನು ಕೊಟ್ಟಿದೆ? ಅಭಿವೃದ್ಧಿ ಮಾಡೋದಿಲ್ಲ, ಮಾಡಿದವರ ಬಗ್ಗೆ ಮಾತನಾಡುವ ಯೋಗ್ಯತೆಯೂ ಇಲ್ಲ. ಕಾಂಗ್ರೆಸ್‌ ಯೋಗ್ಯತೆ ಏನು ಅನ್ನೋದು ಜನತೆಗೆ ಗೊತ್ತಿದೆ.

ಕಲಬುರಗಿಯಲ್ಲಿ 47 ಸ್ಥಾನಗಳಲ್ಲಿ ಮಾತ್ರ ಬಿಜೆಪಿ ಕಣದಲ್ಲಿದೆಯಲ್ಲ? ಎಲ್ಲ 55 ಸ್ಥಾನದಲ್ಲೇಕೆ ಸ್ಪರ್ಧಿಸಲಿಲ್ಲ?

ಅದೆಲ್ಲ ನಮ್ಮ ಪಕ್ಷದ ಚುನಾವಣೆ ತಂತ್ರಗಾರಿಕೆ. ನಾವು ಸ್ಪರ್ಧಿಸಿರುವ ಎಲ್ಲಾ 48 ಸ್ಥಾನಗಳಲ್ಲಿ ನಾವು ಕೊನೆ ಪಕ್ಷ 40 ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲ್ಲುವ ವಿಶ್ವಾಸವಿದೆ. ರಾಜಕೀಯವಾಗಿ ನಾವು ವಾರ್ಡ್‌ಗಳಲ್ಲಿ ರಣತಂತ್ರ ಮಾಡುತ್ತೇವೆ. ಕಲಬುರಗಿಯಲ್ಲೂ ಪಕ್ಷದ ಮುಖಂಡರು ಅದನ್ನೇ ಮಾಡಿದ್ದಾರೆ.

ರಾಜ್ಯ ಸಂಪುಟದಲ್ಲಿ ಕಲಬುರಗಿಯವರಿಗೆ ಸಚಿವ ಸ್ಥಾನ ಸಿಕ್ಕಿಲ್ಲವೆಂಬ ಅತೃಪ್ತಿ ಈ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದೆ?

ಹಾಗೇನಿಲ್ಲ, ಕಲಬುರಗಿಗೆ ಪ್ರಾತಿನಿಧ್ಯ ಸಿಗಬೇಕು ಎಂಬುದು ನಮ್ಮ ಇಚ್ಛೆಯೂ ಹೌದು. ಆದರೆ ಈ ಸರ್ಕಾರ ರಚನೆಯೇ ವಿಚಿತ್ರ ಸಂದರ್ಭವಾಗಿದ್ದರಿಂದ ಎಲ್ಲರೂ ಅದನ್ನರಿತು ನಡೆಯಬೇಕಿದೆ. ನಮ್ಮನ್ನು ಬೆಂಬಲಿಸಿದವರಿಗೆ ನಾವು ಆದ್ಯತೆ ನೀಡಬೇಕಾಗಿದೆ. ಇನ್ನೂ 4 ಸ್ಥಾನಗಳಿವೆ. ಆಗ ಕಲಬುರಗಿಗೂ ನ್ಯಾಯ ದೊರಕುವ ವಿಶ್ವಾಸ ನನಗಿದೆ.

ಬಿ.ವೈ.ವಿಜಯೇಂದ್ರ

ಕಾಂಗ್ರೆಸ್‌ನ ಘಟಾನುಘಟಿಗಳಿಲ್ಲಿದ್ದರೂ, ಸಿಎಂ, ಕೇಂದ್ರ ಸಚಿವರಾಗಿದ್ದರೂ ಕಲಬುರಗಿ ಹಾಳು ಕೊಂಪೆಯಾಗಿತ್ತು. ಅದನ್ನ ಜನವಾಸಯೌಗ್ಯ ನಗರವಾಗಿಸಿದ್ದೇ ಬಿಜೆಪಿಯಲ್ಲವೆ? ಯಡಿಯೂರಪ್ಪ ಸರ್ಕಾರದಲ್ಲಿ ಇಲ್ಲಿ ಆಗಿರುವ ಕೆಲಸಗಳೇ ನಮಗೆ ಗೆಲುವಿನ ಶ್ರೀರಕ್ಷೆಯಾಗಲಿವೆ.

Latest Videos
Follow Us:
Download App:
  • android
  • ios