*  ಮತ್ತೊಮ್ಮೆ ಎಂಟಿಬಿ ನಾಗರಾಜ್‌ ಅಭಿಯಾನಕ್ಕೆ ಸೂಚನೆ*  ಮೋದಿಯವರ ಕೈಬಲಪಡಿಸಲು ರಾಜ್ಯದಲ್ಲಿ ಬಿಜೆಪಿ ಅ​ಧಿಕಾರಕ್ಕೆ ಬರಬೇಕು*  ಸಮಗ್ರ ಅಭಿವೃದ್ಧಿಯತ್ತ ಹೊಸಕೋಟೆ ದಾಪುಗಾಲು ಹಾಕುತ್ತಿದೆ 

ಹೊಸಕೋಟೆ(ಜೂ.08):  ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರ ಬಡವರ ಅಭಿವೃದ್ಧಿ ಪರ ಆಡಳಿತ ನೀಡುವ ಮೂಲಕ ಹಲವು ಹೊಸ ಯೋಜನೆ ಜಾರಿಗೆ ತಂದಿದೆ. ಈ ಹಿನ್ನೆಲೆ 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಅ​ಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಬಿಜೆಪಿ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ಮೋದಿಯವರ ಕನಸಾದ ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮೋದಿಯವರ ಕೈಬಲಪಡಿಸಲು ರಾಜ್ಯದಲ್ಲಿ ಬಿಜೆಪಿ ಅ​ಧಿಕಾರಕ್ಕೆ ಬರಬೇಕು. ಬರಲಿದೆ ಕೂಡ. ಆದ್ದರಿಂದ ಕಾರ್ಯಕರ್ತರು ವಿಶ್ರಮಿಸದೆ ಬಿಜೆಪಿ ಅ​ಧಿಕಾರಕ್ಕೆ ಬರುವವರೆಗೂ ಕೆಲಸ ಮಾಡಬೇಕು. ಹೊಸಕೋಟೆಯಲ್ಲಿ ಮತ್ತೊಮ್ಮೆ ಎಂಟಿಬಿ ಎಂಬ ಅಭಿಯಾನ ಪ್ರಾರಂಭಿಸಿ ಕೆಲಸ ಮಾಡಿ ಎಂದರು. ಈ ಬಾರಿಯ ಆಯವ್ಯಯದಲ್ಲಿ ಎಲೆಮಲ್ಲಪ್ಪನ ಕೆರೆ ಸಂಪೂರ್ಣ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಒದಗಿಸಿದೆ. ಹೊಸಕೋಟೆಗೆ ಕೆರೆ ತುಂಬಿಸುವ ಯೋಜನೆ ಹಾಗೂ ಕುಡಿವ ನೀರಿನ ಯೋಜನೆಗಳಿಗೆ ಈ ವರ್ಷದಲ್ಲಿ ಮಂಜೂರಾತಿಯನ್ನು ನೀಡಲಾಗುವುದು. ಆನಗೊಂಡ ಹೋಬಳಿಯಲ್ಲಿ 39 ಕೆರೆ ತುಂಬುವ ಯೋಜನೆಯ ಕಾಮಗಾರಿ ನಡೆದಿದೆ. ಅದಕ್ಕೆ ಹೆಚ್ಚುವರಿಯಾಗಿ 50 ಕೋಟಿ ರು. ಒದಗಿಸಲಾಗಿದೆ. ಆದಷ್ಟುತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಸಮಗ್ರ ಅಭಿವೃದ್ಧಿಯತ್ತ ಹೊಸಕೋಟೆ ದಾಪುಗಾಲು ಹಾಕುತ್ತಿದೆ ಎಂದರು.

ಬೊಮ್ಮಾಯಿ ನೇಮಕಗೊಂಡ ಮುಖ್ಯಮಂತ್ರಿ: ಸಿದ್ದರಾಮಯ್ಯ

ಸಚಿವ ಎಂಟಿಬಿ ನಾಗರಾಜ್‌ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ನನಗೆ ಹೊಸಕೋಟೆ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬಿಎಸ್‌ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಇದುವರೆಗೂ 250 ಕೋಟಿ ಅ​ಧಿಕ ಅನುದಾನ ನೀಡಿದ್ದಾರೆ. ಪ್ರಮುಖವಾಗಿ ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಯ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಅನುದಾನ ಬಿಡುಗಡೆ ಕೆಲಸ ಮಾಡಬೇಕು. ಅಲ್ಲದೆ ಕಾವೇರಿ ನೀರು, ಮೆಟ್ರೋ ಸಂಪರ್ಕ ನಗರಕ್ಕೆ ಕೊಡುವ ಕೆಲಸವನ್ನು ನಿಮ್ಮ ಅವ​ಯಲ್ಲಿ ಆಗಲೇಬೇಕು ಎಂದು ಮನವಿ ಮಾಡಿದರು.

ಸಚಿವರಾದ ಡಾ.ಕೆ.ಸುಧಾಕರ್‌, ಸಿಸಿ ಪಾಟೀಲ್‌, ಭೈರತಿ ಬಸವರಾಜ್‌, ಬಿಬಿಎಂಪಿ ಮಾಜಿ ಸದಸ್ಯ ನಿತೀಶ್‌ ಪುರುಷೋತ್ತಮ್‌, ನಗರ ಬಿಜೆಪಿ ಅಧ್ಯಕ್ಷ ಡಾ.ಸಿ.ಜಯರಾಜ್‌, ತಾಲೂಕು ಅಧ್ಯಕ್ಷ ಸತೀಶ್‌, ನಗರಸಭೆ ಅಧ್ಯಕ್ಷ ಡಿ.ಕೆ.ನಾಗರಾಜ್‌ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.