ಬೆಂಗಳೂರು, (ಮೇ.28): ಕೆಲವರಿಗೆ ನನ್ನ ಮೇಲೆ ಹೆಚ್ಚು ಪ್ರೀತಿ ಎಂದು ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ನಾಯಕರ ಮಕ್ಕಳು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡ್ತಿದ್ದಾರೆ ಅನ್ನೋ ಸಿ.ಪಿ. ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ.. ಅವರದ್ದು 30-40 ವರ್ಷದ ಹೋರಾಟ, ಕಾರ್ಯಕರ್ತರ ಪರಿಶ್ರಮದಿಂದ ಮುಖ್ಯಮಂತ್ರಿಯಾಗಿದ್ದಾರೆ. ಅವರ ಅನುಭವದ ಮುಂದೆ ನಮ್ಮದು ಏನೂ ಇಲ್ಲ. ರಾಜಕೀಯ ಕಾರಣಕ್ಕೆ ಈ ರೀತಿ ಹೇಳುತ್ತಿದ್ದಾರೆ ಎಂದು ದೂರಿದರು.

ದಿಲ್ಲಿಗೆ ಹೋದವರಿಗೆ ಸೂಕ್ತ ಉತ್ತರ ಕೊಟ್ಟಿದ್ದಾರೆ: ಬಿಎಸ್‌ವೈ

ನಾನು ಉಪಾಧ್ಯಕ್ಷನಿದ್ದೇನೆ. ನನ್ನದೇ ಆದ ಸೇವೆಗಳನ್ನ ಮಾಡುತ್ತಿದ್ದೇವೆ. ಅಶೋಕ್ ಸರ್ ಹೇಳಿದ್ರು.. ಕೆಲವರಿಗೆ ಮಾತನಾಡುವ ಚಟ ಅಂತ. ನಾನು ಹೇಳ್ತೀನಿ, ಕೆಲವರಿಗೆ ನನ್ನ ಮೇಲೆ ಹೆಚ್ಚು ಪ್ರೀತಿ. ನನ್ನ ಕಾರ್ಯಚಟುವಟಿಕೆಯಲ್ಲಿ ನಾನು ಕೆಲಸ ಮಾಡುತ್ತೇನೆ ಎಂದರು.

ದೆಹಲಿ-ಬೆಂಗಳೂರು, ಬೆಂಗಳೂರು- ದೆಹಲಿ ಮೇಲಿಂದ ಮೇಲೆ ಪ್ರಯಾಣ ಮಾಡಿ, ರಾಜ್ಯ ನಾಯಕರ ಪಾಲಿಗೆ ಪ್ರವಾಸೋದ್ಯಮ ಸಚಿವ, ಸೈನಿಕ, ಸಿ.ಪಿ‌. ಯೋಗೇಶ್ವರ್ ಖಳನಾಯಕರಾದ್ರಾ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.